Home ರಾಜ್ಯಐದು ಸಂಘಗಳಿಗೆ 25 ಲಕ್ಷ ಸಾಲದ ಚೆಕ್ ವಿತರಿಸಿದ ಬಿ.ವಿ ಸತೀಶ್‌ಗೌಡರು

ಐದು ಸಂಘಗಳಿಗೆ 25 ಲಕ್ಷ ಸಾಲದ ಚೆಕ್ ವಿತರಿಸಿದ ಬಿ.ವಿ ಸತೀಶ್‌ಗೌಡರು

ಸೂಲಿಬೆಲೆ ಸಹಕಾರದಿಂದ ಎಸ್‌ಹೆಚ್‌ಜಿ ಗುಂಪುಗಳಿಗೆ ಸಾಲ ವಿತರಣೆ

by Editor

ಸೂಲಿಬೆಲೆ (ಏಪ್ರಿಲ್ 21)
ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಸಹಕಾರ ಸಂಘಗಳು ಅರ್ಥಿಕ ನೆರವಿನ ಹಸ್ತ ನೀಡುತ್ತಿದ್ದು, ಮಹಿಳೆಯರು ಈ ಸಾಲದ ಹಣವನ್ನು ಸದ್ಬಳಿಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ದಿಯನ್ನು ಹೊಂದಬೇಕು ಎಂದು ಸೂಲಿಬೆಲೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಿ.ವಿ ಸತೀಶ್‌ಗೌಡರು ಹೇಳಿದರು

ಸೂಲಿಬೆಲೆ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್‌ಹೆಚ್‌ಜಿ ಗುಂಪುಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಮಹಿಳೆಯರು ಸಬಲತೆಯನ್ನು ಹೊಂದಲು ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.ಈ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಆರ್ಥಿಕವಾಗಿ ಅಭಿವೃದ್ದಿಯನ್ನು ಹೊಂದಲು ಸಹಕಾರ ಸಂಘ ಸಾಲ ವಿತರಿಸುತ್ತಿದ್ದು, ಈ ಬಾರಿ ಐದು ಸಂಘಗಳಿಗೆ 25 ಲಕ್ಷ ಸಾಲ ನೀಡಿದೆ. ಸೂಲಿಬೆಲೆ ಸಹಕಾರ ಸಂಘದಲ್ಲಿ ೪,೨೦೭ ಜನ ಸದಸ್ಯರಿದ್ದು, ೧.೩೬ ಕೋಟಿ ಷೇರು ಬಂಡವಾಳ, ೨೫ ಕೋಟಿ ಸದಸ್ಯರ ಠೇವಣಿ ಹೊಂದಿದ್ದು, ಜಿಲ್ಲಾ ಬ್ಯಾಂಕಿನಿ0ದ ಬೆಳಸಾಲವಾಗಿ ೭.೫೦ ಕೋಟಿ ನೀಡಿದೆ. ೩೯.೯೮ ಕೋಟಿ ದುಡಿಯುವ ಬಂಡವಾಳವಿದ್ದು, ೪.೭೩ ಕೋಟಿ ಹೂಡಿಕೆಗಳಿವೆ ಎಂದರು

ಸ0ಘದ ೭೨೪ ಸದಸ್ಯರಿಗೆ ಬೆಳೆ ಸಾಲವಾಗಿ ೭.೩೧ ಕೋಟಿ, ೮.೫೫ ಕೋಟಿ ವ್ಯಾಪಾರ ಸಾಲ,  ಆಭರಣ ಸಾಲವಾಗಿ ೧೨.೯೨೬ ಕೋಟಿ, ಠೇವಣಿ ಆಧಾರ ಸಾಲಗಳು ೧.೨೩ ಕೋಟಿ ನೀಡಿದೆ.  ಠೇವಣಿ ಬಡ್ಡಿ ಧರ ಹಿರಿಯ ನಾಗರೀಕರಿಗೆ ೮.೫೦ ರಷ್ಟು ನೀಡುತ್ತಿದ್ದೇವೆ.  ರೈತರು, ಮಹಿಳೆಯರು, ಠೇವಣಿದಾರರಿಗೆ ಉತ್ತಮ ಸೇವೆ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ.  ಕಳೆದ ಹಲವು ವರ್ಷಗಳಿಂದಲೂ ಪ್ರತಿ ವರ್ಷ ಸಹಕಾರ ಸಂಘದ ಬ್ಯಾಂಕ್ ಉತ್ತಮ ಲಾಭವನ್ನು ಪಡೆಯುತ್ತಿದೆ.  ಸಹಕಾರ ಸಂಘದ ಮೇಲೆ ವಿಶ್ವಾಸವಿಟ್ಟು ಸಂಘದ ಶ್ರೇಯೋಭಿವೃದ್ದಿಗೆ ಸಹಕಾರ ನೀಡುತ್ತಿರುವ ರೈತರು, ಮಹಿಳೆಯರು, ಸದಸ್ಯರಿಗೆ ಅಭಾರಿಯಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಸಿ.ಮುನಿಯಪ್ಪ, ನಿರ್ದೇಶಕರಾದ ಬಿ.ತಮ್ಮಗೌಡ, ವಿನಯ್, ಎ.ಆರ್ ಸುರೇಶ್ ಗೌಡ, ರಾಮಚಂದ್ರಪ್ಪ, ಸೈಯಾದ್ ಮಹಬೂಬ್, ಬಿ.ಎನ್ ಮುನಿರಾಜ್, ಕಾಳಪ್ಪ, ಎನ್ ಅಂಬರೀಶ್, ಬ್ಯಾಂಕ್ ಸಿಇಒ ಎಸ್.ಕೆ.ವಸಂತ್ ಕುಮಾರ್, ವ್ಯವಸ್ಥಾಪಕ ಜಿ.ಎಂ ನಾಗೇಶ್, ಜಗ್ಗಿ,ಯುವ ಮುಖಂಡ ಹಸಿಗಾಳ ಜಗದೀಶ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.

Spread the love

You may also like

Leave a Comment

ಮನೆ ಬೀಗ ಮುರಿದು ಒಡುವೆ ದೋಚಿದ ದುಷ್ಕರ್ಮಿಗಳು   ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಹಾಗೂ ಶಂಕರಾಚಾರ್ಯರ ಜಯಂತಿ ಆಚರಣೆ   ಬಿ.ಜಿ ನಾರಾಯಣಗೌಡ ಜನ್ಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ   ಐದು ಸಂಘಗಳಿಗೆ 25 ಲಕ್ಷ ಸಾಲದ ಚೆಕ್ ವಿತರಿಸಿದ ಬಿ.ವಿ ಸತೀಶ್‌ಗೌಡರು   ಹೊಸಕೋಟೆ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ