Home ರಾಜ್ಯಮನೆ ಬೀಗ ಮುರಿದು 15 ಲಕ್ಷ ಬೆಲೆ ಬಾಳುವ ಚಿನ್ನ,ಬೆಳ್ಳಿ,ನಗದು ಕಳ್ಳತನ

ಮನೆ ಬೀಗ ಮುರಿದು 15 ಲಕ್ಷ ಬೆಲೆ ಬಾಳುವ ಚಿನ್ನ,ಬೆಳ್ಳಿ,ನಗದು ಕಳ್ಳತನ

ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮರಸನಹಳ್ಳಿಯಲ್ಲಿ ಘಟನೆ

by Editor

 

ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮರಸನಹಳ್ಳಿಯಲ್ಲಿ ಮನೆಯ ಬೀಗ ಮುರಿದು ಸುಮಾರು ೧೫ ಲಕ್ಷ ಬೆಲೆ ಬಾಳುವ ಚಿನ್ನ,ಬೆಳ್ಳಿ ಒಡುವೆ ಹಾಗೂ ನಗದು ಕಳ್ಳತನ ಮಾಡಿಕೊಂಡಿರುವ ಘಟನೆ ನಡೆದಿದೆ.

ಮನೆಗೆ ಬೀಗ ಹಾಕಿ ಹೋಗಿದ್ದ ಕುಟುಂಬ : ತಮ್ಮರಸನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ನವಾಜ್ ಪಾಷ ಕುಟುಂಬದವರು ಏಪ್ರಿಲ್ ೨೭ ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಚಿಂತಾಮಣಿಯ ಸಂಬAಧಿಕರ ಮನೆಗೆ ಹೋಗಿದ್ದರು. ಏಪ್ರಿಲ್ ೨೯ ರಂದು ವಾಪಸ್ ಮನೆಗೆ ಬಂದಾಗ ಮನೆಯ ಬೀಗ ಮುರಿದಿತ್ತು. ಗಾಬರಿಯಾಗಿ ಒಳಹೊಕ್ಕು ನೋಡಿದಾಗ ಮನೆಯ ಬೀರುವಿನ ಬಾಗಿಲು ಮುರಿದು ಹಾಕಿ ಬೀರುವಿನಲ್ಲಿದ್ದ ಚಿನ್ನ,ಬೆಳ್ಳಿಯ ಒಡುವೆಗಳು ಸೇರಿ ಒಟ್ಟು ೧೮೦ ಗ್ರಾಂ ಒಡುವೆ ದೋಚಿಕೊಂಡು ಹೋಗಿದ್ದಾರೆ. ಒಡುವೆಗಳು ಮಾತ್ರವಲ್ಲದೆ ಬೀರುವಿನಲ್ಲಿದ್ದ ೮೮ ಸಾವಿರ ಹಣ ಸಹ ದೋಚಿದ್ದಾರೆ. ಕಳ್ಳತನವಾಗಿರುವ ಒಡುವೆಗಳ ಬೆಲೆ ಒಟ್ಟು ೧೫ ಲಕ್ಷ ಎಂದು ನವಾಜ್ ಪಾಷ ಸೂಲಿಬೆಲೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಕಳ್ಳನನ್ನು ಪತ್ತೆ ಮಾಡಿ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ