
ಬೆ0ಗಳೂರು ಗ್ರಾಮಾಂತರ : ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-೧ ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. ೯೫.೬೨% ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು ೨೭೮ ಪ್ರೌಢಶಾಲೆಗಳಲ್ಲಿನ ಒಟ್ಟು ೧೩,೦೮೩ ವಿದ್ಯಾರ್ಥಿಗಳ ಹಾಜರಾಗಿದ್ದು, ೧೨,೫೧೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ ೯೫.೬೨ ರಷ್ಟು ಫಲಿತಾಂಶ ಪಡೆದಿದ್ದಾರೆ.
ಒಟ್ಟು ೬೬೩೯ ಬಾಲಕರು ಹಾಜರಾಗಿದ್ದು ೬೨೪೭ ಬಾಲಕರು ತೇರ್ಗಡೆಯಾಗುವ ಮೂಲಕ ಶೇ. ೯೪.೧೦ ರಷ್ಟು ಫಲಿತಾಂಶ ಪಡೆದಿದ್ದಾರೆ. ೬೪೪೪ ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ೬೨೬೩ ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ ೯೭.೧೯ ರಷ್ಟು ಫಲಿತಾಂಶ ದೊರಕಿದೆ. ನಗರ ಪ್ರದೇಶದ ೪೭೭೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೪೪೯೬ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. ೯೪.೧೬ ರಷ್ಟು ಫಲಿತಾಂಶ ದೊರೆತಿದೆ.
ಗ್ರಾಮೀಣ ಪ್ರದೇಶದ ೮೩೦೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೮೦೧೪ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ ೯೬.೪೬ ರಷ್ಟು ಫಲಿತಾಂಶ ಸಿಕ್ಕಿದೆ.
ತಾಲ್ಲೂಕು ವಾರು ಫಲಿತಾಂಶ
ದೇವನಹಳ್ಳಿ
ಹಾಜರಾದವರು-೩೦೯೧
ಉತ್ತೀರ್ಣರಾದವರು-೨೯೫೬
ಶೇಕಡ: ೯೫.೬೩%
ದೊಡ್ಡಬಳ್ಳಾಪುರ
ಹಾಜರಾದವರು-೩೫೫೩
ಉತ್ತೀರ್ಣರಾದವರು-೩೪೧೬
ಶೇಕಡ: ೯೬.೧೪%
ಹೊಸಕೋಟೆ
ಹಾಜರಾದವರು-೩೫೭೮
ಉತ್ತೀರ್ಣರಾದವರು-೩೪೭೯
ಶೇಕಡ: ೯೭.೨೩%
ನೆಲಮಂಗಲ
ಹಾಜರಾದವರು-೨೮೬೧
ಉತ್ತೀರ್ಣರಾದವರು-೨೬೫೯
ಶೇಕಡ:೯೨.೯೪%
ಶಾಲಾವಾರು ಫಲಿತಾಂಶ
* ಸರ್ಕಾರಿ ಶಾಲೆ-೯೪.೩೫%
* ಅನುದಾನಿತ-೯೦.೧೪%
* ಅನುದಾನ ರಹಿತ-೯೮.೨೭%
೬೨೫ ಕ್ಕೆ ೬೨೨ ಅಂಕ ಪಡೆದ ಜಿಲ್ಲೆಯ ಮೂವರು ಟಾಪರ್‌ಗಳು
೧. ಹೇಮ ಜಿ. ಹೆಚ್, ಡಾ. ಬಿ.ಆರ್ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆ. ಮಧುರೆ ದೊಡ್ಡಬಳ್ಳಾಪುರ.
೨. ವಿಷ್ಣು ರೆಡ್ಡಿ. ಪಿ, ನ್ಯೂ ಹಾರಿಜನ್ ಶಾಲೆ, ಹೊಸಕೋಟೆ ತಾಲ್ಲೂಕು.
೩. ಸಹನಾ.ಎ, ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆ, ಕಂಟನಕುAಟೆ, ದೊಡ್ಡಬಳ್ಳಾಪುರ ತಾಲ್ಲೂ

