Home ಜಿಲ್ಲೆಶಿಕ್ಷಕಿ ರಾಧಿಕ ಅವರ ಸೇವೆ ಸ್ಮರಣೀಯ

ಶಿಕ್ಷಕಿ ರಾಧಿಕ ಅವರ ಸೇವೆ ಸ್ಮರಣೀಯ

ಸೂಲಿಬೆಲೆ ಸರಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿ

by Editor

ಸೂಲಿಬೆಲೆ : ಇಲ್ಲಿನ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಶಿಕ್ಷಕಿ ರಾಧಿಕ ಅವರ ಸೇವೆ ಶೈಕ್ಷಣಿಕ ಸ್ಮರಣೀಯವಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ವೈ ನಾಗರಾಜ್ ಹೇಳಿದರು
ಸೂಲಿಬೆಲೆ ಸರಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ಶಿಕ್ಷಕಿ ರಾಧಿಕ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಸೌಮ್ಯ ಸ್ವಭಾವದ ರಾಧಿಕ ಅವರು ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಮನಸ್ಥಿತಿಗೆ ಅನುಗುಣವಾಗಿ ಕಲಿಕೆಗೆ ಅಗತ್ಯವಾಗಿರುವ ಪ್ರೋತ್ಸಾಹ, ಸಹಕಾರವನ್ನು ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಹೆಚ್ಚು ಪ್ರತಿಭಾವಂತರಾಗಿ ಹಾಗೂ ಕಲಿಕೆಯಲ್ಲಿ ಪ್ರಗತಿಯನ್ನು ಸಾಧಿಸಲು ಶಿಕ್ಷಕಿ ರಾಧಿಕ ಅವರ ಸೇವೆ ಉತ್ತಮವಾಗಿತ್ತು. ಎಲ್ಲ ಶಿಕ್ಷಕರು ಅನ್ಯೋನ್ಯತೆಯಿಂದ ಶಾಲೆಯನ್ನು ಅತ್ಯುತ್ತಮವಾಗಿ ಮುನ್ನಡಿಸಿಕೊಂಡು ಹೋಗುತ್ತಿದ್ದರು. ಇವರ ಸೇವೆ ಅವಧಿಯಲ್ಲಿ ಶಾಲೆ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯನ್ನು ಸಾಧಿಸಿದೆ. ಮುಂದಿನ ಶೈಕ್ಷಣಿಕ ಜೀವನ ಸುಖಕರವಾಗಿರಲಿ ಎಂದರು.

ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಕರ‍್ಯದರ್ಶಿ ಪ್ರಶಾಂತ್,ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ, ಮುಖ್ಯ ಶಿಕ್ಷಕಿ ಸೌಮ್ಯ, ವೈ.ಎಸ್, ಮಂಜುಳಾ, ಲಕ್ಷಿö್ಮ, ಶಿಲ್ಪ, ರಜನಿ, ಗಗನ, ಮಂಜುಳಾ, ಸೌಮ್ಯ, ವನಜಾ, ಅಡುಗೆ ಸಿಬ್ಬಂದಿಗಳಾದ ಗಿರಿಜಾ, ಸುಗಂಧಿ, ವಿನೋಧಮ್ಮ ಹಾಜರಿದ್ದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ