Home ರಾಜ್ಯಸಮುದಾಯದ ಎಲ್ಲಾ ಮುಖಂಡರು ಸದಸ್ಯತ್ವ ಮಾಡಿಸಲು ಕ್ರಮ ವಹಿಸಬೇಕು : ಮಾದರ ಮಹಾಸಭಾ ಅಧ್ಯಕ್ಷ ಕೆ.ಹೆಚ್. ಮುನಿಯಪ್ಪ

ಸಮುದಾಯದ ಎಲ್ಲಾ ಮುಖಂಡರು ಸದಸ್ಯತ್ವ ಮಾಡಿಸಲು ಕ್ರಮ ವಹಿಸಬೇಕು : ಮಾದರ ಮಹಾಸಭಾ ಅಧ್ಯಕ್ಷ ಕೆ.ಹೆಚ್. ಮುನಿಯಪ್ಪ

ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸಭೆ

by Editor

ವಿಜಯ ನ್ಯೂಸ್ | ಬೆಂಗಳೂರು ಮೇ.೧೦

ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಣಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಧಾದಿಕಾರಿಗಳ ಸಭೆಯನ್ನು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾದಲ್ಲಿ ಆಯೋಜಿಸಿದ್ದು ಕಾರ್ಯಕ್ರಮ ವನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಮಾದರ ಮಹಾಸಭಾದ ಅಧ್ಯಕ್ಷರಾದ ಕೆಹೆಚ್. ಮುನಿಯಪ್ಪ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಸರ್ಕಾರದ ಸಚಿವರಾದ ಯೋಜನಾ ಸಚಿವ ಡಿ.ಸುಧಾಕರ್ ರವರ ನಿಧನದ ಹಿನ್ನಲೆಯಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೊರಲು ಎರಡು ನಿಮಿಷಗಳ ಕಾಲ ಮೌನ ಆಚೆರಣೆ ನಡೆಸಿದರು.

ನಂತರ ಮಾತನಾಡಿದ ಸಚಿವರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳು ಶೀಘ್ರವಾಗಿ ರಚನೆ ಮಾಡಿ ಮುಂದಿನ ತಿಂಗಳ ೧೪ ರಂದು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳ ಸದಸ್ಯರು ಅಂದರೆ ೩೬೫೨ ಸದಸ್ಯರು ಸೇರಿ ಸಭೆಯನ್ನು ನಡೆಸಬೇಕುಗುತ್ತದೆ. ಮುಂದಿನ ಸಭೆಯನ್ನು ಸಮುದಾಯದ ಎಲ್ಲಾ ನಾಯಕರು ಪಕ್ಷಾತೀತವಾಗಿ ಬಿಜೆಪಿ,ಜೆಡಿಎಸ್,ಕಾಂಗ್ರೆಸ್ ನ ಪಕ್ಷಗಳ ಎಲ್ಲಾ ನಾಯಕರನ್ನು ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಅವರನ್ನು ಒಂದು ಕಡೆ ಸೇರಿಸುವ ಜವಾಬ್ದಾರಿ ವಹಿಸಿದ್ದು ಮುಂದಿನ ಜೂನ್ ತಿಂಗಳ ೧೪ ರಂದು ನಡೆಸಲಿದ್ದೇವೆ ಎಂದರು.

ಕರ್ನಾಟಕ ಮಾದರ ಮಹಾಸಭಾ ಇದರ ಉದ್ದೇಶ ಶೋಷಿತ ಸಮುದಾಯದ ಅಭಿವೃದ್ಧಿ ಮಾಡುವುದಾಗಿದೆ ಸಮುದಾಯದ ತಾವೆಲ್ಲಾರು ಸದಸ್ಯತ್ವ ಮಾಡಿಸಬೇಕು ಒಳ ಮೀಸಲಾತಿ ಅನುಷ್ಠಾನಕ್ಕೆ ಎಲ್ಲಾ ಹೋರಾಟಗಾರರ ಸಂಘಟನೆಗಳ ಶ್ರಮದಿಂದ ಒಳಮೀಸಲಾತಿ ಜಾರಿಗೊಳಿಸಲು ಸಾದ್ಯವಾಯಿತು . ಮೀಸಲಾತಿಯು ಪ್ರವರ್ಗ ಎ ಗುಂಪಿಗೆ ೫.೨೫, ಬಿ ಗುಂಪಿಗೆ ೫.೨೫, ಸಿ ಗುಂಪಿಗೆ ೪.೫ ಸಿಕ್ಕಿದೆ. ನಾವು ಇದುವರೆಗೂ ೧೫ರಲ್ಲಿ ೧%ಕೂಡ ನಮ್ಮವರಿಗೆ ತಗೊಳ್ಳೋಕೆ ಅವಕಾಶ ಇರಲಿಲ್ಲ. ಇವತ್ತು ಕಾಂಗ್ರೆಸ್ ಪಕ್ಷದ ಸರ್ಕಾರ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಎಲ್ಲಾ ಕ್ಯಾಬಿನೆಟ್ ಸಚಿವರೆಲ್ಲರೂ ಕೂಡ ಸಚಿವ ಸಂಪುಟದ ಸರ್ವಾನುಮತದ ಒಪ್ಪಿಗೆಯಿಂದ ಈ ಕಾರ್ಯಕ್ರಮ ಜಾರಿಯಾಗಿದೆ ಎಂದರು

ಒAದನೇ ಹಂತವನ್ನು ಪೂರ್ತಿ ಮಾಡಿದ್ದೇವೆ, ಇನ್ನು ಸಾಕಷ್ಟು ಕೆಲಸಗಳು ಮಾಡೋದಿದೆ. ಸಿದ್ದರಾಮಯ್ಯ ನವರು ನುಡಿದಂತೆ ನಡೆದಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಚಿತ್ರದುರ್ಗದ ಒಂದು ಕಾರ್ಯಕ್ರಮದಲ್ಲಿ ಅವರು ಘೋಷಣೆ ಮಾಡಿದರು. ಡಾ.ಜಿ ಪರಮೇಶ್ವರ್ ರವರು ಪ್ರಣಾಳಿಕೆ ಅಧ್ಯಕ್ಷರಾಗಿ ಅದನ್ನ ಇವತ್ತು ಜಾರಿ ಮಾಡೋದಕ್ಕೆ ಕಾನೂನು ಸಚಿವರು ಮತ್ತು ಮಹದೇವಪ್ಪ ನವರು ಸಮಾಜ ಕಲ್ಯಾಣ ಸಚಿವರು ಮುಂದಾಗಿ ಈ ಕಾರ್ಯಕ್ರಮ ಆಗಿದೆ.

ಇಲ್ಲಿಯವರೆಗೂ ಭಿನ್ನಾಭಿಪ್ರಾಯಗಳು ಏನಿತ್ತು ಅದನ್ನ ಮರೆತು ೧೦೧ ಜಾತಿಗಳು ಒಟ್ಟಿಗೆ ಇರೋಣ. ೧೦೧ ಜಾತಿಗಳ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಭೇದ ಭಾವಗಳನ್ನು ಬಿಟ್ಟು ಒಗ್ಗಟ್ಟಾಗಿದ್ದಾಗ ಈ ಶೋಷಿತ ವರ್ಗದ ಎಲ್ಲರೂ ಕೂಡ ಒಟ್ಟಾಗಿ ಬಾಳಿ ಬದುಕಿದಾಗ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ.
ನಾವೆಲ್ಲರೂ ಈ ಒಂದು ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಬೇಕು ಮತ್ತು ಅದರ ಲಾಭವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು.

ಈ ತಿಂಗಳ ಕೊನೆಗೆ ಅಂದರೆ ಮೇ ೩೦ರ ಒಳಗಾಗಿ ಎಲ್ಲಾ ಜಿಲ್ಲಾ ಸಮಿತಿಗಳು ಮತ್ತು ತಾಲ್ಲೂಕು ಸಮಿತಿಗಳು ಕಡ್ಡಾಯವಾಗಿ ರಚನೆಯಾಗಬೇಕು. ಇದರಲ್ಲಿ ಯಾವುದೇ ವಿಳಂಬ ಬೇಡ. ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕನಿಷ್ಠ ೫೦ ಹೊಸ ಸದಸ್ಯರನ್ನು ಈ ಸಂಘಟನೆಗೆ ಸೇರಿಸುವ ಜವಾಬ್ದಾರಿ ಹೊರಬೇಕು. ಆ ಮೂಲಕ ರಾಜ್ಯಾದ್ಯಂತ ನಾವು ಲಕ್ಷಾಂತರ ಸದಸ್ಯರನ್ನು ಹೊಂದುವAತಾಗಬೇಕು. ಜೂನ್ ೧೪ನೇ ರಂದು ಬರುವ ಭಾನುವಾರ ಒಂದು ಬೃಹತ್ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸೋಣ. ಆ ಸಭೆಯ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ.

ನಮ್ಮ ಈ ಮಹಾಸಭಾದ ಅಥವಾ ಸಂಘಟನೆಯ ಮುಖ್ಯ ಉದ್ದೇಶ ಕೇವಲ ರಾಜಕಾರಣವಲ್ಲ. ಬದಲಾಗಿ ಬಡವರ ಮಕ್ಕಳನ್ನು, ಪೌರ ಕಾರ್ಮಿಕರ ಮಕ್ಕಳನ್ನು ಉತ್ತಮವಾಗಿ ಓದಿಸಿ ಅವರನ್ನ ದೊಡ್ಡ ಮಟ್ಟದ ಅಧಿಕಾರಿಗಳನ್ನಾಗಿ, ಡಾಕ್ಟರ್, ಇಂಜಿನಿಯರ್, IಂS, ಏಂS ಮಾಡುವಂತದ್ದು. ಅವರಿಗೆ ಶಿಕ್ಷಣದ ಹಕ್ಕನ್ನು ಮತ್ತು ಉದ್ಯೋಗದ ಅವಕಾಶವನ್ನು ಒದಗಿಸಿಕೊಡುವುದು ನಮ್ಮ ಮೊದಲ ಆದ್ಯತೆ.ನಮಗೆ ಸ್ವಾಭಿಮಾನವಾಗಿ ಬದುಕುವುದಕ್ಕೆ ಇವತ್ತು ಒಂದು ದೊಡ್ಡ ಅವಕಾಶ ಸಿಕ್ಕಿದೆ. ಇತಿಹಾಸದ ಪುಟಗಳಲ್ಲಿ ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರು ಅಜರಾಮರಾಗಿ ಉಳಿಯಲಿದ್ದಾರೆ. ನಾವೆಲ್ಲರೂ ಒಟ್ಟಾಗಿ, ಭಿನ್ನಾಭಿಪ್ರಾಯ ಮರೆತು ಈ ಶೋಷಿತ ವರ್ಗದ ಏಳಿಗೆಗಾಗಿ, ಸಮುದಾಯದ ಏಳಿಗೆಗಾಗಿ ಶ್ರಮಿಸೋಣ ಎಂದರು.

ಸಮುದಾಯದ ಪ್ರತಿಭಾವಂತ ಮಕ್ಕಳು ಎಸ್ ಎಸ್ ಎಲ್ ಸಿ,ಮತ್ತು ಪಿಯುಸಿಯಲ್ಲಿ ಉತ್ತಮ ಪಲಿತಾಂಶ ಪಡೆದ ೨೫ ಮಕ್ಕಳಿಗೆ ತಲಾ ೧೦ ಸಾವಿರ ರೂಗಳ ನೀಡವ ಮೂಲಕ ಗೌರವಿಸಿದರು

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಸಿದ್ದರಾಜು ಸ್ವಾಮೀಜಿ, ಆನಂದ ಮುನಿ ಸ್ವಾಮೀಜಿ, ಶಡಕ್ಷರಿ ಮುನಿ ಸ್ವಾಮೀಜಿ ,ಮಾಜಿ ಸಂಸದರಾದ ಎಲ್.ಹನುಮಂತಯ್ಯ,ಚ0ದ್ರಪ್ಪ, ನಿಗಮದ ಅಧ್ಯಕ್ಷರಾದ ಮಂಜುನಾಥ್ ,ಮಾಜಿ ಸಚಿವರಾದ ಕೋಟೆ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳು ಬೀಮಪ್ಪ,ತೇಗನೂರು,ಮುಖಂಡರಾದ ಡಾ.ಹೆಚ್.ಎಂ ಸುಬ್ಬರಾಜ್ ,ಶಿವಪ್ಪ, ವಿಶ್ವನಾಥ್,ಶ್ರೀನಿವಾಸ್ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಸದಸ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ