Home ರಾಜ್ಯರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಯಲಹಂಕ ನ್ಯೂ ಟೌನ್‌ನಲ್ಲಿರುವ ಶೇಷಾದ್ರಿಪುರಂ ಪಬ್ಲಿಕ್ ಶಾಲೆಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ

by Editor

ಬೆಂಗಳೂರು : ಸೇಫ್ಟಿ ರಿಸರ್ಚ್ ಫೌಂಡೇಶನ್ (ಎಸ್‌ಆರ್‌ಎಫ್) , ಹ್ಯುಮ್ಯಾಟಿಕ್ಸ್ ಇನ್ನೋವೇಟಿವ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದಲ್ಲಿ ಯಲಹಂಕ ನ್ಯೂ ಟೌನ್‌ನಲ್ಲಿರುವ ಶೇಷಾದ್ರಿಪುರಂ ಪಬ್ಲಿಕ್ ಶಾಲೆಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಮತ್ತು ಟ್ರಾಫಿಕ್ ಸಿಬ್ಬಂದಿಗೆ ರಿಪ್ಲೆಕ್ಟಿವ್ ಜಾಕೆಟ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದಂತ ಶ್ರೀ ವರದರಾಜುರವರು ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನಂತನಾರಾಯಣನ್ ರವರು,  ರಸ್ತೆ ಸುರಕ್ಷತೆ ಎಂಬುವುದು ಎಲ್ಲರಿಗೂ ಬೇಕು. ಸಂಚಾರ ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಪೋಷಕರು ಮಕ್ಕಳಿಗೆ ಸರಿಯಾಗಿ ತಿಳುವಳಿಕೆ ನೀಡಿದರೆ ಮುಂದಿನ ದಿನಗಳಲ್ಲಿ ರಸ್ತೆ ನಿಮಗಳನ್ನು ಸರಿಯಾಗಿ ಪಾಲಿಸುವಂತವರಾಗುತ್ತಾರೆ. ಆ ನಿಟ್ಟಿನಲ್ಲಿ ಎಸ್.ಆರ್.ಎಫ್ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮತ್ತು ಸಮುದಾಯದಲ್ಲಿ ಹಾಗೂ ಶಾಲಾ ಬಸ್ ಡ್ರೈವರ್ ಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಅಪಘಾತಗಳನ್ನು ತಪ್ಪಿಸಿ ಮರಣ ಪ್ರಮಾಣಗಳನ್ನು ಸಂಪೂರ್ಣ ನಿಲ್ಲಿಸುವ ಗುರಿಯಾಗಿದೆ ಎಂದರು.
ಗೌರವಾನ್ವಿತ ನ್ಯಾಯಾಧೀಶರು ರಸ್ತೆ ಸುರಕ್ಷತೆ ಕೈಪಿಡಿ ಬಿಡುಗಡೆ ಮಾಡಿ ಮಾತನಾಡುತ್ತಾ, ಪೋಷಕರು ದಯವಿಟ್ಟು ಯಾವುದೇ ಸಂದರ್ಭದಲ್ಲಿಯೂ ಮಕ್ಕಳಿಗೆ ಬೈಕ್ ಅಥವಾ ಕಾರ್ ಕೊಡಬೇಡಿ. ಮಕ್ಕಳು ಸಹ ೧೮ ವರ್ಷ ತುಂಬಿ ಡಿ.ಎಲ್ ಮಾಡಿಸಿ ನಂತರ ವಾಹನಗಳನ್ನು ಚಲಾಯಿಸಬೇಕು. ಇಂದು ಅಪಘಾತಗಳಲ್ಲಿ ಯುವಕರು ಹೆಚ್ಚು ಸಾವನಪ್ಪುತ್ತಿದ್ದಾರೆ. ಕಾರಣ ಅತಿವೇಗ, ಹೆಲ್ಮೆಟ್ ಬಳಸಲ್ಲ , ಕುಡಿಡು ವಾಹನ ಚಾಲನೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಮಾಡುವುದು. ಮಕ್ಕಳಿಗೆ ವಾಹನ ಕೊಟ್ಟರೆ ಪೋಷಕರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.
ಹ್ಯುಮಾನಿಟಿಕ್ಸ್ನ ಎಂ.ಡಿ ಪ್ರದೀಪ್ ಮೋಹನ್ ಮಾತನಾಡಿ,  ಮಕ್ಕಳಿಂದಲೇ ಸಂಚಾರ ನಿಯಮಗಳನ್ನು ಪಾಲಿಸುವುದು ಅಬ್ಯಾಸ ಮಾಡಿಸಿದರೆ ಮುಂದಿನ ದಿನಗಳಲ್ಲಿ ಅವರು ಸಂಚಾರ ನಿಯಮಗಳನ್ನು ಪಾಲಿಸುತ್ತಾರೆಂದರು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು ಮತ್ತು ಬಸ್ ಚಾಲಕರು ಹಾಜರಿದ್ದು, ಸದುಪಯೋಗಪಡೆದುಕೊಂಡರು.
ಶೇಷಾದ್ರಿಪುರ0 ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪರಿಮಳ ಮೇಡಂ ಮಾತನಾಡಿ,  ಮಕ್ಕಳು ರಸ್ತೆಯಲ್ಲಿ ನಡೆಯಬೇಕಾದರೆ, ಜೀಬ್ರಾ ಕ್ರಾಸಿಂಗ್ ಬಳಸಬೇಕು, ರಸ್ತೆ ಬಲಬಾಗದಲ್ಲಿ ನಡೆಯಬೇಕು ಮತ್ತು ಪೋಷಕರ ಜೊತೆ ಬೈಕ್, ಕಾರ್‌ನಲ್ಲಿ ಎಲ್ಲಿಯೇ ಹೋದರು ಹೆಲ್ಮಟ್ ಮತ್ತು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕೆಂದು ಸೂಚನೆ ನೀಡಿದರು.
ವೇದಿಕೆಯಲ್ಲಿ ಯಲಹಂಕ ಸಂಚಾರ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಬಾಬು, , ಸೇಫ್ಟಿ ರಿಸರ್ಚ್ ಫೌಂಡೇಶನ್‌ನ ಸಂದೀಪ್ ನವಲೆ, ಹ್ಯುಮ್ಯಾಟಿಕ್ಸ್ನ ಶ್ರೀಮತಿ ಚೈತ್ರ, ಸುರೇಶ್ , ಅನತ್ ಜಾಡಿ, ರಘುಚರಣ್, ಆನಂದ್, ಸಚ್ಚಿದಾನಂದನ್ , ಉಪಸ್ಥಿತರಿದ್ದರು. ಎಸ್.ಆರ್.ಎಫ್ ನ ಸಂಚಾಲಕರಾದ ವೆಂಕಟೇಶ್ ರವರು ಶೇಷಾದ್ರಿಪುರಂ ಪಬ್ಲಿಕ್ ಶಾಲೆಯ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ