Home ಜಿಲ್ಲೆಬಿ.ಜಿ ನಾರಾಯಣಗೌಡ ಜನ್ಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬಿ.ಜಿ ನಾರಾಯಣಗೌಡ ಜನ್ಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ

by Editor

ಸೂಲಿಬೆಲೆ: april-21
ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಸ್ಯೆಗಳಿದ್ದಲ್ಲಿ ಮೊದಲೇ ಎಚ್ಚೆತ್ತುಕೊಳ್ಳಬೇಕು.ಇದರಿಂದ ದೊಡ್ಡ ಅಪಾಯದಿಂದ ಪಾರಾಗಬಹುದು.ಇಂಥ ಉಚಿತ ಆರೋಗ್ಯ ಶಿಬಿರಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡರು ಹೇಳಿದರು

ಸೂಲಿಬೆಲೆ ನ್ಯೂ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ ಆವರಣದಲ್ಲಿ ಯುವ ನಾಯಕ ಬಿ.ಜಿ ನಾರಾಯಣಗೌಡರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ದೇವರಿದ್ದಂತೆ. ಅವರು ನೀಡುವ ಮಾತ್ರೆ,ಔಷಧಗಳನ್ನು ನಿಯಮಿತವಾಗಿ ಪಡೆಯುವುದರಿಂದ ಖಾಯಿಲೆ ಗುಣ ಹೊಂದಲು ಸಾಧ್ಯ.ಜನರ ಮನೆ ಬಾಗಿಲಿಗೆ ಬಂದು ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುವಂತೆ ಕೆಲಸವನ್ನು ಮಾಡಲಾಗುತ್ತಿದೆ.ಜನರು ಇಂಥ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಯಾವುದೇ ರೋಗದ ಲಕ್ಷಣಗಳು ಕಂಡ ಬಂದರೂ ಅದನ್ನು ಮುಂಚಿತವಾಗಿ ಅರಿತುಕೊಂಡು ಖಾಯಿಲೆ ದೊಡ್ಡ ಮಟ್ಟಕ್ಕೆ ಬೆಳೆಯದಂತೆ ತಡೆಯಲು ಸಾಧ್ಯ. ವೈದ್ಯ ಲೋಕದಲ್ಲಿ ಅಧುನಿಕ ತಂತ್ರಜ್ಞಾನ ಇರುವುದರಿಂದ ಚಿಕಿತ್ಸೆ ಸುಲಭ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದರು.

ಜೇನುಗೂಡು ಟ್ರಸ್ಟ್,ಎಂವಿಜೆ ಆಸ್ಪತ್ರೆ,ಗ್ರಾಪಂ,ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರ ಸಹಯೋಗದಲ್ಲಿ ಶಿಬಿರ ನಡೆಸಲಾಯಿತು.

ನ್ಯೂ ಆಕ್ಸ್ ಫರ್ಡ್ ಶಾಲೆ ಸಂಸ್ಥಾಪಕ ಜಿ.ಎಂ ನಾಗೇಶ್, ಪ್ರಾಂಶುಪಾಲ ವೆಂಕಟೇಶ್, ಗ್ಯಾರೆಂಟಿ ಯೋಜನೆ ಸಮಿತಿ ನಿರ್ದೇಶಕ ಹೇಮಣ್ಣ, ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್ ಉಮೇಶ್, ಶಾಲಾ ಮುಖ್ಯ ಶಿಕ್ಷಕಿ ರಾಧಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ಧನ್ ರೆಡ್ಡಿ, ಸಾಧಪ್ಪನಹಳ್ಳಿ ರೆಡ್ಡಪ್ಪ, ಜೇನುಗೂಡು ಟ್ರಸ್ಟ್ ಸಂಘಟನೆ ಕರ‍್ಯದರ್ಶಿ ಎಸ್.ಕೆ ವಸಂತ್ ಕುಮಾರ್, ನಿರ್ದೇಶಕರಾದ ಸೈಯಾದ್ ಮಹಬೂಬ್, ಜೀಯಾವುಲ್ಲಾ, ತರಬಹಳ್ಳಿ ಹರೀಶ್, ನವಾಜ್ ಖಾನ್, ಎಂವಿಜೆ ಆಸ್ಪತ್ರೆಯ ಡಾ.ಮಂಗಳ ಮೊದಲಾದವರು ಹಾಜರಿದ್ದರು.

Spread the love

You may also like

Leave a Comment

ಮನೆ ಬೀಗ ಮುರಿದು ಒಡುವೆ ದೋಚಿದ ದುಷ್ಕರ್ಮಿಗಳು   ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಹಾಗೂ ಶಂಕರಾಚಾರ್ಯರ ಜಯಂತಿ ಆಚರಣೆ   ಬಿ.ಜಿ ನಾರಾಯಣಗೌಡ ಜನ್ಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ   ಐದು ಸಂಘಗಳಿಗೆ 25 ಲಕ್ಷ ಸಾಲದ ಚೆಕ್ ವಿತರಿಸಿದ ಬಿ.ವಿ ಸತೀಶ್‌ಗೌಡರು   ಹೊಸಕೋಟೆ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ