Home ಜಿಲ್ಲೆಎಲ್ಲ ಕ್ಷೇತ್ರಗಳಲ್ಲೂ ಸಮುದಾಯವನ್ನು ಸಂಘಟಿಸುವುದು ನಮ್ಮ ಮುಖ್ಯ ಗುರಿ : ಡಾ.ಎಚ್.ಎಂ ಸುಬ್ಬರಾಜ್

ಎಲ್ಲ ಕ್ಷೇತ್ರಗಳಲ್ಲೂ ಸಮುದಾಯವನ್ನು ಸಂಘಟಿಸುವುದು ನಮ್ಮ ಮುಖ್ಯ ಗುರಿ : ಡಾ.ಎಚ್.ಎಂ ಸುಬ್ಬರಾಜ್

ಹೊಸಕೋಟೆ ತಾಲೂಕು ಮಾದರ ಮಹಾಸಭಾ ಪದಾಧಿಕಾರಿಗಳ ಆಯ್ಕೆ

by Editor

ವಿಜಯ ನ್ಯೂಸ್ ಹೊಸಕೋಟೆ ಮೇ.೧೩
ರಾಜಕೀಯ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯವನ್ನು ಸಂಘಟಿಸುವುದು ಮಾದರ ಮಹಾಸಭಾ ಮುಖ್ಯ ಉದ್ದೇಶವಾಗಿದೆ.ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮುದಾಯ ಮಕ್ಕಳನ್ನು ಬೆಳೆಸುವುದು ನಮ್ಮ ಗುರಿ. ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಪದಾಧಿಕಾರಿಗಳು ಮುಂದಾಗಬೇಕು ಎಂದು ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದರು

ಹೊಸಕೋಟೆ ಖಾಸಗಿ ಹೋಟಲ್‌ನಲ್ಲಿ ಹಮ್ಮಿಕೊಂಡಿದ್ದ ಮಾದರ ಮಹಾಸಭಾ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಸಮುದಾಯ ಸಂಘಟನೆಯಿ0ದ ಗ್ರಾಮೀಣ ಭಾಗದಲ್ಲಿರುವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು. ಐಎಎಸ್, ಕೆಎಎಸ್ ನಂಥ ಉನ್ನತ ಹುದ್ದೆಗಳಿಗೆ ಹೋಗಲು ಅಗತ್ಯವಾಗಿರುವ ಸಹಕಾರ, ಸೌಲಭ್ಯಗಳನ್ನು ಸಂಘಟನೆಯಿ0ದ ಮಾಡಲಾಗುವುದು. ಸಮುದಾಯವನ್ನು ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಕಲ್ಪಿಸುವಂತ ದಿಕ್ಕಿನಲ್ಲಿ ಸಂಘಟನೆ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸಮಿತಿ ಆದೇಶದಂತೆ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು,ಹೋಬಳಿ ಹಂತದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸದಸ್ಯತ್ವ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದರು

ಬೆ0ಗಳೂರುಗ್ರಾಮಾ0ತರ ಜಿಲ್ಲೆ ಮಾದರ ಮಹಾಸಭಾ ವಿಶೇಷ ಅಹ್ವಾನಿತರಾದ ವಿ.ವಿಜಯಕುಮಾರ್ ಮಾತನಾಡಿ,ರಾಜ್ಯ ಮಟ್ಟದಲ್ಲಿ ಸಂಘಟನೆ ಬಲಿಷ್ಠವಾಗುತ್ತಿದೆ.ಗ್ರಾಮಾಂತರ ಜಿಲ್ಲೆಯಲ್ಲೂ ಸದಸ್ಯತ್ವ ಅಭಿಯಾನ ನಡೆಸಿ ಸಂಘಟನೆ ಮಾಡಲಾಗುವುದು. ಸಮುದಾಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ಮುಖ್ಯ ಉದ್ದೇಶ. ಅದರಲ್ಲೂ ಪೌರಕಾರ್ಮಿಕರ ಮಕ್ಕಳಿಗೆ ವಿಶೇಷ ಗಮನ ಹರಿಸಲಾಗುವುದು. ಕಳೆದ ೩೫, ೪೦ ವರ್ಷಗಳ ಹೋರಾಟದ ಫಲವಾಗಿ ಈಗ ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಭಾಗ್ಯ ಸಿಕ್ಕಿದೆ ಎಂದರು

ನೂತನ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಸಮುದಾಯದ ಸಂಘಟನೆಯನ್ನು ಶಕ್ತಿ ಮೀರಿ ಕಟ್ಟಲು ಪ್ರಯತ್ನಿಸುತ್ತೇನೆ. ಸಮುದಾಯದಒಳಿತಿಗಾಗಿ ಎಲ್ಲರ ಸಹಕಾರ ಪಡೆದು ನಮ್ಮ ಗುರಿಯನ್ನು ತಲುಪಲು ಪ್ರಯತ್ನಿಸುತ್ತೇನೆ. ಶೀಘ್ರದಲ್ಲಿ ತಾಲೂಕಿನಾದ್ಯಂತ ಸಂಚರಿಸಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸದಸ್ಯತ್ವವನ್ನು ಮಾಡಲಾಗುವುದು ಎಂದರು.

ಹೊಸಕೋಟೆ ತಾಲೂಕು ಘಟಕದ ನೂತನ ಪಧಾದಿಕಾರಿಗಳ ಆಯ್ಕೆ:
ತಾಲೂಕು ಅದ್ಯಕ್ಷ ಗುಟ್ಟಳ್ಳಿ ವಿ. ನಾಗರಾಜ, ಗೌರವಾದ್ಯಕ್ಷ ಡಿ.ಎಂ ಮುನಿರಾಜ್, ಯಲ್ಲಪ್ಪ.ಡಿ ಹಾಗೂ ಎಂ ಗುರಪ್ಪ. ಉಪಾದ್ಯಕ್ಷರಾಗಿ ಎಸ್.ವಿ ಶ್ರೀನಿವಾಸ್ ಸೊಣ್ಣೇದೇನಹಳ್ಳಿ, ದೇವರಾಜ್ ಗಿಡ್ಡಪ್ಪನಹಳ್ಳಿ, ಕೆ.ಆರ್.ಬಿ ಶಿವಾನಂದ ಹೊಸಕೋಟೆ ಟೌನ್ , ಮಂಜುಸೂರ್ಯ ಹೊಸಕೋಟೆ ಟೌನ್, ಕಾರ್ಯದರ್ಶಿ ಕೆ.ನರಸಿಂಹಯ್ಯ ಚಿಕ್ಕ ನಲ್ಲಾಳ್, ಖಜಾಂಚಿ ಸಿ.ನಾರಾಯಣಸ್ವಾಮಿ ದೊಡ್ಡಹುಲ್ಲೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ನರಸಿಂಹಯ್ಯ ತಾವರೆಕೆರೆ, ರಮೇಶ್ ಪೂಜೇನ ಅಗ್ರಹಾರ , ಗೋಪಾಲ್ ಗೊಟ್ಟಿಪುರ, ರಮೇಶ್ ಕಂಬಳೀಪುರ, ಗಣೇಶ್ ದೊಡ್ಡಹುಲ್ಲೂರು, ಸುಮಿತ್ರ ಮುಗಬಾಳ, ಎಂ.ರವಿ ಹೊಸಕೋಟೆ ಟೌನ್.
ವಿಶೇಷ ಆಹ್ವಾನಿತ ಸದಸ್ಯರಾಗಿ ಪೂಜಪ್ಪ ಕೋಟೂರು, ಮೂರ್ತಿ ಹಿಂಡಿಗನಾಳ, ಶಿವಾನಂದ್ ಹೊಸಕೋಟೆ ಟೌನ್, ರಮೇಶ್ ತಾವರೆಕೆರೆ, ನರಸಿಂಹಮೂರ್ತಿ ಗುಳ್ಳಹಳ್ಳಿ, ಕಾನೂನು ಸಲಹೆಗಾರರಾಗಿ ಕೃಷ್ಣಪ್ಪ ಚಿಕ್ಕನಲ್ಲಾಳ್ ಹಾಗೂ ಗಣೇಶ್ ಓಬಳಹಳ್ಳಿ ಆಯ್ಕೆಯಾಗಿದ್ದಾರೆ.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ