Home ರಾಜ್ಯಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕರಡು ತಯಾರಿಸಿ

ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕರಡು ತಯಾರಿಸಿ

ಕರಡು ಅಭಿವೃದ್ದಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಸೂಚನೆ

by Editor

ಹೊಸಕೋಟೆ : ಮುಂದಿನ ದಿನಗಳಲ್ಲಿ ಮಾಡಿಬೇಕಿರುವ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ದಿ ಕರಡು ತಯಾರಿಸಿ ಅನುಷ್ಠಾನ ಮಾಡುವತ್ತ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ೨೦೨೬-೨೭ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ದಿ ಯೋಜನೆ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಹೊಸಕೊಟೆ ತಾಲೂಕು ವೇಗವಾಗಿ ಬೆಳೆಯುತ್ತಿದ್ದು,ಮಾದರಿ ತಾಲೂಕನ್ನಾಗಿ ಮಾಡುವ ಆಶಯವಿದೆ.ಮೂಲಭೂತ ಸೌರ‍್ಯಗಳ ಜತೆಗೆ ಕುಸುಮ್ ಯೋಜನೆಯಡಿ ಸೋಲಾರ್ ಅಳವಡಿಕೆ, ಸರಕಾರಿ ಗೋಮಾಳಗಳಲ್ಲಿ ಹಾಗೂ ಕೆರೆಯಂಗಳದಲ್ಲಿ ಸೋಲಾರ್ ಉತ್ಪಾದಿಸಿ ವಿಧ್ಯುತ್ ಬಳಕೆ, ಮಳೆ ನೀರು ಕೋಯ್ಲು, ನಗರದ ವ್ಯಾಪ್ತಿಯಲ್ಲಿ ೨೪ ಗಂಟೆ ವಿದ್ಯುತ್, ನೀರು ಸರಬರಾಜಿಗೆ ಕಾವೇರಿ ನೀರು, ನೂತನ ಉದ್ಯಾನವನಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮಗಳತ್ತ ಗಮನಹರಿಸಬೇಕು. ಗ್ರಾಮಗಳಿಗೆ ಉತ್ತಮ ಸಾರಿಗೆ ನೀಡುವ ನಿಟ್ಟಿನಲ್ಲಿ ಈಗಾಗಲೆ ೨ ಎಲೆಕ್ಟಿçಕ್ ಬಸ್ ಡಿಪೋ ಸ್ಥಾಪನೆಯಾಗಲಿದ್ದು, ನಂದಗುಡಿ ಹಾಗೂ ಅನುಗೊಂಡನಹಳ್ಳಿ ಭಾಗದಲ್ಲಿ ಒಂದು ಘಟಕ ಸ್ಥಾಪನೆಗೆ ಕನಿಷ್ಠ ೫ ಎಕರೆ ಸರಕಾರಿ ಜಾಗದ ಅವಶ್ಯಕತೆಯಿದೆ. ಕಂದಾಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ, ರಾಸುಗಳ ಪಾರಂ ಸ್ಥಾಪನೆ, ಬ್ರೀಡಿಂಗ್ ಕೇಂದ್ರಗಳ ಬೇಡಿಕೆ, ಮ್ಯಾಗ್ನೆಟ್ ಶಾಲೆ ಸ್ಥಾಪನೆಗೆ ಬೇಕಾದ ಕೆಪಿಎಸ್ ಮಾನದಂಡ ಅಳವಡಿಕೆಗೆ ಸಂಪನ್ಮೂಲ ಕ್ರೂಡೀಕರಣ, ಪ್ರಜಾಸೌಧ, ನಾಡಕಚೇರಿಗಳ ನಿರ್ಮಾಣ, ಹೀಗೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮುಂದಿನ ೫ ವರ್ಷಕ್ಕೂ ಮೀರಿ ತಾಲೂಕಿಗೆ ಬೇಕಾಗುವ ಸೌಲಭ್ಯಗಳ ಕರಡು ಸಿದ್ದಪಡಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಅಭಿವುದ್ದಿ ಅಧಿಕಾರಿಯಿಂದ ಎಲ್ಲಾ ಸರಕಾರಿ ಅಧಿಕಾರಿಗಳು ಕರಡು ಪ್ರತಿಯನ್ನು ತಯಾರಿಸಿ ಮುಂದಿನ ಸೋಮವಾರದೊಳಗೆ ಸಲ್ಲಿಸಬೇಕು. ತಾಲೂಕಿನ ಅಭಿವೃದ್ದಿಗೆ ಸದ್ಯ ಮೂರು ಸಾವಿರ ಕೋಟಿಯಷ್ಟು ಬೇಡಿಕೆಯಿದೆ. ಈ ಸಂಬ0ಧ ಕರಡು ಪ್ರತಿಯನ್ನು ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಒ, ಮುನಿಯಪ್ಪ, ಸರಕಾರಿ ಇಲಾಖೆ ಅಧಿಕಾರಿಗಳು ಗ್ರಾಪಂ ಪಿಡಿಒಗಳು ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ