Home ರಾಜ್ಯಶ್ರೀಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಶಿವರಾತ್ರಿ ಆಚರಣೆ

ಶ್ರೀಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಶಿವರಾತ್ರಿ ಆಚರಣೆ

ಸಾವಿರಾರು ಭಕ್ತಾಧಿಗಳು ಭಾಗಿ | ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ

by Editor

ಹೊಸಕೋಟೆ : ನಗರದಲ್ಲಿರುವ ಐತಿಹಾಸಿಕ ದೇಗುಲ ಅವಿಮುಕ್ತೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಚೋಳರ ಕಾಲದಲ್ಲಿ ನಿರ್ಮಿಸಿರುವ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಹಾಗೂ ಪ್ರಸಾದ ವಿನಿಯೋಗ ಮುಂಜಾನೆಯಿ0ದಲೇ ನಡೆಸಲಾಯಿತು. ದೇವರಿಗೆ ಅಭಿಷೇಕ, ವಿಶೇಷ ಅಲಂಕಾರದೊ0ದಿಗೆ ಪಂಚಲೋಹದ ಮುಖವಾಡವನ್ನು ಸ್ವಾಮಿಗೆ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು.
ಈ ವೇಳೆ ದೇವರ ದರ್ಶನ ಪಡೆದ ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ ಮಾತನಾಡಿ, ಐತಿಹಾಸಿಕ ಶ್ರೀ ಅವಿಮುಕ್ತೇಶ್ವರಸ್ವಾಮಿ ಚೋಳರ ಕಾಲದಲ್ಲಿ ನಿರ್ಮಾಣ ಮಾಡಿರುವುದಾಗಿ ಇತಿಹಾಸವಿದ್ದು, ಪ್ರತಿ ವರ್ಷ ಶಿವರಾತ್ರಿಯಂದು ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಈ ಶಿವರಾತ್ರಿ ಇಡೀ ಪ್ರಪಂಚದಾದ್ಯ0ತ ಹಿಂದೂಗಳು ಆಚರಿಸುವ ಮೂಲಕ ನಮ್ಮ ಸನಾತನ ಧರ್ಮದ ಆಚರಣೆಯ ಮಹತ್ವವನ್ನು ಜಗತ್ತಿಗೆ ತೋರಿದ್ದಾರೆ. ಚೋಳರ ಕಾಲದಲ್ಲಿ ನಿರ್ಮಾಣಗೊಂಡು ಅಂದಿನಿ0ದ ಇಂದಿನವರೆಗೆ ಹಲವಾರು ಬಾರಿ ಜೀರ್ಣೋದ್ದಾರಗೊಂಡಿದೆ. ಇಂದಿಗೂ ಸಹ ನಗರದ ಪ್ರಮುಖ ದೇವಾಲಯ ಎನಿಸಿಕೊಂಡಿರುವ ಈ ದೇವಾಲಯದಲ್ಲಿ ಕಳೆದ ೭೫ ವರ್ಷಗಳಿಂದ ಕೃಷ್ಣಮೂರ್ತಿ ಎಂಬ ಆರ್ಚಕರು ಪೂಜಾ ಕಾರ್ಯ ನೆರವೇರಿಸಿಕೊಂಡು ಬಂದಿದ್ದರು. ಅವರ ನಂತರ ಮುಜರಾಯಿ ಇಲಾಖೆ ರವಿ ಎಂಬುವವರನ್ನು ಪೂಜಾ ಕೈಂಕರ್ಯಕ್ಕೆ ನೇಮಕ ಮಾಡಲಾಗಿದ್ದು ಅಚ್ಚುಕಟ್ಟಾಗಿ ದರ್ಶನದ ವ್ಯವಸ್ಥೆಯನ್ನು ನಿರ್ವಹಣಿ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಬೈರೇಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವ್‌ಮೂರ್ತಿ, ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜ್, ಕೆ.ಎಸ್ ಸುರೇಶ್‌ಗೌಡ, ಮಾಜಿ ಅಧ್ಯಕ್ಷ ಡಾ.ಸಿ ಜಯರಾಜ್, ಮುಖಂಡರಾದ ಸುಭಾಷ್‌ಗೌಡ, ಡಾ.ಸದಾನಂದ್, ಇಂತಿಯಾಜ್ ಪಾಷ, ಜಯಚಂದ್ರ ಸೇರಿ ಹಲವರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ