ಹೊಸಕೋಟೆ : ಶಿಕ್ಷಣದಿಂದ ಮಾತ್ರ ವ್ಯಕ್ತಿ ಮತ್ತು ಸಮಾಜದ ಬದಲಾವಣೆ ಸಾಧ್ಯ.ಶಿಕ್ಷಣ ದೇಶದ ಅಭಿವೃದ್ದಿಗೆ ಅಡಿಪಾಯವಾಗಿದ್ದು,ಶಿಕ್ಷಣ ಪ್ರತಿಯೊಬ್ಬರ ಹಕ್ಕು ಶಿಕ್ಷಣ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಕ್ರಾಂತಿ ಮಾಡಬೇಕು ಎಂದು ಕೆಆರ್ ಪುರಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪ್ರಾನ್ಸಿಸ್ ಮರಿಯಾ ಆನಂದ್ ತಿಳಿಸಿದರು.
ನಗರದ ಶಿಕ್ಷಕರ ಬಡಾವಣೆಯಲ್ಲಿರುವ ನ್ಯೂ ಹೊರೈಜನ್ ಶಾಲೆಯಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವನ್ನು ಸಮಾಜದ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಕರು ಅವಿರತ ಶ್ರಮಿಸುತ್ತಾರೆ. ಇದರ ನಡುವೆ ಪೋಷಕರು ಕೂಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿರುವ ವಿಷಯಗಳ ಬಗ್ಗೆ ಓದಲು ಬರೆಯಲು ಅವಕಾಶ ಮಾಡಿಕೊಡಿ. ಯಾವುದೇ ವಿಷಯಕ್ಕೂ ಮಕ್ಕಳ ಮೇಲೆ ಬಲವಂತ ಮಾಡಬೇಡಿ. ಪ್ರತಿ ವಿದ್ಯಾರ್ಥಿಯು ದೇಶಕ್ಕೆ ದೊಡ್ಡ ಸಂಪನ್ಮೂಲ ಆಗುತ್ತಾರೆ ಎಂದರು.
ನ್ಯೂ ಹೊರೈಜನ್ ಶಾಲೆ ಟ್ರಸ್ಟಿ ದೀಪಕ್ ಮಂಗ್‌ನಾನಿ ಮಾತನಾಡಿ, ದಶಕಗಳಿಂದ ಹೊಸಕೋಟೆಯಲ್ಲಿ ನಮ್ಮ ಶಾಲೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದೆ. ಶಿಕ್ಷಣ, ಕ್ರೀಡೆ ಸಾಹಿತ್ಯ, ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೂ ವಿದ್ಯಾರ್ಥಿಗಳನ್ನ ಕೊಂಡೊಯ್ಯುವ ದೃಷ್ಟಿಯಿಂದ ಬೋಧಕ ಸಿಬ್ಬಂದಿ ಸರ್ವಸನ್ನದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನ್ಯೂ ಹೊರೈಜನ್ ಶಾಲೆ ಪ್ರಾಂಶುಪಾಲ ಫಣಿಂದ್ರ, ಮುಖ್ಯ ಶಿಕ್ಷಕ ಸುಬ್ರಮಣ್ಯಂ ಸೇರಿದಂತೆ ಶಾಲೆ ಬೋಧಕ ವರ್ಗ ಹಾಜರಿದ್ದರು.

