
ಬೆಂಗಳೂರು ಗ್ರಾಮಾಂತರ : ಕಳೆದ ಕೆಲವು ವರ್ಷಗಳಿಂದ ನೆನಗುಂದಿಗೆ ಬಿದ್ದಿದ್ದ ಜಿಪಂ,ತಾಪ0 ಚುನಾವಣೆಗೆ ಅಂತೂ ಕಾಂಗ್ರೆಸ್ ಸರಕಾರ ಮಹೂರ್ತ ಫಿಕ್ಸ್ ಮಾಡಿದಂತೆ ಇದೆ.ಬುಧವಾರ ಸಂಜೆ ರಾಜ್ಯಾದ್ಯಂತ ಇರುವ ಜಿಪಂ,ತಾಪ0 ಚುನಾವಣೆಗೆ ಸ್ಪಧಿಸುವ ಅಭ್ಯರ್ಥಿಗಳ ಮೀಸಲಾತಿ ಅಧಿಸೂಚನೆ ಹೊರಡಿಸಿದೆ.
ತಾಪಂ ಸ್ಥಾನಗಳು
ನೆಲಮಂಗಲ ತಾಲೂಕಿನಲ್ಲಿ ಒಟ್ಟು ಸ್ಥಾನಗಳು ೧೮.ಇದರಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಸ್ಥಾನಗಳು ೯. ಅನುಸೂಚಿತ ಜಾತಿ ೫ ಸ್ಥಾನ.ಇದರಲ್ಲಿ ಮಹಿಳೆಯರಿಗೆ ೩ ಸ್ಥಾನ.ಅನುಸೂಚಿತ ಪಂಗಡ ಒಂದು ಸ್ಥಾನವಿದ್ದು,ಇದು ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ವರ್ಗ(ಅ) ೨ ಸ್ಥಾನಗಳಿದ್ದು,೧ ಮಹಿಳೆಗೆ ಮೀಸಲಿದೆ. ಹಿಂದುಳಿದ ವರ್ಗ(ಬ) ಒಂದು ಸ್ಥಾನವಿದ್ದು,ಆ ಒಂದು ಸ್ಥಾನವೂ ಮಹಿಳೆಗೆ ಮೀಸಲಿದೆ.ಇನ್ನೂ ಸಾಮಾನ್ಯ ೯ ಸ್ಥಾನಗಳಿದ್ದು,ಇದರಲ್ಲಿ ೩ ಸ್ಥಾನ ಮಹಿಳೆಯರಿಗೆ ಇದೆ.
ದೇವನಹಳ್ಳಿ ತಾಲೂಕಿನಲ್ಲಿ ೧೫ ಸ್ಥಾನಗಳಿದ್ದು,ಇದರಲ್ಲಿ ೮ ಮಹಿಳೆಯರಿಗೆ,ಅನುಸೂಚಿತ ಜಾತಿಗೆ ೪ ಸ್ಥಾನ,ಎರಡು ಮಹಿಳೆರಿಗೆ ಮೀಸಲಿದೆ.ಅನುಸೂಚಿರ ಪಂಗಡಕ್ಕೆ ೨ ಸ್ಥಾನವಿದ್ದು,ಒಂದು ಮಹಿಳೆಗೆ ಮೀಸಲಿದೆ. ಹಿಂದುಳಿದ ವರ್ಗ(ಅ) ೧ ಸ್ಥಾನವಿದ್ದು,ಅದು ಮಹಿಳೆಗೆ ಮೀಸಲಿದೆ.ಹಿಂದುಳಿದ ವರ್ಗ(ಬ)ಯಾವುದೇ ಸ್ಥಾನ ನೀಡಿಲ್ಲ.ಸಾಮಾನ್ಯ ೮ ಸ್ಥಾನಗಳಿದ್ದು,೪ ಮಹಿಳೆಗೆ ಮೀಸಲಿಟ್ಟಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ೨೦ ಸ್ಥಾನಗಳಿದ್ದ ಇದರಲ್ಲಿ ೧೦ ಸ್ಥಾನ ಮಹಿಳೆಯರಿಗೆ,ಅನುಸೂಚಿತ ಜಾತಿಗೆ ೫ ಸ್ಥಾನವಿದ್ದು,ಇದರಲ್ಲಿ ೩ ಮಹಿಳೆಯರಿಗೆ ಮೀಸಲಿಟ್ಟಿದೆ.ಅನುಸೂಚಿತ ಪಂಗಡಕ್ಕೆ ೧ ಸ್ಥಾನವಿದ್ದು,ಅದು ಮಹಿಳೆ ಪಾಲಾಗಿದೆ. ಹಿಂದುಳಿದ(ಅ) ವರ್ಗಕ್ಕೆ ೩ ಸ್ಥಾನವಿದ್ದು,೨ ಮಹಿಳೆಯರಿಗೆ ನೀಡಲಾಗಿದೆ.ಹಿಂದುಳಿದ ವರ್ಗ(ಬ) ೧ ಸ್ಥಾನವಿದೆ. ಸಾಮಾನ್ಯಕ್ಕೆ ೧೦ ಸ್ಥಾನವಿದ್ದು,೪ ಸ್ಥಾನ ಮಹಿಳೆಯರಿಗೆ ನೀಡಿದೆ.
ಹೊಸಕೋಟೆ ತಾಲೂಕಿನಲ್ಲಿ ೨೨ ಸ್ಥಾನಗಳಿದ್ದು ಇದರಲ್ಲಿ ೧೧ ಮಹಿಳೆಯರಿಗೆ ನೀಡಲಾಗಿದೆ. ಅನುಸೂಚಿತ ಜಾತಿಗೆ ೫ ಸ್ಥಾನವಿದ್ದು, ೩ ಸ್ಥಾನಗಳನ್ನು ಮಹಿಳೆಯರಿಗೆ,ಅನುಸೂಚಿತ ಪಂಗಡಕ್ಕೆ ೧ ಸ್ಥಾನವಿದ್ದು, ಅದು ಮಹಿಳೆ ಪಾಲಾಗಿದೆ. ಹಿಂದುಳಿದ ವರ್ಗ(ಅ)ಗೆ ೪ ಸ್ಥಾನವಿದ್ದು,೨ ಮಹಿಳೆಗೆ ಮೀಸಲಿಟ್ಟಿದೆ.ಹಿಂದುಳಿದ ವರ್ಗ(ಬ) ನಲ್ಲಿ ೧ ಸ್ಥಾನ ನೀಡಿದ್ದು,ಅದು ಮಹಿಳೆಗೆ ನೀಡಲಾಗಿದೆ. ಸಾಮಾನ್ಯ ೧೧ ಸ್ಥಾನವಿದ್ದು,೪ ಮಹಿಳೆಯರಿಗೆ ಮೀಸಲಿಟ್ಟಿದೆ.
ಜಿಪಂ ಮೀಸಲು ಸ್ಥಾನಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನಿಂದ ಜಿಲ್ಲಾ ಪಂಚಾಯಿತಿಗೆ ಒಟ್ಟು ೨೮ ಸ್ಥಾನಗಳಿದ್ದು,ಇದರಲ್ಲಿ ೧೪ ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ.
ಅನುಸೂಚಿತ ಜಾತಿಗೆ ೭ ಸ್ಥಾನಗಳಿದ್ದು,ಇದರಲ್ಲಿ ನಾಲ್ಕು ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ.ಅನುಸೂಚಿತ ಪಂಗಡಕ್ಕೆ ೨ ಸ್ಥಾನ ನೀಡಲಾಗಿದ್ದು,ಇದರಲ್ಲಿ ೧ ಮಹಿಳೆಗೆ ನೀಡಲಾಗಿದೆ.ಹಿಂದುಳಿದ ವರ್ಗ(ಅ) ೪ ಸ್ಥಾನ ನೀಡಿದ್ದು,ಇದರಲ್ಲಿ ೨ ಮಹಿಳೆಯರಿಗೆ ಮೀಸಲಿಟ್ಟಿದೆ.ಇನ್ನೂ ಹಿಂದುಳಿದ ವರ್ಗ(ಬ) ೧ ಸ್ಥಾನವಿದ್ದು,ಅದು ಮಹಿಳೆ ಪಾಲಾಗಿದೆ.ಇನ್ನೂ ಸಾಮಾನ್ಯ ಕ್ಷೇತ್ರಕ್ಕೆ ಒಟ್ಟು ೧೪ ಸ್ಥಾನಗಳನ್ನು ಮೀಸಲಿಟ್ಟಿದ್ದು,ಇದರಲ್ಲಿ ೬ ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ.

