ಹೊಸಕೋಟೆ : ಹೊಸಕೋಟೆ ತಾಲೂಕಿನ ದೊಡ್ಡ ಕೊರಟಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಮುಖ್ಯ ಕರ‍್ಯ ನಿರ್ವಾಹಣಾಧಿಕಾರಿ ಶಶಿ ಕುಮಾರ್ ಅಕಾಲಿಕ ಮರಣ ಹೊಂದಿದ ವಿಷಯ ತಿಳಿದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರು ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ದೊಡ್ಡ ಕೊರಟಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕರ‍್ಯನಿವಾರ್ಹಣಾಧಿಕಾರಿ ಶಶಿಕುಮಾರ್ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ವಿಷಯ ತಿಳಿದ ಕೂಡಲೇ ಹೊಸಕೋಟೆ ಮತ ಕ್ಷೇತ್ರದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಮೃತನ ಕುಟುಂಬಸ್ಥರನ್ನು ಭೇಟಿ ಸಾಂತ್ವನ ಹೇಳಿದರು. ಮೃತನ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿಯನ್ನು ತುಂಬುವ ಸಲುವಾಗಿ ಬಿ.ವಿ ಸತೀಶ್‌ಗೌಡರು ವ್ಯಯುಕ್ತಿಕವಾಗಿ ೧ ಲಕ್ಷ ರೂ.ಗಳನ್ನು ಮೃತನ ಪತ್ನಿ ಗಾಯಿತ್ರಿ ಅವರಿಗೆ ನೀಡಿದರು . ಹಾಲು ಉತ್ಪಾದಕರ ಕಷ್ಟ, ಸುಖಗಳಿಗೆ ಬಮೂಲ್ ಜತೆಯಾಗಿ ನಿಲ್ಲಿಲ್ಲಿದೆ. ಬೆಂಗಳೂರು ಹಾಲು ಒಕ್ಕೂಟದಿಂದ ಮೃತನ ಕುಟುಂಬಕ್ಕೆ ಸಿಗಬೇಕಿರುವ ಮರಣ ಪರಿಹಾರ ನಿಧಿಯನ್ನು ಶೀಘ್ರ ದೊರಕಿಸಿಕೊಡುವುದಾಗಿ ತಿಳಿಸಿದರು. ಹೊಸಕೋಟೆ ಡೇರಿ ವ್ಯವಸ್ಥಾಪಕ ಶ್ರೀರಾಮ್,ಬಮೂಲ್ ವೈದ್ಯ ಡಾ.ಸಂತೋಷ್ ಕುಮಾರ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

