Home ಅಪರಾಧಡೆತ್ ನೋಟ್ ಬರೆದಿಟ್ಟು‌ ಮಹಿಳೆ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು‌ ಮಹಿಳೆ ಆತ್ಮಹತ್ಯೆ

by Editor

ವಿಜಯನ್ಯೂಸ್, ಬಳ್ಳಾರಿ ಮೇ.20
ಗಂಡ ಮತ್ತ ಅತ್ತೆಯ ಕಿರುಕುಳ ತಾಳಲಾರದೆ ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆ ಐಶ್ವರ್ಯ.

ಏನೀದು ಘಟನೆ: ಪ್ರೀತಿಸಿ ಮದುವೆಯಾದ ಜೋಡಿ, ಗಂಡ ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯ, ಅವಳ ಪಾಲಿಗೆ ಸಂಸಾರ ಸುಖದ ಸುಪತ್ತಿಗೆ ಆಗಬೇಕಿತ್ತು. ಆದರೆ ಅತ್ತೆ ಮತ್ತು ಗಂಡನಿಂದ ನಿರಂತರ ಮಾನಸಿಕ ಕಿರುಕುಳದಿಂದ ಮನನೋದ ಆಕೆ ನೇಣಿಗೆ ಶರಣಾಗಿದ್ದಾಳೆ.

ಪತಿ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತ ಗೃಹಿಣಿ ತನ್ನ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ

ಐಶ್ವರ್ಯ ಮತ್ತು ಪ್ರದೀಪ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು, ಗಂಡ ಪ್ರದೀಪ್ ಕುಮಾರ್ ಸರ್ಕಾರಿ ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಐಶ್ವರ್ಯ ಗಂಡ ಮತ್ತು ಅತ್ತೆಯ ಕಿರುಕುಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ನನ್ನ ಸಾವಿಗೆ ಗಂಡನ ಮನೆಯವರೇ ಕಾರಣ, ಅವರಿಗೆ ನಾನು ಇಷ್ಟ ಇರಲಿಲ್ಲ, ವರದಕ್ಷಿಣೆ ಕಾರಣಕ್ಕೆ ದಿನಾ ಕಿರುಕುಳ ನೀಡಿದ್ದರು, ನನ್ನ ಗಂಡ ಸಹ ಅವರಿಗೆ ಸಪೋರ್ಟ್ ಮಾಡುತ್ತಿದ್ದರು. ಏನೇ ಅದ್ರು ನನ್ನದೆ ತಪ್ಪು ಅನ್ನುವಂತೆ ಮಾತನಾಡುತ್ತಿದ್ದರು.

ನಾನು ನನ್ನ ಗಂಡನಿಗೆ ಸುಳ್ಳು ಹೇಳಿ ಮದುವೆಯಾಗಿರಲಿಲ್ಲ. ಆದರೆ ನನ್ನ ಗಂಡನಿಗೆ ನನ್ನ ಮೇಲೆ ಅನುಮಾನ ನಾನು ಯಾವುದೇ ತಪ್ಪು ಮಾಡಿಲ್ಲ. ಗಂಡನ ಮನೆಯಲ್ಲಿ ನನ್ನನ್ನು ಅಳಿನಂತೆ ನೋಡುತ್ತಿದ್ದರು ಅತ್ತೆಗೆ ಸೊಸೆ ಎಂಬ ಪ್ರೀತಿಯೇ ಇರಲಿಲ್ಲ, ಯಾವಾಗಲು ಬೈಯುತ್ತಿದ್ದರು, ಆ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದೆ.

ನನಗೆ ಗಂಡನನ್ನು ಬಿಟ್ಟಿರಲು ಆಗುವುದಿಲ್ಲ, ಹಾಗಂತ ತವರು ಮನೆಯಲ್ಲಿ ಪರ್ಮನೆಂಟ್ ಇರಲು ಆಗುವುದಿಲ್ಲ, ಸಮಾಜದಲ್ಲಿ ಗೌರವ ಇರುವುದಿಲ್ಲ ಆದರಿಂದ ನಾನು ಸಾಯುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾರೆ.ಕಂಪ್ಲೀ‌ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ