ವಿಜಯ ನ್ಯೂಸ್ ದೇವನಹಳ್ಳಿ ಮೇ ೨೦
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡ ಸಾಗರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕೆರೆಯಂಗಳದಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತ ವ್ಯಕ್ತಿಯನ್ನು ರಾಜೇಶ್ ( ೩೫) ಎಂದು ಗುರ್ತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕಾರ್ಪೆಂಟರ್ ಕೆಲಸಕ್ಕೆ ಹೋಗಿದ್ದ ರಾಜೇಶ್ ಮನೆಗೆ ಬಂದಿರಲಿಲ್ಲ. ಆತಂಕಗೊAಡ ಕುಟುಂಬಸ್ಥರು ಎಲ್ಲಡೆ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಮೃತ ರಾಜೇಶ್ ತಮ್ಮನಿಗೆ ಕರೆ ಮಾಡಿ ಸಾಲ ಕಟ್ಟಬೇಕು.ಹಣ ಕಳುಹಿಸು ಹೇಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಳಿಕೆ ಸಂಪರ್ಕ ಕಡಿತವಾಗಿದ್ದು, ಇದಾದ ನಂತರ ರಾಜೇಶನ ಶವ ಕೆರೆಯಂಗಳದಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜೇಶ್ ಮೀಟರ್ ಬಡ್ಡಿ ದಂಧೆಯವರ ಬಳಿ ಸಾಲ ಪಡೆದಿದ್ದ ಎನ್ನಲಾಗಿದೆ.ಅವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡನಾ? ಅಥವಾ ಹಣದ ವಿಚಾರವಾಗಿ ಬಡ್ಡಿದಂಧೆಕೋರರೇ ಕೊಲೆ ಮಾಡಿದ್ರಾ? ಎಂಬ ಪ್ರಶ್ನೆಗಳು ಕುಟುಂಬಸ್ಥರನ್ನು ಕಾಡುತ್ತಿವೆ.ಸಾಲ ಕೊಟ್ಟವರು ಹಣದ ವಿಚಾರವಾಗಿ ಕೊಲೆ ಮಾಡಿ ಬಿಸಾಡಿರಬಹುದು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
174
previous post

