Home ರಾಜ್ಯಎ.ನಾರಾಯಣಸ್ವಾಮಿ ಜನಪರ ಕಾಳಿಜಿಯುಳ್ಳ ನಾಯಕ

ಎ.ನಾರಾಯಣಸ್ವಾಮಿ ಜನಪರ ಕಾಳಿಜಿಯುಳ್ಳ ನಾಯಕ

ಜನ್ಮದಿನದ ಶುಭಕೋರಿದ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಚ್.ಎಂ ಸುಬ್ಬರಾಜು

by Editor

ಹೊಸಕೋಟೆ : ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜನಪರ ಕಾಳಜಿಯುಳ್ಳ ನಾಯಕರಾಗಿದ್ದು, ಒಳ ಮೀಸಲು ಹೋರಾಟದಲ್ಲಿ ತನ್ನಾದೆಯಾದ ಕೊಡುಗೆ ನೀಡಿ ಸಮುದಾಯದ ಜನರ ಮನ ಗೆದ್ದಿದ್ದಾರೆ ಎಂದು ಮಾದರ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಎಚ್.ಎಂ ಸುಬ್ಬರಾಜು ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರ ಜನ್ಮದಿನದಂದು ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಮಾತನಾಡಿದರು.

ಎ.ನಾರಾಯಣಸ್ವಾಮಿ ಅವರು ಅಧಿಕಾರ ಅವಧಿಯಯಲ್ಲಿ ರಾಜ್ಯಾಧ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ, ಜಗಜೀವನ್ ರಾಂ ಭವನ, ದೇವರಾಜು ಅರಸು ಭವನಗಳನ್ನು ನಿರ್ಮಾಣ ಸ್ವಾಭಿಮಾನಿ ನಾಯಕರನ್ನಿಸಿಕೊಂಡಿದ್ದರು. ಎಸ್ಸಿ,ಎಸ್ಟಿ,ಓಬಿಸಿ ಮಕ್ಕಳ ಶಿಕ್ಷಣಕ್ಕಾಗಿ ೨೦೦ಕ್ಕೂ ಹೆಚ್ಚು ವಸತಿ ಶಾಲೆಗಳನ್ನು ನೀಡಿ,ಪ್ರತಿ ಘಟಕಕ್ಕೆ ೧೫ ಕೋಟಿ ವೆಚ್ಚದಲ್ಲಿ ಆನೇಕ ಆಧುನಿಕ ಘಟಕಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಬಲವಾದ ಅಡಿಪಾಯ ಹಾಕಿದ ದೂರ ದೃಷ್ಟಿ ನಾಯಕರಾಗಿದ್ದಾರೆ. ಎಸ್ಸಿ,ಎಸ್ಟಿ ಗೃಹ ನಿರ್ಮಾಣ ಸಹಾಯಧನವನ್ನು ೧ ಲಕ್ಷದಿಂದ ೨.೫೦ ಲಕ್ಷಕ್ಕೆ ಹೆಚ್ಚಿಸಿದರು. ವಿದ್ಯಾರ್ಥಿವೇತನವನ್ನು ಇವರ ಅಧಿಕಾರವಧಿಯಲ್ಲಿ ಹೆಚ್ಚಿಸಿ ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಿದ್ದರು. ಒಳ ಮೀಸಲು ಹೋರಾಟದಲ್ಲಿ ಸಮುದಾಯಕ್ಕೆ ತನ್ನಾದೆಯಾದ ಕೊಡುಗೆ ನೀಡಿ ಸಮುದಾಯದ ಅಭಿವೃದ್ದಿಗೆ ಶಕ್ತಿ ತುಂಬಿದ್ದಾರೆ ಎಂದರು

ಈ ಸಂದರ್ಭದಲ್ಲಿ ಹೊಸಕೋಟೆ ಮಾದರ ಮಹಾಸಭಾ ರಾಜ್ಯ ಸಂಘಟಕರಾದ ಬಿ.ಕೆ ಶಿವಪ್ಪ,ಹೊಸಕೋಟೆ ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ಗುಟ್ಟಹಳ್ಳಿ ವಿ.ನಾಗರಾಜ್,ಜಿಲ್ಲಾ ಮಾದರ ಮಹಾಸಭಾ ವಿಶೇಷ ಅಹ್ವಾನಿತರಾದ ಹೊಸಕೋಟೆ ವಿಜಯಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ