Home ರಾಜ್ಯಒಳಮೀಸಲಾತಿ ಮಸೂದೆ ಅನುಮೋದನೆಗೆ ಮನವಿ

ಒಳಮೀಸಲಾತಿ ಮಸೂದೆ ಅನುಮೋದನೆಗೆ ಮನವಿ

ರಾಜ್ಯಪಾಲರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ನೇತೃತ್ವದ ನಿಯೋಗದಿಂದ ಮನವಿ ಪತ್ರ ಸಲ್ಲಿಕೆ

by Editor
  • ಬೆಂಗಳೂರು : ಒಳ ಮೀಸಲಾತಿ ಮಸೂದೆ ಅಂಗೀಕರಸಿ, ಅನುಮೋದನೆ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ, ಅಬಕಾರಿ ಸಚಿವರಾದ ತಿಮ್ಮಾಪುರ, ಶಾಸಕರು ಹಾಗೂ ಸಮುದಾಯ ಮುಖಂಡರ ನಿಯೋಗವು ಇಂದು ಲೋಕ ಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
    ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಂಗೀಕರಿಸಿದ ಒಳ ಮೀಸಲಾತಿ ಮಸೂದೆಗೆ ನಿಮ್ಮಿಂದ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ನಾವು, ಸಚಿವರು, ಶಾಸಕರು, ಎಂಎಲ್‌ಸಿಗಳು ಮತ್ತು ಹಿರಿಯ ನಾಯಕರು ಗೌರವದಿಂದ ವಿನಂತಿಸುತ್ತೇವೆ.ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಬೆಂಬಲದೊ0ದಿಗೆ ಎರಡೂ ಸದನಗಳು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ ೧೦೧ ಒಳ ಸಮುದಾಯಗಳಲ್ಲಿ ಮೀಸಲಾತಿ ಕಲ್ಪಿಸಲು ಈ ಮಸೂದೆ ಸಹಾಯವಾಗಲಿದ್ದು, ಮಸೂದೆಗೆ ಆದಷ್ಟು ಬೇಗ ಒಪ್ಪಿಗೆ ನೀಡಬೇಕೆಂದು ಪತ್ರದ ಮುಖೇನ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ