Home ರಾಜ್ಯಮಾ.೪ ರಂದು ಹೊಸಕೋಟೆಯಲ್ಲಿ ಪೋಡಿ ಮುಕ್ತ ಗ್ರಾಮ

ಮಾ.೪ ರಂದು ಹೊಸಕೋಟೆಯಲ್ಲಿ ಪೋಡಿ ಮುಕ್ತ ಗ್ರಾಮ

ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ

by Editor

ಹೊಸಕೋಟೆ : ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ಪೋಡಿ ಮುಕ್ತ ಗ್ರಾಮ’ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಾ. ೪ರಂದು ಬೆಳಿಗ್ಗೆ ೧೦.೩೦ಕ್ಕೆ ಚನ್ನಬೇರೆಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು
ಈ ಬಗ್ಗೆ ಪ್ರವಾಸಿ ಮಂದಿರದ ಆವರಣದಲ್ಲಿ ಮುಖಂಡರೊ0ದಿಗೆ ಸಭೆ ನಡಸಿ ಮಾತನಾಡಿದ ಶಾಸಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಹೊಸಕೋಟೆ ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳಿಂದ ೩,೫೦೦ ರೈತರಿಗೆ ಭೂಮಿಯ ಹಕ್ಕುಪತ್ರಗಳನ್ನು ಒಂದೇ ವೇದಿಕೆಯಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಜತೆಗೆ ೧೦,೦೦೦ ಸಾವಿರಕ್ಕೂ ಹೆಚ್ಚು ಭೌತಿಕ ಹಕ್ಕುಪತ್ರಗಳ ವಿತರಣೆ ನಡೆಯಲಿದ್ದು, ಹೊಸಕೋಟೆ ತಾಲೂಕಿನಲ್ಲಿ ಮಾತ್ರವೇ ಸುಮಾರು ೫,೦೦೦ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಂಚಣಿ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ವೈಯಕ್ತಿಕ ಸೌಲಭ್ಯಗಳನ್ನೂ ಫಲಾನುಭವಿಗಳಿಗೆ ನೀಡಲಾಗುತ್ತದೆ. ೯೪ಸಿ, ೯೪ಸಿಸಿ ಹಾಗೂ ೫೩ನೇ ಫಾರ್ಮ್ ಅಡಿಯಲ್ಲಿ ಸಾಗುವಳಿ ಚೀಟಿಗಳ ವಿತರಣೆ ಕೂಡ ನಡೆಯಲಿದೆ ಎಂದ ಅವರು, ಒಟ್ಟಾರೆ ಸುಮಾರು ೧೮,೦೦೦ ಫಲಾನುಭವಿಗಳಿಗೆ ತಮ್ಮ ಹಕ್ಕುಗಳನ್ನು ನೀಡುವ ಈ ಕಾರ್ಯಕ್ರಮವನ್ನು ಸರಕಾರದ ‘ಆರನೇ ಗ್ಯಾರಂಟಿ’ಯಾಗಿ ಪರಿಗಣಿಸಿರುವ ಭೂ ಮಾಲಿಕತ್ವ ಭದ್ರತಾ ಯೋಜನೆಯ ಭಾಗವಾಗಿ ಜಾರಿಗೆ ತರಲಾಗಿದೆ. ಇನ್ನೂ ಕೆಲವು ಸರ್ವೇ ನಂಬರ್‌ಗಳಲ್ಲಿ ೬-೧೦ ಮಿಸ್ಮ್ಯಾಚ್’ ಸಮಸ್ಯೆಗಳು ಹಾಗೂ ದಾಖಲೆಗಳ ಕೊರತೆ ಇರುವ ಪ್ರಕರಣಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತದೆ. ಮಿಸ್ಸಿಂಗ್ ದಾಖಲೆಗಳನ್ನು ಸಂಗ್ರಹಿಸಿ, ಡಿಸಿ ಕಚೇರಿಯ ಮೂಲಕ ತಿದ್ದುಪಡಿ ಮಾಡಿ ರೈತರಿಗೆ ಹಕ್ಕುಪತ್ರ ಒದಗಿಸಲಾಗುವುದು ಎಂದು ತಿಳಿಸಿದರು.
ರೈತರಿಗೆ ಸಾಲ ಸೌಲಭ್ಯ, ಭೂ ವಿಭಾಗ ಹಾಗೂ ಕಾನೂನುಬದ್ಧ ಹಕ್ಕುಗಳನ್ನು ಸುಗಮಗೊಳಿಸುವ ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದರು.ಸಭೆಯಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ, ಯೋಜನಾ ಪ್ರಾಧಿಕಾರ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್,ಕೇಶವಮೂರ್ತಿ,ಜಯರಾಜ್,ನಾರಾಯಣಗೌಡ,ಮೊದಲಾದವರು ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ