Home ರಾಜ್ಯಮಾದರ ಮಹಾಸಭಾ ಬಲಿಷ್ಟವಾಗಿ ಕಟ್ಟಲು ಸದಸ್ಯತ್ವ ಪಡೆಯಿರಿ

ಮಾದರ ಮಹಾಸಭಾ ಬಲಿಷ್ಟವಾಗಿ ಕಟ್ಟಲು ಸದಸ್ಯತ್ವ ಪಡೆಯಿರಿ

ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜು ಕರೆ

by Editor

ಹೊಸಕೋಟೆ : ಮಾದರ ಮಹಾಸಭಾ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟಲು ಪ್ರತಿಯೊಬ್ಬ ಮಾದಿಗ ಸಮಯದಾಯದ ಸದಸ್ಯರು ಮಾದರ ಮಹಾಸಭಾ ಸಂಘಟನೆಯಲ್ಲಿ ಸದಸ್ಯತ್ವ ಪಡೆಯಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದರ ಮಹಾಸಭಾ ಅಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದರು

ಈ ಬಗ್ಗೆ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸಭೆ ಇತ್ತೀಚ್ಚಿಗೆ ನಡೆದಿದ್ದು,ಸಮುದಾಯದ ಪ್ರತಿಯೊಬ್ಬರು ತಾಲೂಕು ಹಂತದಲ್ಲಿ ಸದಸ್ಯತ್ವ ಪಡೆಯಬೇಕು ಎಂಬ ಸಂದೇಶ ನೀಡಿದ್ದಾರೆ. ಸದಸ್ಯತ್ವ ಪಡೆಯುವ ಮೂಲಕ ಸಮುದಾಯವನ್ನು ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯವಾಗಿ ಸದೃಡವಾಗಿ ಕಟ್ಟುವುದು ಮುಖ್ಯ ಗುರಿಯಾಗಿದೆ. ಕರ್ನಾಟಕ ಮಾದರ ಮಹಾಸಭಾದ ಮುಖ್ಯ ಉದ್ದೇಶ ಶೋಷಿತ ಸಮುದಾಯದ ಅಭಿವೃದ್ಧಿ ಮಾಡುವುದಾಗಿದೆ. ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ ಅವರನ್ನು ಉನ್ನತ ಶಿಕ್ಷಣದತ್ತ ಪ್ರೋತ್ಸಾಹಿಸುವುದು ಮಾಡಬೇಕಿದೆ ಎಂದರು

ಮೀಸಲಾತಿಯು ಪ್ರವರ್ಗ ಎ ಗುಂಪಿಗೆ ೫.೨೫, ಬಿ ಗುಂಪಿಗೆ ೫.೨೫, ಸಿ ಗುಂಪಿಗೆ ೪.೫ ಸಿಕ್ಕಿದೆ. ನಾವು ಇದುವರೆಗೂ ೧೫ ರಲ್ಲಿ ಶೇ. ೧ ರಷ್ಟು ಕೂಡ ನಮ್ಮ ಸಮುದಾಯಕ್ಕೆ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಸಚಿವ ಸಂಪುಟದ ಸರ್ವಾನುಮತದ ಒಪ್ಪಿಗೆಯಿಂದ ಒಳ ಮೀಸಲಾತಿ ಜಾತಿಯಾಗಿದೆ. ಈ ಕಾರ್ಯಕ್ರಮ ಜಾರಿಯಾಗಿದೆ. ಮೇ ೩೦ರ ಒಳಗಾಗಿ ಎಲ್ಲಾ ಜಿಲ್ಲಾ ಸಮಿತಿಗಳು ಮತ್ತು ತಾಲೂಕು ಸಮಿತಿಗಳು ಕಡ್ಡಾಯವಾಗಿ ರಚನೆಯಾಗಬೇಕು. ಇದರಲ್ಲಿ ಯಾವುದೇ ವಿಳಂಬ ಬೇಡ. ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕನಿಷ್ಠ ೫೦ ಹೊಸ ಸದಸ್ಯರನ್ನು ಈ ಸಂಘಟನೆಗೆ ಸೇರಿಸುವ ಜವಾಬ್ದಾರಿ ಹೊರಬೇಕು. ಆ ಮೂಲಕ ರಾಜ್ಯಾದ್ಯಂತ ನಾವು ಲಕ್ಷಾಂತರ ಸದಸ್ಯರನ್ನು ಹೊಂದುವAತಾಗಬೇಕು ಎಂದು ಕರ‍್ಯಕಾರಣಿ ಸಭೆಯಲ್ಲಿ ತಿಳಿಸಿದ್ದು,ಇದರಂತೆ ಸದಸ್ಯತ್ವಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು.

ಕೋಟ್
ಈಗಾಗಲೇ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಯೊಂದು ಗ್ರಾಮದಲ್ಲಿರುವ ಸಮುದಾಯವನ್ನು ತಲುಪಿ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟಲು ಶ್ರಮಿಸಲಾಗುವುದು – ಡಾ.ಹೆಚ್.ಎಂ ಸುಬ್ಬರಾಜ್

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ