Home ರಾಜ್ಯರಾಜ್ಯದಲ್ಲಿದಲಿತರ ಮೇಲಿನ ದೌರ್ಜನ್ಯಕ್ಕೆ ಹೆಚ್ಚಳಕ್ಕೆ ಸರ್ಕಾರವೇ ಕಡಿವಾಣ ಹಾಕಲು ಒತ್ತಾಯ

ರಾಜ್ಯದಲ್ಲಿದಲಿತರ ಮೇಲಿನ ದೌರ್ಜನ್ಯಕ್ಕೆ ಹೆಚ್ಚಳಕ್ಕೆ ಸರ್ಕಾರವೇ ಕಡಿವಾಣ ಹಾಕಲು ಒತ್ತಾಯ

ಕಾಟಾಚಾರಕ್ಕೆ ಬರುವ ಸಮಾಜಕಲ್ಯಾಣ ಇಲಾಖೆ : ಡಿಎಸ್‌ಎಸ್‌ಕೆ ಮಂಜುನಾಥ್‌ ಅಣ್ಣಯ್ಯ ಆಕ್ರೋಶ

by Editor

ಹೊಸಕೋಟೆ : ರಾಜ್ಯದಲ್ಲಿದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸರ್ಕಾರಕಠಿಣಕ್ರಮ ಕೈಗೊಳ್ಳಬೇಕು ಎಂದು ದಲಿತ  ಸಂಘರ್ಷ ಸಮಿತಿಕರ್ನಾಟಕ ಬೆಂಗಳೂರು  ವಿಭಾಗೀಯ ಸಂಚಾಲಕ ಮಂಜುನಾಥ್‌ಅಣ್ಣಯ್ಯ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ೨,೫೦೦ಕ್ಕೂ ಹೆಚ್ಚು ದಲಿತದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ೧೯ ದಲಿತರ ಕೊಲೆಗಳು ನಡೆದಿವೆ ಎಂದು ಆರೋಪಿಸಿದರು.
ಮುಖ್ಯವಾಗಿರಾಯಚೂರುಜಿಲ್ಲೆಯಲ್ಲಿದಲಿತಯುವಕ ಬೂಮಾನಂದ ಸೇರಿದಂತೆ ಅಶ್ವಿನಿ ಎಂಬ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಹಾಗೂ ನಾಲ್ವರುದಲಿತರ ಕೊಲೆ ನಡೆದಿರುವುದುಆತಂಕಕಾರಿ ಬೆಳವಣಿಗೆಯಾಗಿದೆ. ಮಧುಗಿರಿತಾಲ್ಲೂಕಿನಲ್ಲಿಯೂ ನಾಲ್ಕು ಕೊಲೆ ಪ್ರಕರಣಗಳು ನಡೆದಿವೆ. ಇತ್ತೀಚೆಗೆಗಣೇಶ ವಿಸರ್ಜನೆ ವೇಳೆ ನೃತ್ಯ ಮಾಡಿದ ಎಂಬ ಕಾರಣಕ್ಕೆಯುವಕನಎದೆಗೆಕಲ್ಲುಎತ್ತಿಹಾಕಿ ಕೊಲೆ ಮಾಡಿರುವಘಟನೆ ನಡೆದಿರುವುದುಖಂಡನೀಯಎ0ದರು.
ಕನಕಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಗಣೇಶೋತ್ಸವದ ಸಂದರ್ಭದಲ್ಲಿದಲಿತರ ಮೇಲೆ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ. ದಲಿತ ಸಮುದಾಯಕ್ಕೆ ಸೇರಿದವರು ಗೃಹ ಸಚಿವರು ಹಾಗೂ ಸಮಾಜಕಲ್ಯಾಣ ಸಚಿವರಾಗಿರುವ ಸಂದರ್ಭದಲ್ಲಿಇ0ತಹ ಘಟನೆಗಳು ನಡೆಯುತ್ತಿರುವುದುದುರಂತಎ0ದು ಹೇಳಿದರು.
ಕಾಟಾಚಾರಕ್ಕೆ ಬರುವ ಸಮಾಜಕಲ್ಯಾಣ ಇಲಾಖೆ :ದಲಿತರ ಮೇಲೆನ ದೌರ್ಜನ್ಯ, ಕೊಲೆ ನಡೆದ ಸಂಧರ್ಭದಲ್ಲಿದಲಿತರ ಪರ ನಿಂತು ನ್ಯಾಯಕೊಡಿಸಬೇಕಾದ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ, ಸಚಿವರಾಗಲಿ, ಸಮುದಾಯದ ಶಾಸಕರುಗಳಾಗಲಿ ಕಾಟಾಚಾರಕ್ಕೆ ಭೇಟಿಕೊಟ್ಟು ಹೋಗುತ್ತಾರೆ. ವಿನಃ ನೊಂದದಲಿತರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತಿಲ್ಲ. ಎಂದು ಮಂಜುನಾಥ್‌ಅಣ್ಣಯ್ಯಅಸಮಾಧಾನ ಹೊರಹಾಕಿದರು.
ಮೌನ ವಹಿಸಿರುವುದೇಕೆ? : ರಾಜ್ಯದಲ್ಲಿಜಾತಿಆಧಾರಿತ ದೌರ್ಜನ್ಯಗಳು ನಡೆಯುತ್ತಿದ್ದರೂ ಪ್ರಗತಿಪರರು, ಬುದ್ಧಿಜೀವಿಗಳು ಹಾಗೂ ಹಿರಿಯದಲಿತ ನಾಯಕರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ದಲಿತರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಮನೆಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳ ವಿರುದ್ಧವೂಧ್ವನಿ ಎತ್ತಬೇಕುಎಂದು ಆಗ್ರಹಿಸಿದರು.
ದಲಿತರ ಪರ ಸರ್ಕಾರಎಂದು ಹೇಳಿಕೊಳ್ಳುವುದಷ್ಟೇ ಸಾಲದು. ದಲಿತರ ಮೇಲಿನ ದೌರ್ಜನ್ಯತಡೆಗೆ ಪರಿಣಾಮಕಾರಿಕ್ರಮ ಕೈಗೊಳ್ಳಬೇಕು. ನೈಜ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟಗಾರರು ಹಾಗೂ ಸಂಘಟನೆಗಳು ಒಗ್ಗಟ್ಟಾಗಿಧ್ವನಿ ಎತ್ತಬೇಕಿದೆಎಂದುಅವರು ಒತ್ತಾಯಿಸಿದರು.

Spread the love

You may also like

Leave a Comment

➤ ರಾಜ್ಯದಲ್ಲಿದಲಿತರ ಮೇಲಿನ ದೌರ್ಜನ್ಯಕ್ಕೆ ಹೆಚ್ಚಳಕ್ಕೆ ಸರ್ಕಾರವೇ ಕಡಿವಾಣ ಹಾಕಲು ಒತ್ತಾಯ   ➤ ಜನರ ಸಮಸ್ಯೆಗಳಿಗೆ ಪ್ರಜಾಸೇವಾ ಆಂದೋಲನ ಸಭೆ ಉತ್ತಮ ವೇದಿಕೆ   ➤ ಆಧಿಶಕ್ತಿ ಸಂಸ್ಥಾನ ಮಠಕ್ಕೆ ೧೦ ಎಕರೆ ಜಮೀನು ಮಂಜೂರು ಮಾಡಲು ಸಿಎಂಗೆ ಮನವಿ   ➤ ಭಾನುವಾರವೂ ಬ್ಯಾಂಕ್ ಸೇವೆ ಲಭ್ಯ   ➤ ಕನಿಷ್ಟ ವೇತನ ಜಾರಿಗೊಳಿಸಲು ಸರಕಾರದ ಮೇಲೆ ಒತ್ತಡ ತನ್ನಿ