ಹೊಸಕೋಟೆ :ಸೋಮವಾರ ಸಂಜೆ ಹೊಸಕೋಟೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕೆಇಬಿ ಸರ್ಕಲ್ ಸೇರಿದಂತೆ ಹಲವಡೆ ರಸ್ತೆ ತುಂಬೆಲ್ಲ ನೀರು ನಿಂತು ಜನರು ನಾನಾ ಸಮಸ್ಯೆಗಳನ್ನು ಎದುರಿಸುವಂತಾಯಿತು.ಪ್ರತಿ ಭಾರಿ ಮಳೆಯಾದಾಗೆಲ್ಲ ಇದೇ ಪರಿಸ್ಥಿತಿಯನ್ನು ನಗರದ ಜನತೆ ಎದುರಿಸುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸಕೋಟೆ ನಗರದ ಪ್ರಮುಖ ಜನ ಮತ್ತು ವಾಹನ ಓಡಾಟಗಳ ಪ್ರದೇಶವಾಗಿರುವ ಕೆಇಬಿ ಸರ್ಕಲ್ ನಲ್ಲಿ ಪ್ರತಿ ಭಾರಿ ಮಳೆಯಾದಾಗೆಲ್ಲ ಅಪಾರ ಪ್ರಮಾಣದ ನೀರು ನಿಂತು ಸವಾರರು ಮತ್ತು ಜನರ ಓಡಾಟಕ್ಕೆ ತೊಂದರೆಯನ್ನುAಟು ಮಾಡುತ್ತಿದೆ.ಸೋಮವಾರ ಸಹ ಇದೇ ಪರಿಸ್ಥಿತಿ ಸೃಷ್ಟಿಯಾಗಿದ್ದು,ಜನರು ಓಡಾಟಕ್ಕೆ ತೊಂದರೆಯನ್ನು ಎದುರಿಸುವಂತಾಯಿತು.ಅರಣ್ಯ ಇಲಾಖೆಗೆ ಹೊಂದಿಕೊ0ಡಿರುವ ಈ ಪ್ರದೇಶದಲ್ಲಿ ಬೆಂಗಳೂರು,ದೊಡ್ಡಗಟ್ಟಗನೆಬ್ಬೆ,ಸಾರ್ವಜನಿಕ ಆಸ್ಪತ್ರೆ ರಸ್ತೆ ಸೇರಿದಂತೆ ನಾಲ್ಕು ರಸ್ತೆಗಳ ಕೊಂಡಿಯ0ತಿರುವ ಈ ಪ್ರದೇಶದಲ್ಲಿ ಅಯ್ಯಪ್ಪಸ್ವಾಮಿ ದೇಗುಲ ರಸ್ತೆಯಿಂದ ಹರಿದು ಬರುವ ನೀರು ಕೆಇಬಿ ಸರ್ಕಲ್ ಹೆದ್ದಾರಿ ಬದಿಯಲ್ಲಿರುವ ಕಾಲೊವೆಯಲ್ಲಿ ಹರಿದು ಹೋಗಬೇಕು.ಆದರೇ,ಈ ಬಾಗದ ಚರಂಡಿಗಳ ಅವೈಜ್ಞಾನಿವಾಗಿ ನಿರ್ಮಾಣ ಮಾಡಿರುವ ಕಾರಣ ನೀರು ಚರಂಡಿ,ಮೋರಿಗಳಿಗೆ ಹರಿದು ಹೋಗುವುದಿಲ್ಲ.ಅರಣ್ಯ ಇಲಾಖೆ ಒಂದು ಬದಿಯಲ್ಲಿ ರಸ್ತೆಗಿಂತ ಎತ್ತರವಾಗಿ ಚರಂಡಿಯನ್ನು ನಿರ್ಮಿಸಿರುವ ಕಾರಣ ನೀರು ರಸ್ತೆ ಬಿಟ್ಟು ಕದಲುವುದಿಲ್ಲ.ಅರಣ್ಯ ಇಲಾಖೆ ರಸ್ತೆಯ ತಿರುವಿನಲ್ಲಿ ಪೈಪ್ ಲೈನ್ ಗಾಗಿ ಅಗೆದು ಆಗೇ ಬಿಟ್ಟಿರುವ ಗುಂಡಿಗಳಲ್ಲಿ ನೀರು ತುಂಬಿಕೊAಡಿದ್ದು,ರಸ್ತೆ ಯಾವುದೋ,ಗುಂಡಿ ಯಾವುದೋ ತಿಳಿದಂತಾಗಿದೆ.ರಸ್ತೆಯ ಮೇಲೆ ಒಂದು ಅಡಿ ನೀರು ನಿಂತಿರುವ ಕಾರಣ ಸವಾರರ ಜೀವ ಕೈಯಲ್ಲಿಡಿದು ಸಂಚಾರಿಸಬೇಕಾದ ದುಸ್ಥಿತಿಯನ್ನು ಎದುರಿಸುವಂತಾಯಿತು.ಪ್ರತಿ ಸಾರಿ ಮಳೆಯಿಂದ ಉದ್ಬವಿಸುವ ಈ ಪರಿಸ್ಥಿತಿಯನ್ನು ಸರಿಪಡಿಸಲು ಅಧಿಕಾರಿಗಳು ನಿರ್ಲಕ್ಷö್ಯವಹಿಸಿ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು: ಹೊಸಕೋಟೆ ನಗರದ ಕೆಕೆ ಬಡಾವಣೆ,ವಾಡ್ ð ಸಂಖ್ಯೆ ೨೨,ನಂದಾಶ್ರೀ ಕಲ್ಯಾಣ ಮಂಟಪ,ಅರಣ್ಯ ಇಲಾಖೆ ರಸ್ತೆ,ಇತ್ಯಾದಿ ಕಡೆ ನೀರು ನಿಂತು ಸಮಸ್ಯೆಯನ್ನುಂಟು ಮಾಡಿದೆ.ಕೆಕೆ ಬಡಾವಣೆಯಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗಿ ತೊಂದರೆಯನ್ನು0ಟು ಮಾಡಿತ್ತು.ಕಳೆದ ಹಲವು ಬಾರಿ ಈ ಸಮಸ್ಯೆ ಬಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಹಾರ ಕ್ರಮಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ನೀರೋ ನೀರು : ಹೊಸಕೋಟೆ ಟೋಲ್ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಅಪಾರ ಪ್ರಮಾಣ ನೀರು ನಿಂತು ಜನರು,ಸವಾರರು ಪರದಾಟ ನಡೆಸುವಂತಾಯಿತು.ಈ ಭಾಗದಲ್ಲೂ ಸಹ ಪ್ರತಿ ಬಾರಿ ಮಳೆಯಾದಾಗ ಈ ಸಮಸ್ಯೆ ಸಾಮಾನ್ಯವಾಗಿದ್ದು,ಟೋಲ್ ಅಧಿಕಾರಿಗಳು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ.


