Home ರಾಜ್ಯಹಸಿರೇ ನಮ್ಮ ಉಸಿರಾಗಿರಲಿ

ಹಸಿರೇ ನಮ್ಮ ಉಸಿರಾಗಿರಲಿ

ವಿದ್ಯಾರ್ಥಿಗಳಿಗೆ ಬಿ.ಎನ್ ಗೋಪಾಲಗೌಡ ಸಲಹೆ

by Editor

ಸೂಲಿಬೆಲೆ : ಮನುಷ್ಯನ ಆರೋಗ್ಯಕರ ಜೀವನಕ್ಕೆ ಉತ್ತಮ ಪರಿಸರ ಮುಖ್ಯ. ಪ್ರತಿಯೊಬ್ಬರು ಒಂದೊ0ದು ಸಸಿ ನೆಟ್ಟು ಪೋಷಿಸಬೇಕು. ನಮ್ಮಲ್ಲರ ಬದುಕಿನಲ್ಲಿ ಹಸಿರೇ ಉಸಿರಾಗಿರಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ ಹೇಳಿದರು

ಸೂಲಿಬೆಲೆ ಸರಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯ ಆವರಣದಲ್ಲಿ ನಿಸರ್ಗ ಹಸಿರು ಪಡೆ,ಸೂಲಿಬೆಲೆ ಗ್ರಾಪಂ,ಜೇನುಗೂಡು ಟ್ರಸ್ಟ್,ಹೊಸಕೋಟೆ ಕಾನೂನು ಸೇವಾ ಪ್ರಾಧಿಕಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು

ಮರಗಿಡಗಳು,ಪರಿಸರದಿಂದಾಗುವ ಪ್ರಯೋಜನೆಗಳನ್ನು ನಾವೆಲ್ಲ ಅರಿತುಕೊಂಡು ಪರಿಸರವನ್ನು ಬೆಳೆಸುವಂತ ಕೆಲಸ ಮಾಡಬೇಕು.ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಪ್ರಕೃತಿಯ ಸಂರಕ್ಷಣೆ ಬಗೆ ಅರಿವು ಮೂಡಿಸಬೇಕು. ಒಂದು ಪ್ರಕೃತಿ ನಾಶದಿಂದ ಭೂಮಿಯೇ ಮೇಲೆ ಆನೇಕ ರೀತಿಯ ದುಷ್ಪರಿಣಾಮಗಳನ್ನು ನಾವೆಲ್ಲ ಎದುರಿಸುತ್ತಿದ್ದೇವೆ. ಜನಸಂಖ್ಯೆ ಹೆಚ್ಚಳದಿಂದ ಮಾನವ ತನ್ನ ವಸತಿ, ವಾಣಿಜ್ಯ ಇನ್ನಿತರ ಕಾರಣಗಳಿಂದ ಮರ, ಗಿಡಗಳನ್ನು ನಾಶ ಮಾಡುತ್ತಿದ್ದು, ಇದು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಭೂಮಿ ತಾಪಮಾನ ಏರಿಕೆ,ಸಕಾಲಕ್ಕೆ ಮಳೆಯಾಗದಿರುವುದು ಇವೆಲ್ಲವೂ ಪ್ರಕೃತಿಯ ನಾಶದಿಂದಾಗುತ್ತಿರುವ ಎಚ್ಚರಿಕೆ ಪರಿಣಾಮಗಳು. ಪ್ರತಿಯೊಬ್ಬರು ಒಂದೊ0ದು ಸಸಿ ನೆಟ್ಟು ನಮ್ಮ ಜೀವನದಲ್ಲಿಯೇ ಹಸಿರೇ ಉಸಿರು ಎನ್ನುವಂತ ದೇಯ್ಯವನ್ನು ಹೊಂದಬೇಕು ಎಂದರು.

ಮುಖ್ಯ ಶಿಕ್ಷಕಿ ಸಿ.ಸುಮಿತ್ರ, ಮಂಜುಳಾ, ಸೌಮ್ಯ, ಲಕ್ಷಿö್ಮ, ಶಿಲ್ಪ, ಮಂಜುಳಾ, ಸೌಮ್ಯಶ್ರೀ, ಆಶ್ವಿನಿ, ಸುಧಾಮಣಿ, ಮಮತ, ಶ್ರೀಕಂಠಯ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಿನ್ಸಿಪಾಲ್ ವೆಂಕಟೇಶ್, ಪಿಡಿಒ ಮಂಜುನಾಥ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ. ಚೌಡೇಗೌಡ, ಪ್ರಧಾನ ಕರ‍್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಕಾನೂನು ಸೇವಾ ಪ್ರಾಧಿಕಾರ ಅರೆ ಕಾಲಿಕ ಸ್ವಯಂ ಸೇವಕ ಪ್ರಶಾಂತ್ ,ಟ್ರಸ್ಟ್ ನಿರ್ದೇಶಕರಾದ ನವಾಜ್ ಖಾನ್,ಮಂಜುನಾಥ್,ಜೀಯಾವುಲ್ಲಾ ಖಾನ್ ಹಾಜರಿದ್ದರು

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ