Home ಅಪರಾಧಹಿರಿಯ ನಾಗರೀಕರಿಗೆ ಪೊಲೀಸ್ ಆಸರೆ

ಹಿರಿಯ ನಾಗರೀಕರಿಗೆ ಪೊಲೀಸ್ ಆಸರೆ

ಹೊಸಕೋಟೆಯಲ್ಲಿ ಪೊಲೀಸ್ ಇಲಾಖೆಯ ಆಸರೆ ಕಾರ್ಯಕ್ರಮ ಜಾರಿ

by Editor

ಹೊಸಕೋಟೆ : ಒಬ್ಬಂಟಿಯಾಗಿರುವ ಹಿರಿಯ ನಾಗರೀಕರು ಒಂಟಿಯಲ್ಲ. ಅವರೊಂದಿಗೆ ನಾವೀದ್ದೇವೆ ಎಂಬ ದೈರ್ಯ,ಭರವಸೆಯನ್ನು ತುಂಬುವ ಪೊಲೀಸ್ ಇಲಾಖೆಯ ಆಸರೆ ಕರ‍್ಯಕ್ರಮವನ್ನು ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ ಎಂದು ಹೊಸಕೋಟೆ ಪೊಲೀಸ್ ಠಾಣೆ ಸಿಪಿಐ ಗೋವಿಂದ್ ಹೇಳಿದರು
ಹೊಸಕೋಟೆಯಲ್ಲಿ ಆಸರೆ ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರೀಕರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರೀಕರು ಒಂಟಿಯಾಗಿ ಅಥವಾ ಗಂಡ ಹೆಂಡತಿ ಮಾತ್ರ ವಾಸವಿದ್ದು ಅವರ ಮನದಲ್ಲಿ ಮೂಡುವ ಅಭದ್ರತೆ, ಅಸುರಕ್ಷತೆ ಹೋಗಲಾಡಿಸಿ ವಿಶ್ವಾಸ ತುಂಬುವುದು ಇದರ ಮುಖ್ಯ ಉದ್ದೇಶವಾಗಿದೆ. ಆಸರೆ ಎಂಬ ಸಮುದಾಯ ಪೊಲೀಸ್ ಪರಿಕಲ್ಪನೆಯಲ್ಲಿ ಸುರಕ್ಷೆ, ಭದ್ರತೆ, ಯೋಗಕ್ಷೆಮ, ವಿಶ್ವಾಸ ನೀಡುವಂತಹ ಹಾಗೂ ಅವರು ಒಂಟಿಯಲ್ಲ, ಅವರೊಂದಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ಅವರ ಜತೆಯಿದೆ ಎಂಬ ಬಲವಾದ ನಂಬಿಕೆ ಮತ್ತು ವಿಶ್ವಾಸ ಮೂಡಿಸುವಂತದ್ದಾಗಿದೆ. ಈಗಾಗಲೇ ಠಾಣಾ ವ್ಯಾಪ್ತಿಯಲ್ಲಿ ೧೯ ಬೀಟ್‌ಗಳಿದ್ದು, ಪ್ರತಿ ಬೀಟ್‌ಗಳಿಗೆ ಇಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ. ಪ್ರತಿ ಬೀಟ್‌ನಲ್ಲಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರೀಕರ ಮಾಹಿತಿಯನ್ನು ಪಡೆಯಲಾಗಿದೆ. ಇದರ ಜತೆ ಬೆಳಗಿನ ಸಮಯದಲ್ಲಿ ಹಿರಿಯ ನಾಗರೀಕರನ್ನು ಖುದ್ದು ಪೊಲೀಸರೇ ಬೇಟಿ ಮಾಡಿ ಅವರಲ್ಲಿನ ಸಮಸ್ಯೆಗಳು, ತೊಂದರೆಗಳು ಹಾಗೂ ಸುತ್ತ ಮುತ್ತಲ ವಾತಾವರಣ, ಅವರ ಭದ್ರತೆ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆಯಲಾಗುತ್ತದೆ. ಅವರ ಮನೆ ಸುತ್ತಮುತ್ತ ನಿಗಾ ವಹಿಸುವುದು, ವಾರಕೊಮ್ಮೆ ಅವರನ್ನು ಬೆಳಗಿನ ಸಂದರ್ಭದಲ್ಲಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆರೋಗ್ಯ ವ್ಯತ್ಯಯವಿದ್ದಲ್ಲಿ ಅಂಬ್ಯುಲೆನ್ಸ್ ಒದಗಿಸುವುದರ ಮೂಲಕ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಭ0ದಪಟ್ಟ ಬೀಟ್ ಪೊಲೀಸರ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಿದ್ದು, ಅವಶ್ಯಕತೆ ಇದ್ದಾಗ ಕರೆ ಮಾಡಲು ತಿಳಿಸಲಾಗಿದೆ. ಪ್ರತಿ ಮೂರು ನಾಲ್ಕು ದಿನಕ್ಕೊಮ್ಮೆ ನಾವೇ ಹಿರಿಯ ನಾಗರೀಕರಿಗೆ ಕರೆ ಮಾಡಿ ಅವರೊಂದಿಗೆ ಬಾಂದವ್ಯ ವೃದ್ದಿಗೆ ಮಾತುಕತೆ ಮಾಡುವ ಕೆಲಸ ಮಾಡುತ್ತೇವೆ. ಹೊಸಕೋಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೩೯ ಒಂಟಿಯಾಗಿ ವಾಸಿಸುವವರ ಮಾಹಿತಿ ಸಂಗ್ರಹಿಸಲಾಗಿದೆ. ಆಸರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ ಎಂದು ತಿಳಿಸಿದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ