ಸೂಲಿಬೆಲೆ : ಗ್ರಾಮೀಣ ಭಾಗದಲ್ಲಿ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಉಚಿತ ನೇತ್ರ ತಪಾಸಣೆ ಶಿಬಿರಗಳು ಜನರಿಗೆ ಅನುಕೂಲವಾಗಿವೆ.ಇಂಥ ಶಿಬಿರಗಳನ್ನು ಜನರು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ ಚೌಡೇಗೌಡ ತಿಳಿಸಿದರು.
ಸೂಲಿಬೆಲೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಂಕರ ಕಣ್ಣಿನ ಅಸ್ಪತ್ರೆ ಸಹಯೋಗದಲ್ಲಿ ಜೇನುಗೂಡು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತç ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೇನುಗೂಡು ಟ್ರಸ್ಟ್ ಹಾಗೂ ಶಂಕರ ಕಣ್ಣಿನ ಅಸ್ಪತ್ರೆಯ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ೫೧ ಜನರಿಗೆ ತಪಾಸಣೆ ಮಾಡಲಾಗಿದೆ. ೧೧ ಜನರಿಗೆ ಸಾಮಾನ್ಯ ಪರೀಕ್ಷೆ ಮಾಡಲಾಗಿದೆ. ೫ ಜನರಿಗೆ ಆರ್‌ಬಿಹೆಚ್ ತಪಾಸಣೆ ೭ ಜನರಿಗೆ ಕಂಟ್ರಾಕ್ಟ್ ಅಡ್ವೆöÊಸ್ ಹಾಗೂ ೨೮ ಜನರಿಗೆ ಉಚಿತ ಕನ್ನಡಕಗಳನ್ನು ನೀಡಲಾಗುತ್ತದೆ ಎಂದರು.
ಜೇನುಗೂಡು ಟ್ರಸ್ಟ್ ನಿರ್ದೇಶಕ ಬಿ.ಶ್ರೀನಿವಾಸ್, ಜಿಯಾವುಲ್ಲಾ, ನಯಾಜ್ ಖಾನ್, ಗ್ರಾ.ಪಂ.ಸದಸ್ಯ ಆನಂದ್, ಉಪನ್ಯಾಸಕಿ ಡಾ. ಸಂಗೀತಾ, ವೈಜ್ಞಾನಿಕ ವಿಜ್ಞಾನಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷೆ ರಾಜೆಶ್ವರಿ, ಉಪಾಧ್ಯಕ್ಷೆ ಸುನೀತಾ,ಇತರರು ಹಾಜರಿದ್ದರು.
242
previous post

