Home ದೇಶಮಾರಾಣಾಂತಿಕ ಹಲ್ಲೆಗೆ ಒಳಗಾಗಿದ್ದ ಮಹಿಳೆ ಕೇರಳದಲ್ಲಿ ಸಾವು

ಮಾರಾಣಾಂತಿಕ ಹಲ್ಲೆಗೆ ಒಳಗಾಗಿದ್ದ ಮಹಿಳೆ ಕೇರಳದಲ್ಲಿ ಸಾವು

ಸೂಲಿಬೆಲೆಯಲ್ಲಿ ನಾಯಿಗಳನ್ನು ನೋಡಿಕೊಳ್ಳಲು ಬಂದಿದ್ದ ಮಹಿಳೆ ಮೇಲೆ ಮಾಲೀಕ ಲೈಗಿಂಕ ದೌರ್ಜನ್ಯ

by Editor

ಬೆಂಗಳೂರು ಗ್ರಾಮಾಂತರ : ಮನೆಯೊಂದರಲ್ಲಿನ ನಾಯಿಗಳ ಆರೈಕೆ ಕೆಲಸಕ್ಕೆ ಕೇರಳದಿಂದ ಆಗಮಿಸಿದ್ದ ಮಹಿಳೆಯೊಬ್ಬರ ಮೇಲೆ ಮಾಲೀಕ ಲೈಗಿಂಕ ಕ್ರಿಯೆಗೆ ಒತ್ತಾಯಿಸಿದ್ದು, ಒಪ್ಪದಿದ್ದಕ್ಕೆ ಆಕೆಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ಮೇ.೩ ರಂದು ಸೂಲಿಬೆಲೆಯಲ್ಲಿ ನಡೆದಿದೆ. ಹಲ್ಲೆಯಿಂದ ಗಂಬೀರ ಗಾಯಗೊಂಡ ಮಹಿಳೆಯನ್ನು ರಾತ್ರೋರಾತ್ರಿ ಕೇರಳಕ್ಕೆ ಶಿಪ್ಟ್ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೇರಳದಲ್ಲಿ ಈಕೆ ಮೇ.೫ ರಂದು ಸಾವನ್ನಪ್ಪಿದ್ದಾಳೆ.

ಏನಾಯಿತು: ಸೂಲಿಬೆಲೆಯಲ್ಲಿ ದೀಪಕ್ ಕೃಷ್ಣ ಎಂಬಾತ ಶಡ್ಡು ನಿರ್ಮಿಸಿಕೊಂಡು ನಾಯಿಗಳನ್ನು ಸಾಕಿಸಿದ್ದಾನೆ. ಈ ನಾಯಿಗಳ ಆರೈಕೆಗಾಗಿ ತಿಂಗಳಿಗೆ ೪೦ ಸಾವಿರ ವೇತನ ಆಸೆ ತೋರಿಸಿ ಮದ್ಯವರ್ತಿ ಮೂಲಕ ಕೇರಳದಲ್ಲಿರುವ ತ್ರಿಶೂರ್‌ನ ಪಥಮ್‌ಕಲ್ಲು ಮೂಲದ ೪೭ ವರ್ಷ ಸುನೀತಾ ಸಿತ್ಮಾ ಅವರನ್ನು ದೀಪಕ್ ಕೃಷ್ಣ ಮನೆಗೆ ಕರೆ ತರಲಾಗಿತ್ತು. ಈಕೆಯೊಟ್ಟಿಗೆ ಕೇರಳ ಮೂಲದ ಆಲೀನಾ, ಚಿನ್ನು ಕೆಲಸ ಮಾಡುತ್ತಿದ್ದರು. ಆರೋಪಿ ದೀಪಕ್ ಕೃಷ್ಣ ಸುನೀತಾ ಸ್ಮೀತಾ ಅವರೊಟ್ಟಿಗೆ ಲೈಗಿಂಕತೆಗೆ ಒತ್ತಾಯಿಸಿದ್ದು, ಇದಕ್ಕೆ ನಿರಾಕರಿಸಿದ ಸುನೀತಾಳ ಮೇಲೆ ದೀಪಕ್ ಕೃಷ್ಣ ಆಕೆಯ ತಲೆಯ ಕೂದಲು ಹಿಡಿದು ಗೋಡೆಗೆ,ಆಲ್ಮಾರಗೆ ಹೊಡೆದು ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.ಬಿಡಿಸಲು ಬಂದ ಅಲೀನಾ,ಚಿನ್ನು ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾನೆ ಎಂದು ಕೊಲೆಯಾದ ಸುನೀತಾ ಪತಿ ಸಿಂಟೋ ಆಂಟನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾತ್ರೊರಾತ್ರಿ ಶಿಪ್ಟ್ : ದೀಪಕ್ ಕೃಷ್ಣ ನಡೆಸಿದ ಹಲ್ಲೆಯಿಂದ ತಲೆ ಮತ್ತಿತ್ತರ ಕಡೆ ಗಂಬೀರವಾಗಿ ಗಾಯಗೊಂಡ ಸುನೀತಾಳನ್ನು ಸೂಲಿಬೆಲೆ ಸಾಯಿರಂಗ ಆಸ್ಪತ್ರೆ, ಎಂವಿಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಸ್ಥಿತಿ ಕೈ ಮೀರಿದ್ದರಿಂದ ವೆಂಟಿಲೇಟರ್ ಮೂಲಕ ಕೇರಳದ ತ್ರಿಶೂರ್ ಜುಬಿಲಿ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು

ದೀಪಕ್ ಕೃಷ್ಣ ಅಟ್ಟಹಾಸ : ದೀಪಕ್ ಕೃಷ್ಣ ಸೂಲಿಬೆಲೆ ಹೊರ ಭಾಗದ ಜನ ವಸತಿ ಕಡಿಮೆ ಇರುವ ಜಾಗದಲ್ಲಿ ಮನೆಯನ್ನು ನಿರ್ಮಿಸಿಕೊಂಡು ಅದರಲ್ಲಿ ನಾಯಿಗಳನ್ನು ಸಾಕಿಕೊಂಡಿದ್ದಾನೆ. ಮನೆಯ ಸುತ್ತಲು ಕಾಂಪೌAಡ್ ನಿರ್ಮಿಸಿಕೊಂಡು ಮನೆಯ ಒಳಗೆ ಏನೇ ನಡೆದರೂ ಹೊರಗೆ ಗೋತ್ತಾಗುವುದಿಲ್ಲ. ಐಷರಾಮಿ ಜೀವನ,ಸದಾ ಹಿಂಬಾಲಕರನ್ನು ಜತೆಯಲ್ಲಿ ಕುಡಿಯುವುದು, ಅಲ್ಲಿಲ್ಲಿ ಗಲಾಟೆ ಮಾಡುವುದು ಈತನ ಚಾಳಿ. ಕೆಲ ತಿಂಗಳ ಹಿಂದೆ ಸೂಲಿಬೆಲೆ ಬಾರ್ ಮುಂದೆ ಗಲಾಟೆ ಮಾಡಿ ತನ್ನ ಬಳಿಯಿದ್ದ ಗನ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಈ ಪ್ರಕರಣದಲ್ಲಿ ಕೆಲ ತಿಂಗಳು ಜೈಲುವಾಸ ಅನುಭವಿಸಿ ಹೊರ ಬಂದಿದ್ದ. ಈತನಿಗೆ ಹಣಕಾಸು ಮೂಲ ಎಲ್ಲಿ ಎಂಬುದೇ ನಿಗೂಢವಾಗಿದೆ. ಗಾಂಜಾ, ಡ್ರಗ್ಸ್ ವ್ಯವಹಾರ ಇದೆ ಎಂಬ ಗುಸು ಗುಸು ಜನರ ಮದ್ಯ ಹರಿದಾಡುತ್ತಿದೆ. ಈತನ ಮೇಲೆ ನಿಗಾಯಿಟ್ಟು ಕ್ರಮ ಜರುಗಿಸದೆ ಸೂಲಿಬೆಲೆ ಪೊಲೀಸರು ಮೃದು ಧೋರಣೆ ಅನುಸರಿಸುತ್ತಿದ್ದರು. ಎಲ್ಲರಿಗೂ ನಾನು ಮಾಮೂಲು ಕೋಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಎಂಬ ಆರೋಪಗಳು ಈಗ ಹೊರ ಬೀಳುತ್ತಿವೆ. ಈತನ ಜತೆಗೆ ಇರುವವರನ್ನು ಹೆಡೆಮುರಿಕಟ್ಟಿ ತನಿಖೆಗೆ ಒಳಪಡಿಸಬೇಕಿದೆ.

ಆಕ್ರೋಶ : ಸುನೀತಾ ಕೇರಳದಲ್ಲಿ ಸಾವನ್ನಪ್ಪುತ್ತಿದ್ದಂತೆ ಈ ಕೊಲೆಯನ್ನು ಹಲವರು ಖಂಡಿಸಿದ್ದು ಕೇರಳದಲ್ಲಿ ಸದ್ದು ಮಾಡುತ್ತಿದೆ. ನಟಿ ಪಾರ್ವತಿ ತಿರುವೋತ್ತರ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿ ಆರೋಪಿಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಈ ನಡುವೆ ಕೇರಳ ಪೊಲೀಸರು ಪ್ರಕರಣವನ್ನು ಸೂಲಿಬೆಲೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ