ಹೊಸಕೋಟೆ : ೨೦೨೧-೨೨ನೇ ಸಾಲಿನಲ್ಲಿ ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ೪ ಕೋಟಿ ಅಭಿವೃದ್ದಿ ಕಾಮಗಾರಿಗಳಲ್ಲಿ ಕಳಪೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ನಾಗರಾಜ್ ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ ಬುಧವಾರ ಹೊಸಕೋಟೆ ನಗರದ ವಿವಿಧಡೆ ಲೋಕಾಯಕ್ತ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡಿದರು.
ಕೆ.ಆರ್ ರಸ್ತೆಯ ಕೆಇಬಿ ವೃತ್ತದುಂದ ಬಸವೇಶ್ವರ ವೃತ್ತದವರಿಗೆ ಮೀಡಿಯನ್ ಸರ್ಕಲ್ ಅಭಿವೃದ್ದಿ ಮತ್ತು ಪಾದಚಾರಿ ಮಾರ್ಗ ಹಾಗೂ ಗಿಡಗಳನ್ನು ನೆಡುವುದರ ಕಾಮಗಾರಿ ೯೮.೫೦ ಲಕ್ಷ,ಕೆಇಬಿ ವೃತ್ತದಿಂದ ಬಸವಣ್ಣ ಪ್ರತಿಮೆವರೆಗೆ ಎರಡು ಭಾಗಗಳಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಮೊತ್ತ ೩೦ ಲಕ್ಷ, ಕೆ.ಆರ್ ರಸ್ತೆಯ ಕೆಇಬಿ ವೃತ್ತದಿಂದ ಬಸವಣ್ಣ ಪ್ರತಿಮೆವರಿಗೆ ಪಾದಚಾರಿ ಮಾರ್ಗ, ಗ್ರೀಲ್ ವರ್ಕ್, ಗಿಡ ನೆಡುವುದು ೪೮.೨೦ ಲಕ್ಷ, ಸಿಸಿ ಚರಂಡಿ ಸರ್ಕಲ್ ನಿರ್ಮಾಣ ಇತರೆ ಉಳಿಕೆ ಅಭಿವೃದ್ದಿ ಮೊತ್ತ ೭೨ ಲಕ್ಷ ,ಮರು ಡಾಂಬರೀಕರಣ ೮೭ ಲಕ್ಷ, ಕೆ.ಆರ್ ರಸ್ತೆಯ ಜೆಸಿ ವೃತ್ತದಲ್ಲಿ ಅಭಿವೃದ್ದಿ ಕಾಮಗಾರಿಗಳ ಮೊತ್ತ ೨೦ ಲಕ್ಷ, ರಸ್ತೆ ಮಧ್ಯದಲ್ಲಿ ವಿದ್ಯುತ್ ದೀಪ ಆಳಡಿಸಲು ೧೫ ಲಕ್ಷ ವೆಚ್ಚ ಮಾಡಿದ್ದಾರೆ. ಆದರೇ. ಕಳಪೆ ಕಾಮಗಾರಿ ಮಾಡಿ ರಸ್ತೆಯಲ್ಲಿ ತೆಗದ ಮಣ್ಣು,ಕಲ್ಲು ಇವುಗಳನ್ನು ಹೊರಗಡೆ ಹಾಕಿಸದೆ ನಗರಸಭೆಯ ಪಾರ್ಕಿನಲ್ಲಿ ಹಾಕಿಸಿ ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರೋಪಿಸಿ ಅಂದಿನ ಪೌರಾಯುಕ್ತರು ಹಾಗೂ ಸಂಬ0ಧಪಟ್ಟ ಅಧಿಕಾರಿಗಳ ವಿರುದ್ದ ಹೋರಾಟಗಾರ ನಾಗರಾಜ್ ಕೆ.ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಈ ಸಂಬ0ಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದ್ದು,ತನಿಖೆಯ ಭಾಗವಾಗಿ ಲೋಕಾಯುಕ್ತ ತನಿಖಾಧಿಕಾರಿಗಳಾದ ಅರವಿಂದ್ ಜೆ.ಕಾರ್ಯಪಾಲಕ ಅಭಿಯಂತರರು ಇವರನೊಳಗೊಂಡ ಅಧಿಕಾರಿಗಳ ತಂಡ ದೂರಿನ ಸ್ಥಳಗಳನ್ನು ಪರಿಶೀಲನೆ ಮಾಡಿದರು.ಈ ವೇಳೆ ದೂರುದಾರ ಸಾಮಾಜಿಕ ಹೋರಾಟಗಾರ ನಾಗರಾಜ್ ಕೆ.ಹಾಜರಿದ್ದರು.

