Home ರಾಜ್ಯದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಆಧ್ಯಾತ್ಮಿಕ ಕೇಂದ್ರಗಳು

ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಆಧ್ಯಾತ್ಮಿಕ ಕೇಂದ್ರಗಳು

ಕ0ಬಳೀಪುರದಲ್ಲಿ ಪೂಜಮ್ಮ ದೇವಿ ದೇವಾಲಯದ ಬ್ರಹ್ಮ ಕಳಶ ಕುಂಭಾಭಿಷೇಕ

by Editor

 

ಹೊಸಕೋಟೆ
ದೇಗುಲಗಳು ಕೇವಲ ಪೂಜೆ ಸಲ್ಲಿಸುವ ಸ್ಥಳಗಳಲ್ಲ. ಅವು ಮಾನವನಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವ ಹಾಗೂ ಮಾನಸಿಕ ನೆಮ್ಮದಿ ನೀಡುವ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಜೀವನದ ಒತ್ತಡ, ಆತಂಕ ಮತ್ತು ಸಂಕಷ್ಟಗಳಿAದ ಬಳಲುವವರು ದೇವರ ಸನ್ನಿಧಿಯಲ್ಲಿ ಕೆಲಕಾಲ ಕಳೆದಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪ್ರಾರ್ಥನೆ, ಧ್ಯಾನ ಮತ್ತು ಭಜನೆಗಳು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ,ಹೊಸಕೋಟೆ ಬಿಎಂಎರ‍್ಡಿ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜು ಹೇಳಿದರು

ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಕಂಬಳೀಪುರದಲ್ಲಿ ಎರಡು ದಿನಗಳ ಕಾಲ ನಡೆದ ಪೂಜಮ್ಮ ದೇವಿ ದೇವಾಲಯ ಬ್ರಹ್ಮ ಕಳಶ ಕುಂಭಾಬಿಷೇಕ ಹಾಗೂ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಜನರನ್ನು ಒಗ್ಗೂಡಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಹಬ್ಬಗಳು, ಜಾತ್ರೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಗ್ರಾಮಸ್ಥರಲ್ಲಿ ಪರಸ್ಪರ ಪ್ರೀತಿ, ಸಹಕಾರ ಹಾಗೂ ಸಾಮರಸ್ಯವನ್ನು ಬೆಳೆಸುತ್ತವೆ. ಹಿರಿಯರು ಮತ್ತು ಯುವಜನರು ಒಟ್ಟಾಗಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತವೆ ಎಂದರು

ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪೂಜಮ್ಮ ದೇವಿ ದೇವಾಲಯವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು. ದೇವಾಲಯದ ಉದ್ಘಾಟನೆಯ ಅಂಗವಾಗಿ ವಿಶೇಷ ಪೂಜೆ, ಹೋಮ, ಹವನ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು.

ಕಂಬಳೀಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದರು
ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್,ಮುನಿಯಪ್ಪ ಸೇರಿದಂತೆ ದೇಗುಲ ಸಮಿತಿಯ ಪದಾಧಿಕಾರಿಗಳು ,ಗ್ರಾಮದ ಮುಖಂಡರು,ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರು ಪೂಜಾ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು

Spread the love

You may also like

Leave a Comment

➤ ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಆಧ್ಯಾತ್ಮಿಕ ಕೇಂದ್ರಗಳು   ➤ ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ   ➤ ಸರ್ಕಾರಿ ಅಧಿಕೃತ ದಾಖಲೆಗಳಲ್ಲಿ ತಂದೆಯ ಹೆಸರನ್ನು ಐಚ್ಛಿಕಗೊಳಿಸುವ ಕುರಿತು ರಾಜ್ಯ ಮಟ್ಟದ ನೀತಿ ಸಮಾಲೋಚನೆ   ➤ ಅಂತೂ ಬಂತೂ ಜಿಪಂ,ತಾಪ0 ಚುನಾವಣೆಗೆ ಮೀಸಲು ಅಧಿಸೂಚನೆ   ➤ ಕಾನೂನು ಬಾಹಿರವಾಗಿ ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ