Home ರಾಜ್ಯವಿದ್ಯಾರ್ಥಿ ಸಾಧನೆಗೆ ಪರಿಶ್ರಮ ಅಗತ್ಯ

ವಿದ್ಯಾರ್ಥಿ ಸಾಧನೆಗೆ ಪರಿಶ್ರಮ ಅಗತ್ಯ

ದೇವಲಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ

by Editor

ಹೊಸಕೋಟೆ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಅಧ್ಯಯನದತ್ತ ವಿದ್ಯಾರ್ಥಿಗಳು ಗಮನಹರಿಸಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಮೈಸೂರು ಜಿಲ್ಲೆಯ ದೇವನೂರು ಸರಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಸಂಪನ್ಮೂಲ ವ್ಯಕ್ತಿ ಡಾ. ಉಮೇಶ್ ಬೇವಿನಹಳ್ಳಿ ಹೇಳಿದರು.
ಹೊಸಕೋಟೆ ತಾಲೂಕು ದೇವಲಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪರೀಕ್ಷೆಗಳು ಎದುರಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ವರ್ಷದ ಅಂತಿಮ ಘಟ್ಟದಲ್ಲಿದ್ದೀರಿ.  ಉತ್ತಮ ಸಾಧನೆಯ ಮೂಲಕ ತಂದೆ ತಾಯಿಗಳಿಗೆ ಹಾಗೂ ಕಾಲೇಜಿಗೆ ಉಪನ್ಯಾಸಕ ವರ್ಗಕ್ಕೆ ಕೀರ್ತಿ ತರುವ ಮೂಲಕ ತಾವು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈಯಬೇಕು. ವಿದ್ಯೆ ಎಂಬ ಆಸ್ತಿ ಯಾರು ಕದಿಯಲಾಗದು. ಇದನ್ನು ಸಂಪಾದಿಸಲು ಶ್ರಮವಹಿಸಿ ಎಂದರು
ಕುವೆ0ಪು ಪ್ರೌಢಶಾಲೆಯ ಶಿಕ್ಷಕ ಕುಮಾರೇಶ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಾಧನೆಗೆ ಅನೇಕ ಅವಕಾಶಗಳು ಇರುತ್ತವೆ.  ಜ್ಞಾನಾರ್ಜನೆಗೆ ಸೂಕ್ತವಾದ ಕಾಲ ಪಿಯುಸಿ ೨ ವರ್ಷಗಳ ಕಾಲ ಸಾಧನೆಯ ಅಡಿಗಲ್ಲು ಹಾಕಿಕೊಳ್ಳಿ ಭವಿಷ್ಯ ಉಜ್ವಲವಾಗುತ್ತದೆ  ಎಂದರು
ಪ್ರಾAಶುಪಾಲೆ ತ್ರಿವೇಣಿ ಮಾತನಾಡಿದರು. ೨೦೨೪-೨೫ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾ ವಿಭಾಗದ ಸಿಂಧು ವಾಣಿಜ್ಯ ವಿಭಾಗದ ಚಂದನ, ಲಕ್ಷಿö ವಿಜ್ಞಾನ ವಿಭಾಗದ ಜ್ಞಾನೇಂದ್ರ ಅವರಿಗೆ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದರು.
ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಂಜುನಾಥ(ಆರ್‌ಟಿಬಿ), ಹೆಚ್.ಇ.ಮಂಜುನಾಥ್, ಡಿ.ಎನ್.ಮಂಜುನಾಥ್, ದೇವಲಾಪುರ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಂಧ್ಯಾ, ಉಪನ್ಯಾಸಕರಾಧ ಬೀರೆಗೌಡ, ಬಿ.ಎಸ್.ಅಂಗಡಿ, ನಂದಿನಿ, ಉಷಾರಾಣಿ, ರೂಪ,ಮಮತ, ಪದ್ಮ, ರಾಣಿ,ಶ್ವೇತಾ, ಮುಕ್ಸೂದ್, ಗೋಪಾಲಕೃಷ್ಣ, ಹಾಜರಿದ್ದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ