Home Uncategorizedಅಪಘಾತ,ಸವಾರ ಸಾವು

ಅಪಘಾತ,ಸವಾರ ಸಾವು

by Editor

ಹೊಸಕೋಟೆ: ಸ್ಯಾಟಲೈಟ್ ಟೌನ್ ರಿಂಗ್ ರೋಡ್( ದಾಬಸ್ ಪೇಟೆ ಟು ಚೆನ್ನೈ) ಹೆದ್ದಾರಿಯಲ್ಲಿ ದ್ವಿಚಕ್ರವಾಹನ ಸವಾರನೊಬ್ಬ ಚಲಾಯಿಸುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ( ಮೇ.2) ರಂದು ನಡೆದಿದೆ.

ಒರಿಸ್ಸಾ ಮೂಲದ ದೇವಿ ಪ್ರಸಾದ್ ಮೊಹಂತಿ( 22) ಸಾವನ್ನಪಿರುವ ಸವಾರ.ಬೈಕ್ ಹಿಂಬದಿ‌ಕುಳಿತ್ತಿದ್ದ ಸುಮೀತ್ ಕುಮಾರ್ ಎಂಬಾತ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಕಂಬಳೀಪುರ ಸಮೀಪದ STRR ಹೆದ್ದಾರಿಯಲ್ಲಿ ಈ ಇಬ್ಬರು ಹೊಸಕೋಟೆ ಯತ್ತ ಪ್ರಯಾಣಿಸುತ್ತಿದ್ದರು.ಇವರ ಪ್ರಯಾಣಿಸುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಕಳೆಗೆ ಬಿದ್ದರು.ಈ ವೇಳೆ ಸವಾರನಿಗೆ ತಲೆಯಲ್ಲಿ ರಕ್ತ ಸೋರಿಕೆಯಾಗಿ ಸಾವನ್ನಪ್ಪಿದ್ದಾನೆ.ಈತನ ಬೈಕ್ ನಲ್ಲಿ ಹಿಂದೆ ಕುಂತು ಪ್ರಯಾಣಿಸುತ್ತಿದ್ದ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ.ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ