Home ರಾಜ್ಯಯಾದವ ಭವನ ಉದ್ಘಾಟನೆಯಾಗಿಲ್ಲ,ಬರೀ ಪೂಜೆ ಅಷ್ಟೇ

ಯಾದವ ಭವನ ಉದ್ಘಾಟನೆಯಾಗಿಲ್ಲ,ಬರೀ ಪೂಜೆ ಅಷ್ಟೇ

ಮುಖ್ಯಮಂತ್ರಿಗಳಿ0ದ ಉದ್ಘಾಟಿಸಲು ನಿರ್ಣಯ ಎಂದು ತಾಲೂಕು ಅಧ್ಯಕ್ಷ ವಿ.ಪ್ರಸಾದ್ ಸ್ಪಷ್ಟನೆ

by Editor

ಹೊಸಕೋಟೆ : ಹಲವಾರು ದಾನಿಗಳ ಸಹಕಾರದಿಂದ ನಿರ್ಮಾಣಗೊಂಡಿರುವ ಹೊಸಕೋಟೆ ಯಾದವ ಭವನ ಇನ್ನೂ ಉದ್ಘಾಟನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರನ್ನು ಆಹ್ವಾನಿಸಿ ಉದ್ಘಾಟನೆ ಮಾಡಲು ತಾಲೂಕು ಯಾದವ ಸಂಘ ನಿರ್ಣಯಿಸಿದೆ ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಯಾದವ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದವ ಭವನ ಹೊಸ ಕಟ್ಟಡವಾಗಿರುವ ಕಾರಣ ಮೇ.೧೧ ರಿಂದ ಏ.೧೩ರವರಿಗೆ ಮೂರು ದಿನಗಳ ಕಾಲ ಶ್ರೀನಿವಾಸ ಕಲ್ಯಾಣೋತ್ಸವ,ಮಹಾಗಣಪತಿ ಪ್ರತಿಷ್ಠಾಪನೆ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಪೂಜೆ ಕರ‍್ಯಕ್ರಮಕ್ಕೆ ತಾಲೂಕು ಯಾದವ ಸಂಘದ ಪದಾಧಿಕಾರಿಗಳು,ಯಾದವ ಸಮುದಾಯದವರ,ಹಿತೃಷಿಗಳು,ದಾನಿಗಳು ಭಾಗವಹಿಸಿದ್ದರು. ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ.ಕಾರಣ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿ0ದ ಹಾಗೂ ಸಚಿವರಿಂದ ಭವನ ಉದ್ಘಾಟನೆ ಸಮಯದಲ್ಲಿ ಕ್ಷೇತ್ರದ ಶಾಸಕರ ಸಹಕಾರದೊಂದಿಗೆ ಎಲ್ಲ ಪಕ್ಷದ ನಾಯಕರು,ದಾನ ನೀಡಿದ ಗಣ್ಯರನ್ನು ಆಹ್ವಾನಿಸಿ ಕರ‍್ಯಕ್ರಮ ಮಾಡಲು ನಿರ್ಣಯಿಸಲಾಗಿತ್ತು.ಆದರೇ,ಭವನ ಪೂಜೆ ಸಮಯದಲ್ಲಿ ಕೆಲವರು ಉದ್ಘಾಟನೆ ಗೊಂದಲು ಸೃಷ್ಟಿಸಿದ್ದು ಸರಿಯಲ್ಲ . ಕೆಲವರು ಶಾಸಕರಿಗೆ ತಪ್ಪು ಮಾಹಿತಿ ನೀಡಿ ಲೋಕಾರ್ಪಣೆ ಎಂದು ಹೇಳಿ ಆಹ್ವಾನಿಸಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ಪ್ರಸಾದ್ ಅಸಮಾದಾನ ವ್ಯಕ್ತಪಡಿಸಿದರು.

೧೯೯೦ ರಲ್ಲಿ ಕಾನೂನು ಬದ್ದವಾಗಿ ತಾಲೂಕು ಯಾದವ ಸಂಘ ಸ್ಥಾಪಿಸಲಾಯಿತು. ಭವನ ನಿರ್ಮಾಣಕ್ಕೆ ೨೦೧೭ ರಲ್ಲಿ ಸರ್ವೆ ನಂ ೩೦೦ ರಲ್ಲಿ ಸರಕಾರದಿಂದ ಜಮೀನು ಮಂಜೂರು ಮಾಡಿಸಿ ಸಿದ್ದರಾಮಯ್ಯ ಸರಕಾರದಿಂದ ೩೦ ಲಕ್ಷ ಅನುಧಾನ, ಅಂದಿನ ಮಾಜಿ ಸಂಸದ ವೀರಪ್ಪ ಮೊಯ್ಲಿ ಸಂಸದರ ಅನುಧಾನದಲ್ಲಿ ೨೦ ಲಕ್ಷ , ಅಂದಿನ ಶಾಸಕ ಎಂಟಿಬಿ ನಾಗರಾಜ್ ರಿಂದ ೧೫ ಲಕ್ಷ, ಈಗಿನ ಶಾಸಕ ಶರತ್ ಬಚ್ಚೇಗೌಡರಿಂದ ೨೫ ಲಕ್ಷ ದೇಣಿಗೆ ಹಾಗೂ ತಾಲೂಕು ಸಮುದಾಯದ ಮುಖಂಡರು ಹಾಗೂ ಸಮುದಾಯದ ಪ್ರತಿ ಕುಟುಂಬದಿ0ದ ದೇಣಿಗೆ ಪಡೆದು ನಿರ್ಮಾಣ ಮಾಡಲಾಗಿದೆ. ಕೆಲವರು ರಾಜಕೀಯ ಉದ್ದೇಶಕ್ಕಾಗಿ ಭವನ ನಿರ್ಮಾಣದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಮುದಾಯ ಒಡೆಯುವ ಕೆಲಸ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಯಾದವ ಸಂಘದ ಉಪಾಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಚನ್ನಪ್ಪ, ಸಂಘಾಟನಾ ಕಾರ್ಯದರ್ಶಿ ಶಂಕರನಾರಾಯಣ, ಖಜಾಂಚಿ ಮುನಿಅಣ್ಣಯ್ಯ, ನಿರ್ದೇಶಕರಾದ ವೆಂಕಟೇಶಪ್ಪ, ರಾಮಸ್ವಾಮಿ, ನಾರಾಯಣಸ್ವಾಮಿ, ಕೆ.ಟಿ ರಾಜಪ್ಪ, ಚಿಕ್ಕರಾಜಪ್ಪ, ಎ.ವಿ ಮುನಿರಾಜ್, ಎ.ಸಿ ಆನಂದ್‌ಕುಮಾರ್, ಡಿ.ನಾರಾಯಣಸ್ವಾಮಿ, ಚರಣ್‌ಕುಮಾರ್ ಹಾಜರಿದ್ದರು.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ