Home Education NewsUniversityಪದವಿ ಹಂತದ ವಿದ್ಯಾರ್ಥಿಗಳಿಗೆ ಇನ್ಮುಂದೆ ಹಾಜರಾತಿ ಕಡ್ಡಾಯ

ಪದವಿ ಹಂತದ ವಿದ್ಯಾರ್ಥಿಗಳಿಗೆ ಇನ್ಮುಂದೆ ಹಾಜರಾತಿ ಕಡ್ಡಾಯ

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿಕೆ

by Editor

ವಿಜಯನ್ಯೂಸ್ ಹೊಸಕೋಟೆ ಮೇ.೨೬

ಪದವಿ ಹಂತದ ವಿದ್ಯಾರ್ಥಿಗಳಿಗೆ ಇನ್ಮುಂದೆ ಹಾಜರಾತಿ ಕಡ್ಡಾಯ. ಆದರೆ, ಬಯೋಮೆಟ್ರಿಕ್ ಇರಬೇಕಾ ಅಥವಾ ಬೇಡವಾ ಎಂಬುದರ ಕುರಿತು ಇಲಾಖಾ ಹಂತದಲ್ಲಿ ಚರ್ಚೆಯಲ್ಲಿದೆ. ಮುಂದಿನ ದಿನಗಳಲ್ಲಿ ಅದನ್ನು ಪರಿಶೀಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದರು

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇನ್ಮುಂದೆ ಯಾವುದೇ ವಿದ್ಯಾರ್ಥಿ ಪದವಿ ವ್ಯಾಸಂಗ ಮುಗಿಸಿದ ತಕ್ಷಣವೇ ಉದ್ಯೋಗ ಸಿಗಬೇಕು ಎಂಬ ಅಶಯದಿಂದ ಪ್ರತಿ ಕಾಲೇಜಿನ ವಿದ್ಯಾರ್ಥಿಗೂ ವೃತ್ತಿಪರ ಶಿಕ್ಷಣ ನೀಡುವ ನಿಟ್ಟಿನಲ್ಲಿ ಏಷ್ಯನ್‌ಡೆವಲಪ್ಮೆಂಟ್ ಬ್ಯಾಂಕಿನಿAದ ೧೭೫೦ ಕೋಟಿ ಸಾಲ ಹಾಗೂ ೭೫೦ ಕೋಟಿ ರಾಜ್ಯ ಸರಕಾರ ಅನುಧಾನದಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ಲ್ಯಾಬ್ ಆರಂಭಿಸುವ ಗುರಿ ಹೊಂದಲಾಗಿದೆ. ಹೊಸಕೋಟೆ ಸರಕಾರಿ ಪ್ರಥಮ ದರ್ಜೆಕಾಲೇಜನ್ನು ಘಟಕ ಕಾಲೇಜನ್ನಾಗಿ ಉನ್ನತಿಕರಿಸಿದ್ದು, ಕಾಲೇಜಿನ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ೧ ಕೋಟಿ ಬಿಡುಗಡೆ ಮಾಡಲಾಗಿದ್ದು, ಹೊಸ ಡೆಸ್ಕ್ ಬೇಡಿಕೆಗೆ ಪಟ್ಟಿಯನ್ನು ಸಲ್ಲಿಸಿ ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.

ಶಾಸಕ ಶರತ್ ಬಚ್ಚೆಗೌಡ ಮಾತನಾಡಿ, ರಾಜ್ಯದಲ್ಲೆ ಹೊಸಕೋಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಾದರಿ ಕಾಲೇಜು ಆಗಿರುವುದು ಸಂತಸದ ಸಂಗತಿ. ರಾಜ್ಯದಲ್ಲೇ ಪರಿಸರ ಸ್ನೇಹಿ ಮೊದಲ ಮಹಿಳಾ ಶೌಚಾಲಯ ಇರುವುದು ಸಹ ನಮ್ಮದೇ ಕಾಲೇಜಿನಲ್ಲೇ ಎಂಬುದು ಯಾವ ಖಾಸಗಿ ಕಾಲೇಜಿಗೂ ಏನು ಕಡಿಮೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಅನುಕೂಲವಾಗಲೆಂದು ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಕೇಂದ್ರದ ಜೊತೆ ಒಡಂಬಡಿಕೆ ಮಾಡಿಕೊಂಡು ಉಚಿತತರಬೇತಿ ನೀಡಲಾಗುತ್ತಿದೆ ಎಂದರು.

ಕರ‍್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ಕಾಲೇಜಿನ ಪ್ರಾಂಶು ಪಾಲ ರಾಮಲಿಂಗಪ್ಪ ಟಿ. ಬೇಗೂರು, ಬಿಎಂರ‍್ಡಿ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್,ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು,ಉಪನ್ಯಾಸಕರು ಹಾಜರಿದ್ದರು

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ