
ಬೆಂಗಳೂರು ಗ್ರಾಮಾಂತರ ಜೂನ್.೧೩
ಜಿಲ್ಲೆಯ ಹೊಸಕೋಟೆ ಮತ್ತು ದೇವನಹಳ್ಳಿ ರಾಣಿಕ್ರಾಸ್ ಬಳಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಜಿಲ್ಲೆಯ ದಾಬಸ್ ಪೇಟೆಯಿಂದ ಚೆನ್ನೆöÊಗೆ ಸಂಪರ್ಕ ಹೊಂದಿರುವ ಎಸ್‌ಟಿಆರ್‌ಆರ್ ಹೆದ್ದಾರಿಯ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಬಳಿ ಮರ್ಸಿಡಿಸ್ ಬೆಂಜ್ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಾಜಿಯಾ (೨೮),ರಿಜ್ವಾನ್ (೩೦) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ರಿಜ್ವಾನ್ ಹಾರಿ ಸುಮಾರು ದೂರದಲ್ಲಿ ಆತನ ಶವ ಪತ್ತೆಯಾಗಿದೆ. ಮೂಲತಃ ತಮಿಳುನಾಡಿನವನಾದ ರಿಜ್ವಾನ್ ಬೆಂಗಳೂರಿನಲ್ಲಿ ಕಾರು ಡಿಲರ್ ಆಗಿದ್ದ. ಚಾಲಕ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಿದ್ದ ಪರಿಣಾಮ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯಲ್ಲಿನ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ. ಈ ಸಂಬ0ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಕೋಟೆಯ ಹಲಸಹಳ್ಳಿ ಗೇಟ್ ಬಳಿ ನಡೆದ ಮತ್ತೊಂದು ಅಪಘಾತ ಪ್ರಕರಣದಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋನಿಷಾ (೨೩) ಎಂಬ ಯುವತಿ ಸಾವನ್ನಪ್ಪಿ ಬೈಕ್ ಸವಾರ ಪ್ರೀತಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಒಡಿಸಾ ಮೂಲದ ಮೋನಿಷಾ ಹಾಗೂ ಪ್ರೀತಿಮ್ ನರಸಾಪುರದ ಹೊಂಡಾ ಕಂಪನಿಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಸಂದರ್ಶನ ಮುಗಿಸಿದ್ದರು. ಶನಿವಾರ ಅಗತ್ಯ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಲು ಬೈಕ್‌ನಲ್ಲಿ ಹೊರಟ್ಟಿದ್ದರು. ಇವರ ಬೈಕಿಗೆ ಹಲಸಹಳ್ಳಿ ಗೇಟ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿಯಲ್ಲಿ ಸವಾರ ಸಾವು :ದೇವನಹಳ್ಳಿಯ ರಾಣಿಕ್ರಾಸ್ ಬಳಿ ಬೈಕ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಧರ್ಮವರಂ ಮೂಲದ ಕೆ.ಜಯಪ್ರಕಾಶ್(೨೫) ಸಾವನ್ನಪ್ಪಿದ್ದಾನೆ.
ಆಂದ್ರದ ಧರ್ಮವರಂ ಮೂಲದ ಕೆ.ಜಯಪ್ರಕಾಶ್ ಸಿಪಿಯು ಕೆಟ್ಟಿದೆ ಅಂತ ಬೆಂಗಳೂರಿನ ಎಲೆಕ್ಟಿçÃನಿಕ್ ಸಿಟಿಗೆ ಹೋಗಿಮನೆಗೆ ವಾಪಸ್ ಬರುತ್ತಿದ್ದಾಗ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಬೈಕ್ ಗೆ ಲಾರಿ ಹಿಂಬದಿಯಿ0ದ ಡಿಕ್ಕಿ ಹೊಡೆಯಿತು.ಬೈಕಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

