ಸೂಲಿಬೆಲೆ : ಇಲ್ಲಿನ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೧.೩೬ ರಷ್ಟು ಫಲಿತಾಂಶ ಸಾಧಿಸಿದ್ದಾರೆ.ಸರಕಾರಿ ಕಾಲೇಜುಗಳ ಪೈಕಿ ಸೂಲಬೆಲೆ ಕಾಲೇಜು ಅತ್ಯುತ್ತಮ ಫಲಿತಾಂಶವನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ ತಿಳಿಸಿದ್ದಾರೆ.
ಸೂಲಿಬೆಲೆ ಸರಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ಫಲಿತಾಂಶ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಎನ್ ಗೋಪಾಲಗೌಡರು ಮಾತನಾಡಿ,ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು,ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ಪರಿಶ್ರಮದಿಂದ ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಕಾಲೇಜಿನಲ್ಲಿ ಕಲಿಕೆ ಪೂರಕವಾಗಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಶಾಸಕ ಶರತ್ ಬಚ್ಚೇಗೌಡರು ಕಲ್ಪಿಸಿಕೊಟ್ಟದ್ದು, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಉತ್ತಮ ವಾತಾವರಣವಿದೆ. ಪರೀಕ್ಷೆಗೆ ಹಾಜರಾಗಿದ್ದ ೮೧ ವಿದ್ಯಾರ್ಥಿಗಳ ಪೈಕಿಗೆ ೧೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೪೫ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ೧೩ ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದರು.
ಪ್ರಾAಶುಪಾಲ ಮಂಜುನಾಥ್ ಮಾತನಾಡಿ,ಕಾಲೇಜಿನ ಈ ಸಾಧನೆಗೆ ಕಾಲೇಜು ಅಭಿವೃದ್ದಿ ಸಮಿತಿಯ ಸಹಕಾರ ಅತಿ ಮುಖ್ಯವಾಗಿತ್ತು.ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ, ನಾರಾಯಣಗೌಡ, ಬಿ.ವಿ ಸತೀಶ್‌ಗೌಡ, ವಿ.ಪ್ರಸಾದ್ ಅವರ ಪ್ರೋತ್ಸಾಹ, ಸಹಕಾರದಿಂದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾಗಿರುವ ಸೌಲಭ್ಯಗಳು ಸಿಕ್ಕಿದ್ದು, ಉತ್ತಮ ಫಲಿತಾಂಶ ಸಾಧಿಸಲು ಕಾರಣವಾಯಿತು ಎಂದರು.
ಉಪನ್ಯಾಸಕ ಸುಬ್ರಮಣ್ಯ ಮಾತನಾಡಿ, ಕಾಲೇಜಿನ ವಾಣಿಜ್ಯ,ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಕಾಲೇಜು ಅಭಿವೃದ್ದಿ ಸಮಿತಿ ಸಹಕಾರ ಮುಖ್ಯ ಕಾರಣವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರಿಕಾರಿ ಕಾಲೇಜಿಗೆ ದಾಖಲಾಗಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಜೀಯಾವುಲ್ಲಾ,ಗೋಪಿನಾಥ್,ಜೇನುಗೂಡು ಟ್ರಸ್ಟ್ ನಿರ್ದೇಶಕ ನಯಾಜ್‌ಖಾಜ್,ಉಪನ್ಯಾಸಕ ಕುಮಾರ್ ಹಾಜರಿದ್ದರು.
ಬಾಕ್ಸ್
ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದವರು
ನಿತಿನ್ ಆರ್.ವಾಣಿಜ್ಯ ವಿಭಾಗ ೫೫೯ ಅಂಕ( ಶೇ.೯೩.೧೬), ಕೃಷ್ಣ ಎಸ್.ಆರ್ ವಿಜ್ಞಾನ ವಿಭಾಗ ೫೫೮ ಅಂಕ (ಶೇ.೯೩), ಆಯುಷಾಭಾನು ವಿಜ್ಞಾನ ವಿಭಾಗ ೫೫೪ ಅಂಕ (ಶೇ.೯೨.೩೩), ಫಕ್ಕೀರೇಶ್ ದೇವಪ್ಪ ದುರ್ಗನವರ್ ಕಲಾ ವಿಭಾಗ ೫೪೫ ಅಂಕ (ಶೇ ೯೦.೮೩), ಇಕ್ರಾ ವಾಣಿಜ್ಯ ವಿಭಾಗ ೫೪೪ ಅಂಕ(ಶೇ.೯೦.೬೬), ಪ್ರೀತಿ ಸಿ.ಆರ್ ಕಲಾ ವಿಭಾಗ೫೪೩ ಅಂಕ( ಶೇ.೯೦.೫)

