Home ರಾಜ್ಯ೩೦ ಜನರಿಗೆ ಉಚಿತ ಕನ್ನಡಕಗಳ ವಿತರಣೆ

೩೦ ಜನರಿಗೆ ಉಚಿತ ಕನ್ನಡಕಗಳ ವಿತರಣೆ

ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್

by Editor

ಸೂಲಿಬೆಲೆ : ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ೩೦ ಜನರಿಗೆ ಉಚಿತ ಕನ್ನಡಗಳ ವಿತರಣೆ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ ಕನ್ನಡಕಗಳನ್ನು ವಿತರಿಸಿ ಮಾತನಾಡಿ,
ಜೇನುಗೂಡು ಟ್ರಸ್ಟ್ ಉಚಿತ ನೇತ್ರ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಸರಕಾರಿ ಶಾಲೆ ಕಾಲೇಜುಗಳ ಬಲವರ್ದನೆಗೆ ಶ್ರಮಿಸುತ್ತಿದೆ. ಇಂಥ ಸಮಾಜ ಮುಖಿ ಕೆಲಸಗಳು ಜನರಿಗೆ ಅನುಕೂಲವಾಗಿವೆ ಎಂದರು
ಪಿಡಿಒ ಮಂಜುನಾಥ್ ಮಾತನಾಡಿ, ಸರಕಾರಿ ಶಾಲೆ ಮತ್ತು ಕಾಲೇಜುಗಳ ಅಭಿವೃದ್ದಿಗಾಗಿ ಗ್ರಾಪಂದಿAದ ಅಗತ್ಯ ಸಹಕಾರ ನೀಡಲಾಗುವುದು ಎಂದರು
ಪ್ರಾAಶುಪಾಲ ಮಂಜುನಾಥ್ ಮಾತನಾಡಿ, ಕಾಲೇಜಿನಲ್ಲಿ ಶೇ. ೯೭ ರಷ್ಟು ಫಲಿತಾಂಶ ಬಂದಿದ್ದು, ಪೋಷಕರು ತಮ್ಮ ಮಕ್ಕಳ ಪಿಯು ಕಾಲೇಜು ಶಿಕ್ಷಣಕ್ಕಾಗಿ ಈ ಕಾಲೇಜಿಗೆ ದಾಖಲಿಸಬೇಕು ಎಂದರು
ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಿನ್ಸಿಪಾಲ್ ವೆಂಕಟೇಶ್, ವಲಯ ಅರಣ್ಯಾಧಿಕಾರಿ ಪುಷ್ಪಾ, ಟ್ರಸ್ಟಿನ ಉಪಾಧ್ಯಕ್ಷ ಚೌಡೇಗೌಡ, ನಿರ್ದೇಶಕರಾದ ಸೈಯದ್ ಮೆಹಬೂಬ್, ಜಿಯಾವುಲ್ಲಾ, ನಯಾಜ್ ಖಾನ್, ಅತ್ತಿಬೆಲೆ ಮಂಜುನಾಥ್, ಬೆಟ್ಟಹಳ್ಳಿ ಗೋಪಿನಾಥ್, ಕಾಲೇಜಿನ ಉಪನ್ಯಾಸಕರಾದ ಸುಬ್ರಮಣಿ,ಕುಮಾರ್, ಹಾಜರಿದ್ದರು

 

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ