Home ರಾಜ್ಯಯುವಜನತೆ ವ್ಯಸನದ ದಾಸರಾಗಬೇಡಿ

ಯುವಜನತೆ ವ್ಯಸನದ ದಾಸರಾಗಬೇಡಿ

ಹೊಸಕೋಟೆಯಲ್ಲಿ ವ್ಯಸನ ಮುಕ್ತ ಜಾಗೃತಿ ಮ್ಯಾರಥಾನ್

by Editor

ಹೊಸಕೋಟೆ : ಮಾನವ ಸಂಪನ್ಮೂಲ ದೇಶದ ಆಸ್ತಿ ಮತ್ತು ಶಕ್ತಿಯಾಗಿದ್ದು,ಅಜಾಗರೂಕತೆಯಿಂದ ಎಳೆಯ ವಯಸ್ಸಿನಿಂದಲೇ ವಂಚಕರ ಸೆಳೆತಕ್ಕೆ ಬಲಿಯಾಗಿ ವ್ಯಸನಕ್ಕೆ ದಾಸರಾಗಿ ಜೀವನ ಹಾಳುಮಾಡಿಕೊಳ್ಳಬಾರದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಎಸ್ಪಿ ನಾಗರಾಜ್ ಹೇಳಿದರು.
ನಗರದ ಶ್ರೀ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಹೊಸಕೋಟೆ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಸನ ಮುಕ್ತ ಕರ್ನಾಟಕ – ದೈಹಿಕ ಸದೃಢತೆ, ಸೈಬರ್ ತಡೆ ಸಪ್ತಾಹ ಅಂಗವಾಗಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಅರಿವಿಲ್ಲದೆ ವ್ಯಸನಗಳತ್ತ ವಾಲುತ್ತಿದ್ದಾರೆ. ವಿಶೇಷವಾಗಿ ಕಾರ್ಮಿಕರು, ಚಾಲಕರು ಹಾಗೂ ಯುವಕರು ಸಿಂಥೆಟಿಕ್ ಅಪಾಯಕಾರಿ ಡ್ರಗ್ಸ್ಗೆ ಒಳಗಾಗುತ್ತಿರುವುದು ಸುಸ್ಥಿರ ಸಮಾಜಕ್ಕೆ ಮಾರಕವಾಗಿದೆ. ಯುವ ಸಮುದಾಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ಈ ಸಪ್ತಾಹ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಹೊಸಕೋಟೆಯಲ್ಲಿ ಯುವಜನತೆಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಆಯೋಜಿಸಲಾಗಿದೆ ಎಂದರು.
ನ0ತರ ನಗರದ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸತೀಶ್ ಮಾತನಾಡಿ, ಆಕರ್ಷಣೆ ಮತ್ತು ಮೋಜುಮಸ್ತಿ ಹೆಸರಿನಲ್ಲಿ ಯುವಪೀಳಿಗೆ ವ್ಯಸನದ ಹಿಂದೆ ಬಿದ್ದು ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದೆ. ಇಂತಹ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮಗಳು ಯುವಜನತೆಗೆ ಅತ್ಯಾವಶ್ಯಕ ಎಂದು ಹೇಳಿದರು.
ಚನ್ನಭೈರೇಗೌಡ ಕ್ರೀಡಾಂಗಣದಿAದ ಆರಂಭವಾದ ಮ್ಯಾರಥಾನ್ ಕೆಇಬಿ ಸರ್ಕಲ್, ಗಂಗಮ್ಮಗುಡಿ ರಸ್ತೆ, ಮೋರ್ ಸರ್ಕಲ್, ಹೂಮಂಡಿ ಸರ್ಕಲ್, ಬಸವೇಶ್ವರ ಸರ್ಕಲ್ ಮುಂತಾದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ವ್ಯಸನ ಮುಕ್ತ ಸಮಾಜ ಕುರಿತು ಜನಜಾಗೃತಿ ಮೂಡಿಸಿದರು
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಲ್ಲೇಶ್, ನಗರ ಠಾಣೆ ಸಿಪಿಐ ಗೋವಿಂದ್, ಸೂಲಿಬೆಲೆ ಠಾಣೆ ಸಿಪಿಐ ರವಿಕುಮಾರ್, ನಂದಗುಡಿ ಠಾಣೆ ಸಿಪಿಐ ಶಾಂತರಾಮ್, ತಿರುಮಶೆಟ್ಟಿಹಳ್ಳಿ ಠಾಣೆ ಸಿಪಿಐ ಸುಂದರ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ