Home ರಾಜ್ಯಶಿವಾಜಿ ಜಯಂತಿ ಆಚರಣೆಗೆ ಬಾರದ ಸರಕಾರಿ ಅಧಿಕಾರಿಗಳು

ಶಿವಾಜಿ ಜಯಂತಿ ಆಚರಣೆಗೆ ಬಾರದ ಸರಕಾರಿ ಅಧಿಕಾರಿಗಳು

ಸಮುದಾಯದ ಮುಖಂಡರಿ0ದ ಖಂಡನೆ

by Editor

ಹೊಸಕೋಟೆ : ಛತ್ರಪತಿ ಶಿವಾಜಿ ನಮ್ಮ ನಾಡು, ದೇಶ ಕಂಡ ಅಪ್ರತಿಮ ಹಿಂದೂ ನಾಯಕನಾಗಿ ಗುರುತಿಸಿಕೊಂಡಿದ್ದು,ಇವರ ಜಯಂತಿ ಆಚರಣೆ ಮಾಡುವ ವಿಷಯದಲ್ಲಿ ತಾಲೂಕು ಆಡಳಿತ ಅಧಿಕಾರಿಗಳ ನಿರ್ಲಕ್ಷö್ಯ ದೋರಣೆ ಅನುಸರಿಸುತ್ತಿರುವ ತೀವ್ರ ಖಂಡನೀಯ ಎಂದು ಮರಾಠ ಸಂಘದ ಗೌರವಾಧ್ಯಕ್ಷ ಎಚ್.ಸಿ ವೆಂಕೋಬರಾವ್ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಹೊಸಕೋಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಸರಕಾರಿ ಕಾರ್ಯಕ್ರಮವಾಗಿ ಛತ್ರಪತಿ ಶಿವಾಜಿರವರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಸಮುದಾಯದ ಮುಖಂಡರು, ಸರಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ ಜಯಂತಿ ಅಚರಣೆ ಮಾಡುವಂತೆ ಸರಕಾರ ಆದೇಶ ನೀಡಿದೆ. ಆದರೆ, ಜಯಂತಿ ಆಚರಣೆಯಲ್ಲಿ ಅಧಿಕಾರಿಗಳ ಉದಾಸೀನತೆ ಎದ್ದು ಕಾಣುತ್ತಿದ್ದು, ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಮಹಾನ್ ನಾಯಕರ ಜಯಂತಿ ಆಚರಣೆಗೆ ಸರಕಾರಿ ಅಧಿಕಾರಿಗಳು ಗೈರಾಗಿರುವುದು ಇದು ಮೊದಲಲ್ಲ. ತಹಸೀಲ್ದಾರ್, ಉಪ ತಹಸಿಲ್ದಾರ್ ಸೇರಿ ಯಾವ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಕಳೆದ ಮೂರು ವರ್ಷಗಳಿಂದ ಸರಕಾರಿ ಅಧಿಕಾರಿಗಳು ಇದೇ ದೋರಣೆ ಅನುಸರಿಸುತ್ತಿರುವುದು ಖಂಡನೀಯ. ಇನ್ನು ಮುಂದೆಯಾದರೂ ದೇಶಕ್ಕೆ ಸೇವೆ ಸಲ್ಲಿಸಿದ ಶಿವಾಜಿ ಮಹಾರಾಜ್ ರವರ ಜಯಂತಿ ಕಾರ್ಯಕ್ರಮ ಸಂಬ0ಧ ಜಯಂತಿ ಆಚರಣೆಗೂ ಮುನ್ನ ಎಲ್ಲರ ಸಮ್ಮುಖದಲ್ಲಿ ಪೂರ್ವ ಭಾವಿ ಸಭೆ ನಡೆಸಬೇಕು.ಎಲ್ಲ ಅಧಿಕಾರಿಗಳು ಭಾಗವಹಿಸುವ ಮೂಲಕ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕಾರ ನೀಡಬೇಕು.ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು
ಈ ಕಾರ್ಯಕ್ರಮದಲ್ಲಿ ವಿ.ಆರ್ ವೆಂಕೋಭರಾವ್, ಖಜಾಂಚಿ ಭದ್ರಿನಾಥ್, ಕಾರ್ಯದರ್ಶಿ ಚಿನ್ನೂರಾವ್, ಮುಖಂಡರಾದ ಶಿವಾಜಿರಾವ್, ಭುಜಂಗರಾವ್, ರಮೇಶ್ ಪುಟ್ಟಪ್ಪ ಸೇರಿ ಸಮುದಾಯದ ಮುಖಂಡರು ಹಾಜರಿದ್ದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ