Home ಜಿಲ್ಲೆಜನರ ಸಮಸ್ಯೆಗಳಿಗೆ ಪ್ರಜಾಸೇವಾ ಆಂದೋಲನ ಸಭೆ ಉತ್ತಮ ವೇದಿಕೆ

ಜನರ ಸಮಸ್ಯೆಗಳಿಗೆ ಪ್ರಜಾಸೇವಾ ಆಂದೋಲನ ಸಭೆ ಉತ್ತಮ ವೇದಿಕೆ

ಸೂಲಿಬೆಲೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಇಒ ಮುನಿಯಪ್ಪ ಹೇಳಿಕೆ

by Editor

ಸೂಲಿಬೆಲೆ : ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ನೀಡಲು ಪ್ರಜಾಸೇವಾ ಆಂದೋಲನ ಸಭೆಗಳನ್ನು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು,ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು.ಜನರ ಸಮಸ್ಯೆ ಪರಿಹಾರಕ್ಕೆ ಇದು ಉತ್ತಮ ವೇದಿಕೆ ಎಂದು ಹೊಸಕೋಟೆ ತಾಲೂಕು ಪಂಚಾಯಿತಿ ಇಒ ಮುನಿಯಪ್ಪ ಹೇಳಿದರು

ಸೂಲಿಬೆಲೆ ಸಹಕಾರ ಸಂಘದ ಸಮುದಾಯ ಭವನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರು ನೀಡುವ ಪ್ರತಿ ಅರ್ಜಿಯನ್ನು ನೋಂದಾಯಿಸಿ ಅರ್ಜಿಯ ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಒಂದೊಮ್ಮೆ ಅರ್ಜಿಯ ಸಮಸ್ಯೆ ಸ್ಥಳದಲ್ಲಿಯೇ ಪರಿಹಾರ ಕಾಣದಿದ್ದರೆ ಸಿಮೀತ ಕಾಲಾವಕಾಶದಲ್ಲಿ ಅದಕ್ಕೆ ಪರಿಹಾರವನ್ನು ಇಲಾಖಾವಾರು ಕಲ್ಪಿಸಲಾಗುತ್ತದೆ. ಎಲ್ಲ ಇಲಾಖಾವಾರು ಅಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು,ಜನರ ತಮ್ಮ ಸಮಸ್ಯೆಗಳ ಬಗೆ ಅರ್ಜಿಗಳನ್ನು ಮುಕ್ತವಾಗಿ ನೀಡಿ ಪರಿಹಾರ ಕಂಡಕೊಳ್ಳಬೇಕು ಎಂದರು

ಯುವ ಮುಖಂಡ ಬಿ.ಜಿ ನಾರಾಯಣಗೌಡರು ಮಾತನಾಡಿ, ಜನರು ಸಮಯ ವ್ಯರ್ಥ ಮಾಡಿಕೊಂಡು ಅಧಿಕಾರಿಗಳ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಪಿಸಿ ಸ್ಥಳದಲ್ಲಿಯೇ ಅವರ ಸಮಸ್ಯೆಗೆ ಪರಿಹಾರ ನೀಡಲು ಪ್ರಜಾ ಸೇವಾ ಆಂದೋಲನ ಸಭೆ ಉತ್ತಮ ವೇದಿಕೆಯಾಗಿದೆ .ಮುಖ್ಯಮಂತ್ರಿಗಳು ಜನರ ಬಳಿಯೇ ಸರಕಾರವನ್ನು ತೆಗೆದುಕೊಂಡು ಹೋಗಬೇಕು ಎಂಬ ಹಿತದೃಷ್ಟಿಯಿಂದ ಪ್ರತಿ ಶನಿವಾರ ಈ ಸಭೆ ಆಯೋಜಿಸುತ್ತಿದ್ದು,ಜನರು ಉತ್ಸಹ ತೋರಿದ್ದಲ್ಲಿ ಮಾತ್ರ ಇಂಥ ಸಭೆಗಳು ಅರ್ಥಪೂರ್ಣವಾಗುತ್ತವೆ. ಜನ ಇಂಥ ಸಭೆಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ನಾನಾ ಕಾರಣಗಳಿಂದ ತಡೆಯಾಗಿದ್ದ ಇದರಲ್ಲಿ ಅರ್ಹತೆಯಿದ್ದ ೧೦೩೧ ಅರ್ಜಿಯನ್ನು ವಿಲೇ ಮಾಡಿರುವುದು ಸ್ವಾಗತರ್ಹವಾಗಿದೆ ಎಂದರು

ಯಾವ ಇಲಾಖೆಗೆ ಎಷ್ಟು ಅರ್ಜಿ
ಕಂದಾಯ ೭೦, ಸರ್ವೇ ೧೨, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೇ ೬, ಪಂಚಾಯಿತಿ ೨೧,ಆಹಾರ ೭, ಬೆಸ್ಕಾಂ, ಅರಣ್ಯ, ಸಮಾಜ ಕಲ್ಯಾಣ ಇಲಾಖೆ ತಲಾ ಒಂದೊ0ದು ಅರ್ಜಿ ಸೇರಿ ಒಟ್ಟು ೧೧೯ ಅರ್ಜಿಗಳು ಸಲ್ಲಿಕೆಯಾದವು.

ಸಭೆಯಲ್ಲಿ ಸೂಲಿಬೆಲೆ ಗ್ರಾಪಂ ಆಡಳಿತಾಧಿಕಾರಿ ಸುಬ್ರಮಣ್ಯ, ಪಶುಪಾಲನೆ ಸಹಾಯಕ ನಿರ್ದೇಶಕ ಮಂಜುನಾಥ್,ಆರೋಗ್ಯ ಇಲಾಖೆ ಟಿಹೆಚ್‌ಒ ವೀಣಾ, ಸಿಪಿಐ ರಾಜಣ್ಣ, ವೈದ್ಯಾಧಿಕಾರಿ ಕಿರಣ್, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಗ್ರಾಮಾಡಳಿತಾಧಿಕಾರಿ ಲಕ್ಷö್ಮಣ್
ಬಿಸನಾಳ್,ಚಕ್ರವರ್ತಿ,ರಫಿಕ್,ತಾಪಂ ಮಾಜಿ ಅಧ್ಯಕ್ಷ ಡಾ.ಡಿ.ಟಿ ವೆಂಕಟೇಶ್, ಸೂಲಿಬೆಲೆ ಗ್ರಾಪಂ ಪಿಡಿಒ ಮಂಜುನಾಥ್,ಕ0ಬಳೀಪುರ ಪಿಡಿಒ ಚೇತನ್,ಗಿಡ್ಡಪ್ಪನಹಳ್ಳಿ ಪಿಡಿಒ ವಿಜಯಕುಮಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣಕಾ ಪ್ರಸನ್ನ,ಆರ್‌ಎಫ್‌ಒ ಪುಷ್ಪಲತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Spread the love

You may also like

Leave a Comment

➤ ಜನರ ಸಮಸ್ಯೆಗಳಿಗೆ ಪ್ರಜಾಸೇವಾ ಆಂದೋಲನ ಸಭೆ ಉತ್ತಮ ವೇದಿಕೆ   ➤ ಆಧಿಶಕ್ತಿ ಸಂಸ್ಥಾನ ಮಠಕ್ಕೆ ೧೦ ಎಕರೆ ಜಮೀನು ಮಂಜೂರು ಮಾಡಲು ಸಿಎಂಗೆ ಮನವಿ   ➤ ಭಾನುವಾರವೂ ಬ್ಯಾಂಕ್ ಸೇವೆ ಲಭ್ಯ   ➤ ಕನಿಷ್ಟ ವೇತನ ಜಾರಿಗೊಳಿಸಲು ಸರಕಾರದ ಮೇಲೆ ಒತ್ತಡ ತನ್ನಿ   ➤ ೨೦೨೮ ರ ವೇಳೆಗೆ ಭಾರತವನ್ನು ನಶಾ ಮುಕ್ತ ದೇಶ ಮಾಡುವ ಗುರಿ