Home ಅಪರಾಧಬಸ್,ಕಾರು ನಡುವೆ ಅಪಘಾತ

ಬಸ್,ಕಾರು ನಡುವೆ ಅಪಘಾತ

ಐವರು ಸಾವು,ಹೊಸಕೋಟೆ ಬಳಿ ನಡೆದ ರಸ್ತೆ ಅಪಘಾತ ಮಸುವ ಮುನ್ನವೇ ಮತ್ತೊಂದು ದುರ್ಘಟನೆ

by Editor

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ಬಳಿ ನಡೆದ ಸರಣಿ ಅಪಘಾತ ಘಟನೆ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ನಡೆದಿದೆ.ಮಾದಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂದಾಲ್ ಪ್ಲೈ ಓವರ್ ಬಳಿ ನಡೆದ ಭೀಕರ ಅಪಘಾತಕ್ಕೆ ಐವರು ಬಲಿಯಾಗಿದ್ದಾರೆ.

ಒಂದೇ ಕಾರಿನಲ್ಲಿದ್ದ ಐದು ಮಂದಿ ಯುವಕರು ಈ ಅಪಘಾತ ದಲ್ಲಿ ಸಾವನ್ನಪ್ಪಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಂದಾಲ್ ಬಳಿಯ ಪ್ಲೈ ಓವರ್ ಮೇಲೆ ದುರ್ಘಟನೆ ನಡೆದಿದೆ. ರಾತ್ರಿ 11.30 ರ ವೇಳೆಗೆ ಈ ಘಟನೆಯಾಗಿದೆ ಎನ್ನಲಾಗುತ್ತಿದ್ದು, ತುಮಕೂರು ಮಾರ್ಗದಿಂದ ಬೆಂಗಳೂರಿನ‌ ಕಡೆ ಬರುತ್ತಿದ್ದ ಇಂಡಿಕಾ ಕಾರು ಜಿಂದಾಲ್ ಬಳಿಯ ಪ್ಲೈ ಓವರ್ ಮೇಲೆ ಬರ್ತಿದ್ದಂತೆ ನಿಯಂತ್ರಣ ಸಿಗದೆ ಬಲಬದಿಯ ಡಿವೈಡರ್ ಗೆ ಡಿಕ್ಕಿಯಾಗಿದೆ.ಡಿಕ್ಕಿ ಹೊಡೆದು ಸಿನಿಮೀಯ ಶೈಲಿಯಲ್ಲಿ ಎರಡು ಪಲ್ಟಿ ಹೊಡೆದು ಕೆ ಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂ ಅಗಿ ಬಸ್ ಮುಂಬದಿ ಡ್ಯಾಮೇಜ್ ಅಗಿದೆ.

ಅದೃಷ್ಟವಶಾತ್ ಬಸ್ ನಲ್ಲಿ 42 ಮಂದಿ ಪ್ರಯಾಣಿಕರಿದ್ದು, ಯಾವುದೇ ಅಪಾಯವಾಗಿಲ್ಲ.ಆದರೆ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ.ಮನೆಯವರಿಗೆ ಏನೂ ಹೇಳದೆ ಸ್ನೇಹಿತರ ತಂಡ ಹೊರಗೆ ಹೋಗಿದ್ದು, ವಾಪಸ್ ಬರುವಾಗ ದುರ್ಘಟನೆಯಾಗಿದೆ ಎಂದು ತಿಳಿದು ಬಂದಿದೆ.

ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ‌ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ