ಹೊಸಕೋಟೆ : ರೈತರು ಬೆಳೆದ ಬೆಳೆಗಳ ಸಂರಕ್ಷಣೆಗೆ ಅನುಕೂಲವಾಗಲೆಂದು ಜಡಿಗೇನಹಳ್ಳಿ ಬಳಿ ೫೦ ಕೋಟಿ ವೆಚ್ಚದಲ್ಲಿ ೧೦ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡರು ಹೇಳಿದರು
ಹೊಸಕೋಟೆ ಪಶು ಪಾಲನೆ ಇಲಾಖೆ ಆವರಣದಲ್ಲಿ ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಸಕೋಟೆ ತಾಲೂಕಿನಲ್ಲಿ ಹೆಚ್ಚಿನ ರೈತರು ತೋಟಗಾರಿಕೆಯ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು,ಸೂಕ್ತ ಬೆಲೆ ಸಿಗದೆ ಇದ್ದಾಗ ನಷ್ಟಕ್ಕೀಡಾಗುತ್ತಿದ್ದಾರೆ. ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವಂತೆ ಹಣ್ಣು ತರಕಾರಿಗಳನ್ನು ಸಂರಕ್ಷಣೆ ಮಾಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿಲ್ಲ. ರೈತರಿಗೆ ಅನುಕೂಲಮಾಡಲೆಂದು ನ್ಯಾಷನಲ್ ಆರ್ಟಿಕಲ್ಚೇರ್ ಮಿಷನ್ ಅಡಿಯಲ್ಲಿ ೫೦ ಕೋಟಿ ವೆಚ್ಚದಲ್ಲಿ ೧೦ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲು ಡಿಪಿಆರ್ ಸಿದ್ದಪಡಿಸಲಾಗಿದೆ. ಜಡಿಗೇನಹಳ್ಳಿ ಎಸ್‌ಎಫ್‌ಸಿಎಸ್ ಹಾಗೂ ಕೆಫೆಕ್ಸ್ ನಡುವೆ ಒಪ್ಪಂದ ಮಾಡಿಕೊಂಡು ಡಿಪಿಆರ್ ಸಿದ್ದಪಡಿಸಿದ್ದು, ಶೀಘ್ರ ಇದರ ಕಾರ್ಯಗತಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು
ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ, ವಿವಿಧ ಇಲಾಖೆ ಉಪ ನಿರ್ದೇಶಕರು ಹಾಜರಿದ್ದರು.


ಬಾಕ್ಸ್
೩೫೬೨ ಮಂದಿಗೆ ಸವಲತ್ತು
ಕಾರ್ಯಕ್ರಮದಲ್ಲಿ ಪಶು ಇಲಾಖೆಯ ೬೦ ರೈತರಿಗೆ ಮೇವು ಕತ್ತರಿಸುವ ಯಂತ್ರ, ೯೩ ರೈತರಿಗೆ ರಬ್ಬರ್ ಮ್ಯಾಟ್,೨೧ ಪಶು ಸಖಿಯರಿಗೆ ಸಮವಸ್ತç.ರೇಷ್ಮೆ ಇಲಾಖೆಯಲ್ಲಿ ೨,೫೦೭ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ೫೪೩ ಫಲಾನುಭವಿಗಳಿಗೆ ವಿವಿಧ ಸವಲತ್ತು,ಕೃಷಿ ಇಲಾಖೆಯಲ್ಲಿ ಪಾಲಿಥೀನ್ ಹೊದಿಕೆ,ತಂತಿಬೇಲಿ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಸೇರಿ ೩,೫೬೨ ಫಲಾನುಭವಿಗಳಿಗೆ ೪ ಕೋಟಿ ವೆಚ್ಚದ ಸವಲತ್ತು ವಿತರಿಸಲಾಯಿತು.

