56
ಬೆಂಗಳೂರು ಗ್ರಾಮಾಂತರ : ಚಲಿಸುತ್ತಿದ್ದ ಥಾರ್ ಕಾರ್ ಗೆ ಬೀದಿನಾಯಿಯೊಂದು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ನಡೆದಿದೆ.ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರು ಆಂದ್ರ ಪ್ರದೇಶದ ಮೂಲದವರಾಗಿದ್ದು,ದೊಡ್ಡಬಳ್ಳಾಪುರ ಬಾಶೆಟ್ಟಹಳ್ಳಿಯಲ್ಲಿ ವಾಸವಾಗಿದ್ದರು.ಭಾನುವಾರ ರಜೆಯಿದ್ದ ಕಾರಣ ಊರಿಗೆ ಹೋಗಿ ವಾಪಸ್ ದೊಡ್ಡಬಳ್ಳಾಪುರಕ್ಕೆ ಬರುವಾಗ ಸೋಮವಾರ ಬೆಳಗಿನ ಜಾವ ಈ ಘಟನೆ ನಡೆಯಿತು ಎನ್ನಲಾಗಿದೆ.
ಸ್ಕೌಟ್ ಕ್ಯಾಪ್ ಕಾರು ಬರುವಾಗ ನಾಯಿಯೊಂದು ದಿಢೀರ್ ಅಡ್ಡ ಬಂದಿದೆ.ಇದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.ಕಾರಿನಲ
್ಲಿ ಮೂವರು,ಯುವತಿಯರು,ಇಬ್ಬರು ಯುವಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

