Home ಅಪರಾಧಬಾರ್ ಕ್ಯಾಶಿಯರ್‌ನ ಬಾಸ್ ಎಂದು ಕರೆದಿದ್ದಕ್ಕೆ ಬಿತ್ತು ಹೆಣ

ಬಾರ್ ಕ್ಯಾಶಿಯರ್‌ನ ಬಾಸ್ ಎಂದು ಕರೆದಿದ್ದಕ್ಕೆ ಬಿತ್ತು ಹೆಣ

ಮದ್ದೂರು ಕೊಲೆ ಪ್ರಕರಣ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

by Editor

ವಿಜಯ ನ್ಯೂಸ್ ಮಂಡ್ಯ ಮೇ,೨೦
ಸಣ್ಣ ವಿಚಾರಕ್ಕೆ ಕೆ.ಹೊನ್ನಲಗೆರೆಯಲ್ಲಿ ಯುವಕ ಹತ್ಯೆಯಾಗಿದೆ ಎಂದು ಮಂಡ್ಯ ಎಸ್ಸಿ ಡಾ.ಶೋಭಾರಾಣಿ ಅವರು ತಿಳಿಸಿದ್ದಾರೆ.ಕೊಲೆ ಪ್ರಕರಣ ಸಂಬ0ಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾರ್ ಒಂದರಲ್ಲಿ ಸಣ್ಣ ಕಿರಿಕ್ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಬಾರ್ ಕ್ಯಾಶಿಯರ್‌ನ ಬಾಸ್ ಎಂದಿದ್ದಕ್ಕೆ ಹಂತಕರು ಕತ್ತು ಕುಯ್ದು ಕೊಂದಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆಯಲ್ಲಿ ಕೃತ್ಯ ನಡೆದಿದೆ. ಕಳೆದ ೬ ತಿಂಗಳ ಹಿಂದಷ್ಟೆ ಪ್ರೀತಿಸಿ ಮದುವೆಯಾಗಿದ್ದ ಮೃತ ಸುನೀಲ್.ಹೆಂಡತಿ ಗರ್ಭಿಣಿ ಆಗಿದ್ದ ಖುಷಿಯಲ್ಲಿ ಸೀಮಂತ ಮಾಡಲು ಬೆಂಗಳೂರಿನಿ0ದ ಊರಿಗೆ ಬಂದಿದ್ದ. ಹೆಂಡತಿಯ ರಿಪೋರ್ಟ್ ತರಲು ಹೋಗಿ ಬರುವ ವೇಳೆ ಕೊಲೆಯಲ್ಲಿ ಅಂತ್ಯವಾಗಿದೆ.
ಕೆ.ಹೊನ್ನಲಗೆರೆಯ ದೀಪಾ ಬಾರ್ ಒಂದರಲ್ಲಿ ಸತೀಶ್, ಸಿದ್ದು, ಸುನೀಲ್ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ಬಳಿಕ ಬಾರ್ ಕ್ಯಾಶಿಯರ್‌ಗೆ ಹೋಗಿ ಬರ್ತಿನಿ ಬಾಸ್ ಎಂದು ಸುನೀಲ್ ಹೇಳಿದ. ಬಾಸ್ ಎಂದಿದ್ದಕ್ಕೆ ಸುನೀಲ್ ಹಾಗೂ ಅಜ್ಜಹಳ್ಳಿಯ ಹುಡುಗರ ನಡುವೆ ಕಿರಿಕ್ ಆಗಿತ್ತು.ಇದಾದ ಮೇಲೆ ಊರಿಗೆ ತೆರಳುವ ವೇಳೆ ಕಾರಿನಲ್ಲಿ ಬಂದು ಸುನೀಲ್ ಮೇಲೆ ಅಟ್ಯಾಕ್ ಮಾಡಿ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಂಡ್ಯ ಎಸ್ಪಿ ಡಾ.ವಿಜೆ ಶೋಭಾರಾಣಿ ಹೇಳಿದ್ದಾರೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ