Home ರಾಜ್ಯಸಿಡಿಲಿನ ಅಬ್ಬರಕ್ಕೆ ಹೃದಯಘಾತವಾಗಿ ಶಿಕ್ಷಕ ಸಾವು?

ಸಿಡಿಲಿನ ಅಬ್ಬರಕ್ಕೆ ಹೃದಯಘಾತವಾಗಿ ಶಿಕ್ಷಕ ಸಾವು?

ದಾವಣೆಗೆರೆ ಜಿಲ್ಲೆಯ ಮಲೆಕುಂಬಳೂರು ಗ್ರಾಮದಲ್ಲಿ ಘಟನೆ

by Editor

ವಿಜಯ ನ್ಯೂಸ್, ದಾವಣಗೆರೆ ಮೇ ೧೮
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ ಸಾವನ್ನಪ್ಪಿದ್ದಾನೆ. ಸಿಡಿಲಿನ ಅಬ್ಬರಕ್ಕೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಭಾನುವಾರ ರಜೆಯಿದ್ದ ಕಾರಣ ಗ್ರಾಮದಲ್ಲಿದ್ದರು.  ಮನೆ ಮುಂಭಾಗದಲ್ಲಿ ನಿಂತಿದ್ದಾಗ ಮಳೆ ಶುರುವಾಗಿದ್ದು, ಒಮ್ಮೆಲೇ ಸಿಡಿಲಿನ ಅಬ್ಬರ ಶುರುವಾಗಿದೆ.  ಸಿಡಿಲಿನ ಅಬ್ಬರಕ್ಕೆ ನಿಂತಲೇ ಶಿಕ್ಷಕ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಮೃತಪಟ್ಟಿರುವ ವಿಷಯವನ್ನು ಖಚಿತ ಪಡಿಸಿದ್ದಾರೆ. ಶಿಕ್ಷಕರ ಸಾವಿಗೆ ಸಿಡಿಲಿನ ಅಘಾತವೋ, ಆ ಶಬ್ದದಿಂದ ಉಂಟಾದ ಹೃದಯಘಾತವೋ ಖಚಿತವಾಗಬೇಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ