Home ರಾಜ್ಯಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ

ರಿಯಾಲಿಟಿ ಬುಕ್ ಅಪ್ ರೇಕಾರ್ಡ್ಗೆ ಆಯ್ಕೆಯಾದ ಬಹುಮುಖ ಪ್ರತಿಭೆ ನಿಶಾಗೆ ಸನ್ಮಾನ

by Editor

ಸೂಲಿಬೆಲೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಕೌಶಲವಿದ್ದು,ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಾರ್ಗದರ್ಶನ ಮುಖ್ಯವಾಗಿದೆ.ಪ್ರತಿಭಾವಂತರನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು ಎಂದು ಸರಕಾರಿ ಪದವಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡರು ಹೇಳಿದರು
ಕರಾಟೆಯಲ್ಲಿ ಉತ್ತಮ ಸಾಧನೆ ಮಾಡಿ ರಿಯಾಲಿಟಿ ಬುಕ್ ಅಪ್ ರೇಕಾರ್ಡಗೆ ಆಯ್ಕೆಯಾದ ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಅತ್ತಿಬೆಲೆ ನಿಶಾ ಅವರನ್ನು ಶಾಂತನಪುರದಲ್ಲಿ ಅಭಿನಂದಿಸಿ ಮಾತನಾಡಿದರು.
ಪ್ರತಿಯೊಂದು ವಿದ್ಯಾರ್ಥಿಯಲ್ಲೂ ತನ್ನಾದೆ ಆದ ವಿಭಿನ್ನ ಪ್ರತಿಭೆ ಅಡಗಿರುತ್ತವೆ. ಅದನ್ನು ಹೊರ ಹಾಕಲು ಅಗತ್ಯವಾದ ವೇದಿಕೆಗಳು ಅವಶ್ಯವಾಗಿರುತ್ತವೆ ಸಾಧನೆಗೆ ವಿದ್ಯಾರ್ಥಿ ದಿಸೆಯಲ್ಲಿ ಅನೇಕ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಪ್ರಿನ್ಸಿಪಾಲ್ ವೆಂಕಟೇಶ್ ಮಾತನಾಡಿ, ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅತ್ತಿಬೆಲೆ ಗ್ರಾಮದ ವಿದ್ಯಾರ್ಥಿನಿ ನಿಶಾ ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿನಿಯಾಗಿದ್ದಾಳೆ, ಭರತನಾಟ್ಯ,ಗಾಂಧಾರವಿದ್ಯೆ, ಕರಾಟೆ, ಕಲೆಯಲ್ಲಿ ಸಾಧನೆ ಮಾಡಿದ್ದಾಳೆ ಎಂದರು.
ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸಿಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪೋಷಕರಿಗೆ ಶಿಕ್ಷಕರಿಗೆ ಹಾಗೂ ಕಲಿತ ಶಾಲೆಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಹೇಳಿದರು
ಜೇನುಗೂಡು ಟ್ರಸ್ಟ್ ನಿರ್ದೇಶಕ ಸೈಯದ್ ಮಹಬೂಬ್, ಜಿಯಾವುಲ್ಲಾ, ಬೆಟ್ಟಹಳ್ಳಿ ಗೋಪಿನಾಥ್, ಪೋಷಕರಾದ ಸೌಮ್ಯ, ಅನಂದಕುಮಾರ್ ಹಾಜರಿದ್ದರು

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ