ಹೊಸಕೋಟೆ : ತಾಲೂಕಿನ ನಂದಗುಡಿ ಹೋಬಳಿ ಯಳಚಹಳ್ಳಿ ಗ್ರಾಮದಲ್ಲಿ ದಲಿತರ ಭೂಮಿಯನ್ನು ಕೆಲವರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಮುಂದಾಗಿದ್ದಾರೆ ಎಂದು ಬೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಳಚಹಳ್ಳಿ ಗ್ರಾಮದ ಹಳೆ ಸರ್ವೇನಂಬರ್ ೬೬ ರಲ್ಲಿ ೫.೫ ಎಕರೆ ದಲಿತ ಕುಟುಂಬಗಳಿಗೆ ಸೇರಿದ್ದಾಗಿದ್ದು,ಈ ಜಮೀನನನ್ನು ಕೆಲವರು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಲು ಯತ್ನಿಸುತ್ತಿದ್ದಾರೆ. ದಲಿತರು ಅನುಭವದಲ್ಲಿರುವ ಜಮೀನನ್ನು ಒತ್ತುವರಿ ಮಾಡಿಕೊಂಡು ಪೋಡಿ ದುರಸ್ತಿ ಮಾಡಿಸಿಕೊಂಡಿದ್ದಾರೆ.ಈ ಬಗ್ಗೆ ಎಡಿಎಲ್ ಆರ್ ಹಾಗೂ ತಹಸೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜಾವಾಬ್ದಾರಿಯಿಂದ ವರ್ತಿಸಿ ಭೂ ಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಭೂ ಕಬಳಿಕೆಯಿಂದ ದಲಿತ ರೈತರ ಸ್ವಾಧೀನ ಅನುಭವದ ಹಕ್ಕುಗಳಿಗೆ ಧಕ್ಕೆಯಾಗಿದೆ.ನೊಂದ ಕುಟುಂಬದವರ ಅನುಮತಿ ಇಲ್ಲದೆ ಮಾಡಿರುವಂತಹ ಪೋಡಿ,ದುರಸ್ತಿ,ಸ್ಕೆಚ್ ಗಳನ್ನು ರದ್ದು ಮಾಡಬೇಕು.ಭೂ ಕಬಳಿಸಲು ಯತ್ನಿಸಿದವರ ವಿರುದ್ದ ಹಾಗೂ ಭೂಗಳ್ಳರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ. ಈ ಸಂಬ0ಧ ಜಿಲ್ಲಾಧಿಕಾರಿ, ಭೂ ದಾಖಲೆ ಉಪ ನಿರ್ದೇಶಕರು ಹಾಗೂ ಹೊಸಕೋಟೆ ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದೆ.


