ಸೂಲಿಬೆಲೆ : ಬೇಸಿಗೆ ಹಿನ್ನಲೆಯಲ್ಲಿ ಹೊಸಕೋಟೆ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದ0ತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡರು ಹೇಳಿದರು.
ಸೂಲಿಬೆಲೆ ಹೋಬಳಿ ವಿವಿಧ ಗ್ರಾಮಗಳಲ್ಲಿ ಸುಮಾರು 2.25 ಕೋಟಿ ವೆಚ್ಚದ ಸಿಸಿ ರಸ್ತೆ ಅಭಿವೃದ್ದಿ ಕಾಮಗಾರಿ ಹಾಗೂ ಕುಡಿಯುವ ನೀರು ಘಟಕ ಉದ್ಘಾಟನೆ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಬೇಸಿಗೆ ದಿನಗಳಲ್ಲಿ ಜನರಿಗೆ ನೀರಿನ ಸಮಸ್ಯೆ ಉಲ್ಬಣವಾಗದಂತೆ ಗ್ರಾಪಂ ಮಟ್ಟದಲ್ಲಿ ನಿಗಾ ಇಡಲಾಗಿದೆ. ಸದ್ಯ ಇಲ್ಲಿಯವರಿಗೂ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ಪರಿಹಾರಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಗರೇನಹಳ್ಳಿ ಗ್ರಾಮದಲ್ಲಿ ಒಂದು ಸಾವಿರ ಲೀಟರ್ ಸಾಮರ್ಥ್ಯ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು ಜನರಿಗೆ ಅನುಕೂಲವಾಗಿದೆ ಎಂದರು
ಚೀಮಸಂದ್ರ ಗ್ರಾಮದಲ್ಲಿ ೨೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ನಗರೇನಹಳ್ಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ೩೦ ಲಕ್ಷ,ಬೀಮಕ್ಕನಹಳ್ಳಿಯಲ್ಲಿ ೨೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ,ಭಾವಾಪುರದಲ್ಲಿ ೨೦ ಲಕ್ಷ, ಇ-ಮುತ್ಸಂದ್ರದಲ್ಲಿ ೨೦ ಲಕ್ಷ, ಗುಳ್ಳಹಳ್ಳಿಯಲ್ಲಿ ೨೫ ಲಕ್ಷ, ಟಿ,ಅಗ್ರಹಾರದಲ್ಲಿ ೨೫ ಲಕ್ಷ ಹಾಗೂ ಮುತ್ತಕದಹಳ್ಳಿಯಲ್ಲಿ ೨೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳು ಸೇರಿ ಒಟ್ಟು ೨ ಕೋಟಿ. ೨೫ ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು

ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಅಗತ್ಯವಾಗಿರುವ ಹಲವಾರು ಯೋಜನೆಗಳನ್ನು ತಂದು ಅನುಷ್ಠಾನ ಮಾಡುತ್ತಿದ್ದಾರೆ.ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುತ್ತಿರುವ ಶಾಸಕರ ಜನಪರ ಕಾಳಜಿಯನ್ನು ಅರ್ಥ ಮಾಡಿಕೊಂಡು ಜನರು ಅವರಿಗೆ ಸದಾ ಬೆಂಬಲವಾಗಿ ನಿಲ್ಲಬೇಕು.ಮುಂದಿನ ದಿನಗಳಲ್ಲಿ ಅವರ ಕೈ ಬಲಪಡಿಸುವ ಕರ‍್ಯವನ್ನು ಮಾಡಬೇಕು ಎಂದರು
ಹಿರಿಯ ಮುಖಂಡ ಬಿ.ಎನ್ ಗೋಪಾಲಗೌಡ,ಬಿಡಿಸಿಸಿ ನಿರ್ದೇಶಕ ಎಂ.ಬಿ ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಎಲ್ ಎನ್ ಟಿ ಮಂಜುನಾಥ್,ಬಿ.ತಮ್ಮೇಗೌಡ,ಟಿಎಪಿಎ0ಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ,ಜಿಪಂ ಮಾಜಿ ಸದಸ್ಯ ವೈ.ಎಸ್ ಎಂ ಮಂಜುನಾಥ್,ತಾಪ0 ಮಾಜಿ ವಿಪಕ್ಷ ನಾಯಕ ಡಾ.ಡಿ.ಟಿ ವೆಂಕಟೇಶ್,ನಗರೇನಹಳ್ಳಿ ತಮ್ಮಣ್ಣ,ಈಸ್ತೂರು ಜಯರಾಮ್,ಚನ್ನಿಗಾಲಾಪುರ ಸಿ.ನಾರಾಯಣಸ್ವಾಮಿ,ಬಾಲೇನಹಳ್ಳಿ ಗುಂಡಪ್ಪ,ಆನ0ದ್ ಕುಮಾರ್,ಗುಳ್ಳಹಳ್ಳಿ ಮುನಿಯಪ್ಪ,ಬೆಂಡಿಗಾನಹಳ್ಳಿ ದೇವರಾಜಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.


