52
- ಹೊಸಕೋಟೆ : ಇಲ್ಲಿಗೆ ಸಮೀಪದ ನಿಂಬೆಕಾಯಪುರ ಜನಪದರು ರಂಗಮ0ದಿರದಲ್ಲಿ ಕೃಷ್ಣೆಗೌಡರ ಆನೆ ನಾಟಕ ಪ್ರದರ್ಶನ ಪ್ರೇಕ್ಷಕರ ಮನಸೊರೆಗೊಂಡಿತು.
ಮೂಲ ಕತೆ ಪೂರ್ಣಚಂದ್ರ ತೇಜಸ್ವಿ, ರಂಗರೂಪ ಶಶಿಕಾಂತ ಯಡೇಹಳ್ಳಿ, ನಿರ್ದೇಶನ ಮೈಕೋ ಶಿವಶಂಕರ್ ವಹಿಸಿದ್ದರು
ಊರಿನಲ್ಲಿ ನಡೆಯುವ ಪ್ರತಿಯೊಂದು ಅನಾಹುತಗಳಿಗೆ ಮಠದ ಆನೆಯೇ ಕಾರಣ ಎಂದು ಬಿಂಬಿಸುವ ಅಧಿಕಾರಶಾಹಿ ಮತ್ತು ಜನರ ಸಂಕುಚಿತ ಮನೋಭಾವನ್ನು ನಾಟಕದ
ಕೊನೆಯಲ್ಲಿ ಆನೆಯೇ ನೇರವಾಗಿ ಬಂದು ವಿಶ್ಲೇಷಣೆ ಮಾಡುತ್ತದೆ. ಕಾಲೇಜಿನ ಹುಡುಗರಿಗೆ ಪಠ್ಯವಾಗಿರುವ ಕಾರಣ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು ನಾಟಕವನ್ನು ವೀಕ್ಷಿಸಿ ನಮಗೆ ಪರೀಕ್ಷೆಯಲ್ಲಿ ಉತ್ತರಿಸಲು ಈ ನಾಟಕದ ವೀಕ್ಷಣೆಯಿಂದ ತುಂಬಾ ಅನುಕೂಲವಾಯಿತೆಂದು ತಮ್ಮ ಹರ್ಷವನ್ನು ಹಂಚಿಕೊ0ಡರು.
ಈ ಸಂದರ್ಭದಲ್ಲಿ ಜನಪದರು ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ನಾಟಿಕದ ನಿರ್ದೇಶಕ ಮೈಕೋ ಶಿವಶಂಕರ್, ಮಾಲತೇಷ್ ಬಡಿಗೇರ್ ಮತ್ತು ನಟರಾಜರವರನ್ನು ಸನ್ಮಾನಿಸಿದರು
ನಂತರ ಮಾತನಾಡಿದ ಅವರು, ಜನಪದರು ಸಾಂಸ್ಕೃತಿಕ ವೇದಿಕೆಯು ಕೇವಲ ರಂಗಭೂಮಿ ಚಟುವಟಿಕೆಗಳಿಗಷ್ಟೆ ಸೀಮಿತವಾಗದೆ ಸಮಾಜಮುಖಿಯಾದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದೇ ಮಾರ್ಚ್ ೧೫ ರಂದು ಜನಪದರು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಬಣೆಯಿ0ದ ವಿಶೇಷ ರೀತಿಯಲ್ಲಿ ಆಯೋಜಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಜನಪದರು ಕಾರ್ಯದರ್ಶಿ ಸಿದ್ಧೇಶ್ವರ್ ನನಸುಮನೆ, ಖಜಾಂಚಿ ಎಂ ಸುರೇಶ್, ವೆಂಕಟಾಚಲಪತಿ, ಎಚ್ ಆರ್ ಮಮತಾ, ಮುನಿರಾಜು, ಕೃಷ್ಣ ಸುರೇಶ, ಶಿವಕುಮಾರ್ ಕಾಟಂನಲ್ಲೂರು, ನಂದಿನಿ, ಅರುಣ್, ಸಿ.ಎಸ್. ರಾಮಚಂದ್ರ ಮೂರ್ತಿ, ಮಧುಸೂದನ್, ನಿತಿನ್ ಚಂದ್ರಶೇಖರ್, , ಚರಣ್, ರಂಜಿತ್ ಮುಂತಾದವರು ಹಾಜರಿದ್ದರು. 

