Home Uncategorizedಶೌಚಾಲಯದಲ್ಲಿ ಮಗು ಹೆತ್ತಳು… ಅದೇ ಶೌಚಾಲಯದಲ್ಲಿ ಕೊಂದಳು

ಶೌಚಾಲಯದಲ್ಲಿ ಮಗು ಹೆತ್ತಳು… ಅದೇ ಶೌಚಾಲಯದಲ್ಲಿ ಕೊಂದಳು

ದೇವನಹಳ್ಳಿಯ ಬಳಿ ಖಾಸಗಿ ಕಂಪನಿಯಲ್ಲಿ ಘಟನೆ

by Editor

ದೇವನಹಳ್ಳಿ : ಶೌಚಾಲಯ ದಲ್ಲಿ ಜನಿಸಿದ ತನ್ನ ಮಗುವನ್ನೆ ತಾಯಿಯೊಬ್ಬಳು ಕತ್ತು ಕೊಯ್ದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ ಕೃತ್ಯದ ಬಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ

ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ ಈ ಘಟನೆ ನಡೆದಿದೆ.ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಇಂದು

ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಮಗು ಆಚೆ ಬಂದಿದೆ.ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಈ ವಿಷಯ ಹೊರಗಿನ ಸಮಾಜಕ್ಕೆ ತಿಳಿಯಬಾರದು ಎಂದು  ಭಯಬಿದ್ದು  ಆ ಮಹಾ ತಾಯಿ ಮಗುವಿನ ಜೀವ ತೆಗೆದಿದ್ದಾಳೆ.ಹೊಟ್ಟೆಯಿಂದ ಹೊರ ಬಂದ

ನವಜಾತ ಶಿಶುವಿನ ಕತ್ತು ಕೊಯ್ದು  ಶೌಚಾಲಯದಲ್ಲಿ ಎಸೆದು  ಹೊರ ಬಂದಿದ್ದಾಳೆ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ ಬಂದಿದೆ.ರೇಣುಕಾ ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಳು.

ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ಆಕೆಯನ್ನು  ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ‌ ಕೈಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.

Spread the love

You may also like

Leave a Comment

ಸರಕಾರಿ ಉರ್ದು ಪ್ರೌಢಶಾಲೆಗೆ ಶೇ.೧೦೦ ರಷ್ಟು ಫಲಿತಾಂಶ   ಸ್ಥಳೀಯ ಜನರ ಧ್ವನಿಯಾಗಲು ಪಂಚಾಯತ್ ರಾಜ್ ಇಲಾಖೆ ಸಹಕಾರಿ   ಭಾರತ್ ಐಕಾನಿಕ್ ಅವಾರ್ಡ್ಗೆ ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆ   ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ   ಯಶಸ್ ಗೌಡಗೆ 611 ಅಂಕ