ಬೆಂಗಳೂರು ಗ್ರಾಮಾಂತರ: ಜಿಲ್ಲೆ ಎಂ.ಸತ್ಯವಾರ ಬಳಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿ ಸರಣಿ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಐಜಿ ಲಾಭೂರಾಮ್,ಎಸ್ಪಿ ಚಂದ್ರಕಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹೊಸಕೋಟೆ ತಾಲೂಕು ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಹೊಸಕೋಟೆ ದೇವನಹಳ್ಳಿ ಎಸ್ ಟಿಆರ್ ಆರ್ ಹೆದ್ದಾರಿಯ ಎಂ.ಸತ್ಯವಾರದ ಬಳಿ ಈ ಅಪಘಾತ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಾರು ಬೈಕಿಗೆ ಡಿಕ್ಕಿ ಹೊಡೆದು ನಂತರ ಕ್ಯಾಂಟರ್ ವಾಹನಕ್ಕೆ ಡಿಕ್ಕಿಯಾಗಿದೆ.ಈವೇಳೆ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು,ಕಾರು ಕ್ಯಾಂಟರಿಗೆ ಡಿಕ್ಕಿ ಯಾದ ಪರಿಣಾಮ ಕಾರಿನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ.ಕ್ಯಾಂಟರ್ ಲಾರಿ ಹಿಂಬದಿ ಚಕ್ರಗಳು ಕಳಚಿ ಲಾರಿಮುಗಿಚಿ ಬಿದ್ದಿದೆ.ಕಾರಿ ಸಂಪೂರ್ಣ ಜಖಂಗೊಂಡಿದ್ದು,ಕಾರಿನಲ್ಲಿದ್ದ ಶವಗಳನ್ನು ಹೊರ ತೆಗೆಯಲು ಹರಸಾಹಸ ಪಡುವಂತಾಯಿತು ಎಂದು ಪ್ರತ್ಯೇಕ ದರ್ಶಿಗಳು ತಿಳಿಸಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ಐಜಿ ಲಾಭೂರಾಮ್,ಜಿಲ್ಲಾ ಎಸ್ಪಿ ಚಂದ್ರಕಾತ್,ಡಿವೈಎಸ್ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾರಿನಲ್ಲಿದ್ದವರು ಕೋಲಾರದ ಮೂಲದವರು ಎಂದು ತಿಳಿದು ಬಂದಿದ್ದು,ಕೋಲಾರದಿಂದ ದೇವನಹಳ್ಳಿ ಕಡೆ ಕಾರು ಹೊರಟ್ಟಿತ್ತು ಎನ್ನಲಾಗಿದೆ.

