Home ರಾಜ್ಯನಗರದ ಸ್ವಚ್ಚತೆ ಕಾಪಾಡುವುದು ನಮ್ಮಲ್ಲರ ಕರ್ತವ್ಯ

ನಗರದ ಸ್ವಚ್ಚತೆ ಕಾಪಾಡುವುದು ನಮ್ಮಲ್ಲರ ಕರ್ತವ್ಯ

ಅಂಬೇಡ್ಕರ್ ಕಾಲೊನಿಯಲ್ಲಿ ತ್ಯಾಜ್ಯ ವಿಂಗಡಣೆ ಬಗೆ ಅರಿವು ಮೂಡಿಸುವ ಕಾರ್ಯಕ್ರಮ

by Editor

ಹೊಸಕೋಟೆ : ನಗರದಲ್ಲಿ ಇತ್ತೀಚಿಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಅನಿರೀಕ್ಷಿತ ರೈಡ್, ದಂಡ ವಿಧಿಸಲಾಗುತ್ತಿದ್ದು. ಪ್ಲಾಸ್ಟಿಕ್ ಬಳಕೆಯನ್ನು ಜನರು ಕಡಿಮೆ ಮಾಡಿದರೆ ಯಾವ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.ನಗರ ಸ್ವಚ್ಚತೆ ನಮ್ಮಲ್ಲರ ಕರ್ತವ್ಯವಾಗಬೇಕು ಎಂದು ನಗರಸಭೆ ಆಯುಕ್ತ ನೀಲಾಲೋಚನ ಪ್ರಭು ಹೇಳಿದ್ದಾರೆ.

ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಗರ ಸಭೆ ವತಿಯಿಂದ ಹಮ್ಮಿಕೊಂಡಿದ್ದ ತ್ಯಾಜ್ಯ ವಿಂಡಗಣೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಜನರು ಕೈಚೀಲ ವಿಲ್ಲದೆ ಮಾರುಕಟ್ಟೆಗೆ ತೆರಳುವ ಕಾರಣ ಅಂಗಡಿಗಳಲ್ಲಿ ಅನಿವಾರ್ಯವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಕಳ್ಳ ಮಾರ್ಗಗಳಿಂದ ತರಿಸಿಕೊಳ್ಳುವಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ಇದರಿಂದ ಮನೆಯಲ್ಲಿ ಸಂಗ್ರಹಗೊಳ್ಳುವ ಪ್ಲಾಸ್ಟಿಕ್ ಕವರ್ ಗಳಲ್ಲಿ ಕಸವನ್ನು ತುಂಬಿ ರಸ್ತೆ, ಚರಂಡಿ, ಖಾಲಿ ಜಾಗದಲ್ಲಿ ಕಸದ ಕವರ್ ಎಸೆದು ಹೋಗುತ್ತಾರೆ.
ಕಸವನ್ನು ಎಲ್ಲಂದರೆ ಅಲ್ಲೆ ಬೀಸಾಕುವ ಮುನ್ನ ಪೌರ ಕಾರ್ಮಿಕರು ಸಹ ನಮ್ಮಂತೆ ಮನುಷ್ಯರು ಅವರಿಗೂ ಗೌರವಯುತ ಜೀವನ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಪೌರ ಕಾರ್ಮಿಕರು ಒಂದು ದಿನ ಕೆಲಸ ಮಾಡಿಲ್ಲ ಎಂದರೆ ನಗರದ ಸ್ವಚ್ಚತೆ ಹೇಗಿರುತ್ತೆ ಎಂಬುದನ್ನು ಊಹಿಸಿಕೊಳ್ಳಲು ಆಗದು. ಆದ್ದರಿಂದ ನಗರದ ಸ್ವಚ್ಚತೆಯನ್ನು ಕಾಪಾಡುವುದು ಕೇವಲ ನಗರಸಭೆಗೆ ಮಾತ್ರ ಸೇರಿದ್ದಲ್ಲ ಸಾರ್ವಜನಿಕರ ಗುರುತರ ಜವಾಬ್ದಾರಿಯು ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ನಗರಸಭೆಯ ಹಿರಿಯ ಆರೋಗ್ಯ ಅಧಿಕಾರಿ ಅಂಜಿನಪ್ಪ, ಶೋಭಾ, ಅಮೃತಾ ಹಾಗೂ ನಗರಸಭೆಯ ಸಮುದಾಯ ಅಧಿಕಾರಿ, ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್
ಕಾರ್ಯಕ್ರಮದ ಅಂಗವಾಗಿ ಕಾಲೋನಿಯ ಪ್ರತಿ ಮನೆ ಮುಂದೆ ಪರಿಸರ ಜಾಗೃತಿ ಘೋಷವಾಕ್ಯ, ರಂಗೊಲಿ ಸ್ಪರ್ಧೆ ಏರ್ಪಡಿಸಿದ್ದು ನೋಡುಗರ ಕಣ್ಮನ ಸೆಳೆಯಿತು. ಮಕ್ಕಳು ಗೃಹಿಣಿಯರು ತಾವು ಬಿಡಿಸಿದ ರಂಗೊಲಿಯಲ್ಲಿ ಹಸಿ ಕಸ ಯಾವುದು, ಒಣ ಕಸ ಯಾವುದು, ತ್ಯಾಜ್ಯದಿಂದ ಪ್ರಾಣಿ ಪಕ್ಷಿಗಳ ಮೇಲೆ ಹೇಗೆ ದುಷ್ಪರಿಣಾಮ ಬಿರುತ್ತೆ, ಪ್ರಕೃತಿ ಮೇಲೆ ಹೇಗೆ ಪರಿಣಾಮ ಬಿರುತ್ತೆ ಎಂಬುದರ ಬಗೆ ಜಾಗೃತಿ ಮೂಡಿಸಲಾಯಿತು. ರಂಗೋಲಿ ಮೂಲಕ ಸ್ವಚ್ಚತೆಯ ಅರಿವು ಮೂಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ