ವಿಜಯ ನ್ಯೂಸ್,ಬೆಂಗಳೂರು ಗ್ರಾಮಾಂತರ ಮೇ.17
ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತ ಸಾಮಾನ್ಯವಾಗಿ ಅಂಗಡಿ,ಹೋಟಲ್,ಬೇಕರಿಗಳು ಮುಂದೆ ಬೋರ್ಡ್ ಹಾಕಿರುವುದನ್ನು ನೀವು ನೋಡಿರಬಹುದು,ಅದರೇ,ಇಲ್ಲೊಬ್ಬ ಸಾಲ ಕೊಟ್ಟು ಜೀವ ಕಳೆದುಕೊಂಡಿದ್ದಾನೆ.ಕೇವಲ 200 ರೂ ಸಾಲ ಒಬ್ಬ ವ್ಯಕ್ತಯ ಜೀವ ತೆಗೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಎಂಬ 42 ವರ್ಷದ ವ್ಯಕ್ತಿಯೊಬ್ಬ ಹೊಟ್ಟೆ ಪಾಡಿಗಾಗಿ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.ಈ ಟೀ ಅಂಗಡಿಗೆ ಬರುತ್ತಿದ್ದ ಮುನಿರಾಜ್ ಎಂಬಾತ ಟೀ ಕುಡಿದು ಕಾಸು ಕೊಡದೆ ಸಾಲ ಹೇಳಿ ಹೋಗುತ್ತಿದ್ದ ಎನ್ನಲಾಗಿದೆ.ಸಾಲ ಹೆಚ್ಚಾದಾಗ ವ್ಯವಹಾರ ನಡೆಸುವುದು ಮಂಜುನಾಥನಿಗೆ ಕಷ್ಟವಾಗಿದೆ.ಹೇಗೋ ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದ ಮಂಜುನಾಥ್ ಟೀ ಅಂಗಡಿಗೆ ಮೇ.12 ರಂದು ಮುನಿರಾಜ್ ಬಂದು ಟೀ ಕೇಳಿದ್ದಾನೆ ಎನ್ನಲಾಗಿದೆ.ಆಗ ಮಂಜುನಾಥ್ ಹಳೇ ಸಾಲ 200 ರೂ ಕೊಡು ಎಂದು ಕೇಳಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು,ಮುನಿರಾಜ್ ಅಲ್ಲೇ ಇದ್ದ ನೀಲಗಿರ ಮರದ ತುಂಡು ಎತ್ತಿಕೊಂಡು ಮಂಜುನಾಥ್ ನ ಮೇಲೆ ಹಲ್ಲೆ ನಡೆಸಿದ್ದು,ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಮುನಿರಾಜ್ ಈ ಹಿಂದೆ ಕೂಡ ಅಪರಾಧ ಪ್ರಕರಣಗಳ ಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ.ಈ ಬಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

